Advertisement

ಜಮಾತ್‌ಗೆ 16 ಸಾವಿರ ಮಂದಿ ಭೇಟಿ ; ಪೊಲೀಸ್‌, ಆರೋಗ್ಯ ಅಧಿಕಾರಿಗಳ ತಪಾಸಣೆಯಿಂದ ದೃಢ

08:23 AM May 05, 2020 | Hari Prasad |

ಲಕ್ನೋ/ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯ ನಿಜಾಮುದ್ದೀನ್‌ನಲ್ಲಿರುವ ತಬ್ಲಿಘಿ ಜಮಾತ್‌ನ ಪ್ರಧಾನ ಕಚೇರಿಗೆ ಮಾ.13ರಿಂದ 24ರ ಅವಧಿಯಲ್ಲಿ 16,500 ಮಂದಿ ಭೇಟಿ ನೀಡಿದ್ದರು.

Advertisement

ಈ ಬಗ್ಗೆ ದೆಹಲಿ ಪೊಲೀಸರ ವರದಿ ದೃಢಪಡಿಸಿದೆ ಎಂದು ‘ದ ಹಿಂದು ಸ್ತಾನ್‌ ಟೈಮ್ಸ್‌’ ವರದಿ ಮಾಡಿದೆ. ಪೊಲೀಸ್‌ ಅಧಿಕಾರಿಯೊಬ್ಬರು ಪತ್ರಿಕೆಗೆ ನೀಡಿದ ಮಾಹಿತಿ ಪ್ರಕಾರ ಮೊಬೈಲ್‌ ಫೋನ್‌ ಮಾಹಿತಿ ಮತ್ತು ಸಂದರ್ಶನ ಮೂಲಕ ಮಾಹಿತಿ ಸಂಗ್ರಹಿಸಲಾಗಿದೆ.

ಇದರ ಜತೆಗೆ ದೆಹಲಿ ಸರಕಾರದ ಅಧಿಕಾರಿ ನೀಡಿದ ಮಾಹಿತಿ ಪ್ರಕಾರ ಕನಿಷ್ಠ ಒಂದು ಸಾವಿರ ಮಂದಿ ಹೊರಗಿನ ರಾಜ್ಯದವರು ತಬ್ಲಿಘಿ ಜಮಾತ್‌ನ ಪ್ರಧಾನ ಕಚೇರಿಗೆ ಭೇಟಿ ನೀಡಿದ್ದರು.

16, 500 ಮಂದಿಯ ಪೈಕಿ ಕೆಲವರು ಆರು ಅಂತಸ್ತಿನ ಜಮಾತ್‌ನ ಪ್ರಧಾನ ಕಚೇರಿಯಲ್ಲಿ ವಾಸ್ತವ್ಯ ಹೂಡಿದ್ದರೆ, ಇತರರು ನವದೆಹಲಿಯ ಬೇರೆ ಬೇರೆ ಪ್ರದೇಶಗಳಲ್ಲಿದ್ದರು.

ದೆಹಲಿ ಸಂಚಾರ ಪೊಲೀಸ್‌ ವಿಭಾಗ ಸೇರಿದಂತೆ ರಾಷ್ಟ್ರ ರಾಜಧಾನಿಯ ಪೊಲೀಸ್‌ ವಿಭಾಗ, ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬಂದಿ ಈ ಕಾರ್ಯದಲ್ಲಿ ಭಾಗವಹಿಸಿದ್ದರು. ಈ ವರದಿಯನ್ನು ಸರಕಾರಕ್ಕೆ ಈಗಾಗಲೇ ಸಲ್ಲಿಸಲಾಗಿದೆ.

Advertisement

ಕೆಲವರಿಗೆ ಸ್ವಯಂ ಪ್ರೇರಣೆಯಿಂದ ಪ್ರತ್ಯೇಕವಾಗಿರಲು, ಮತ್ತಿರರಿಗೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಲು ಈ ಸಂದರ್ಭದಲ್ಲಿ ಸೂಚಿಸಲಾಗಿತ್ತು. ಮಾ.29, ಮಾ.31ರಂದು ಆರೋಗ್ಯ ಇಲಾಖೆ 2,300 ಮಂದಿಯನ್ನು ಅಲ್ಲಿಂದ ತೆರವುಗೊಳಿಸಿತ್ತು. ಎಪ್ರಿಲ್‌ ಮೊದಲ ವಾರದಲ್ಲಿ ನವದೆಹಲಿಯ ವಿವಿಧ ಭಾಗಗಳಲ್ಲಿ 200 ಮಂದಿ ಇದ್ದದ್ದು ಪತ್ತೆಯಾಗಿತ್ತು.  ನವದೆಹಲಿಯಲ್ಲಿ ಆ ಕೇಂದ್ರವೇ ಹಾಟ್‌ಸ್ಪಾಟ್‌ ಆಗಿ ಪರಿವರ್ತಿತವಾಗಿದೆ.

ಸೋಂಕು ಹರಡುವುದರಲ್ಲಿ ತಬ್ಲೀಘಿ ಜಮಾತ್‌ ಸದಸ್ಯರ ಪಾತ್ರ ದೊಡ್ಡದು. ಅವರ ಕೃತ್ಯ ಕ್ಷಮೆಗೆ ಅರ್ಹವಲ್ಲ. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ.
– ಯೋಗಿ ಆದಿತ್ಯನಾಥ್‌, ಉ.ಪ್ರ.ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next