ಬೆಂಗಳೂರು: ರಾಜ್ಯದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ ದಿನವೂ ದಾಖಲೆ ವೇಗದಲ್ಲಿ ಏರಿಕೆಯಾಗುತ್ತಿದೆ, ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ ಸೋಂಕಿಗೆ ಒಳಗಾಗಿರುವವರ ಸಂಖ್ಯೆ ಬರೋಬ್ಬರಿ 63.
ಇಂದು ಮಧ್ಯಾಹ್ನದವರೆಗೆ ರಾಜ್ಯದಲ್ಲಿ 42 ಸೋಂಕು ಪ್ರಕರಣ ವರದಿಯಾಗಿತ್ತು. ಈಗ ಮತ್ತೆ 21 ಪ್ರಕರಣಗಳು ದೃಢವಾಗಿದ್ದು, ಅದರಲ್ಲಿ 12 ಪ್ರಕರಣಗಳು ದಾವಣಗೆರೆಯಲ್ಲೇ ದೃಢವಾಗಿದೆ.
ದಾವಣಗೆರೆಯಲ್ಲಿ ಆರು ಪ್ರಕರಣಗಳು ಅಹಮದಾಬಾದ್ ಪ್ರಯಾಣದ ಹಿನ್ನಲೆಯುಳ್ಳವರಿಂದ ದೃಢವಾಗಿದ್ದರೆ, ಸೋಂಕಿತ ಸಂಖ್ಯೆ 696ರ ಸಂಪರ್ಕದಿಮದ ನಾಲ್ಕು ಜನರಿಗೆ , 695ರ ಸಂಪರ್ಕದಿಂದ ಇಬ್ಬರಿಗೆ ಸೋಂಕು ತಾಗಿದೆ.
ಕೋಲಾರದಲ್ಲಿ ಐದು ಸೋಂಕು ಪ್ರಕರಣಗಳು ದೃಢವಾಗಿದೆ. ಅದರಲ್ಲಿ ಇಬ್ಬರು ಸೋಂಕು ಮೂಲ ಪತ್ತೆ ಮಾಡಲಾಗುತ್ತಿದೆ. ಉಳಿದಂತೆ ಇಬ್ಬರು ಒರಿಸ್ಸಾದಿಂದ ಬಂದಿದ್ದು, ಓರ್ವ ಚೆನ್ನೈನಿಂದ ಬಂದವರಾಗಿದ್ದಾರೆ.
ಗದಗದಲ್ಲಿ ಮೂರು ಪ್ರಕರಣ ದೃಢವಾಗಿದ್ದು, ಓರ್ವ ಅಹಮದಾಬಾದ್ ನಿಂದ ಬಂದವರಾಗಿದ್ದಾರೆ. ಉಳಿದ ಇಬ್ಬರು ಸೋಂಕಿತ ಸಂಖ್ಯೆ 514ರ ಸಂಪರ್ಕದಿಂದ ಸೋಂಕುಗೆ ಒಳಗಾಗಿದ್ದಾರೆ. ಬೆಂಗಳೂರು ನಗರದಲ್ಲಿ ಓರ್ವ ಸೋಂಕಿತನಾಗಿದ್ದು, ಸಂಪರ್ಕ ಪತ್ತೆ ಮಾಡಲಾಗುತ್ತಿದೆ.
ರಾಜ್ಯದಲ್ಲಿ ಒಟ್ಟು ಕೋವಿಡ್ 19 ಸೋಂಕಿತರ ಸಂಖ್ಯೆ 925ಕ್ಕೆ ಏರಿಕೆಯಾಗಿದೆ. ಅವುಗಳ ಪೈಕಿ 433 ಜನರು ಗುಣಮುಖರಾಗಿದ್ದು, ಮತ್ತು 31 ಜನರು ಮರಣ ಹೊಂದಿದ್ದಾರೆ.