Advertisement

ಜೈಲಿನಲ್ಲಿ ನನ್ನನ್ನು ಹಿಂಸಿಸಿದರು: ಪ್ರಿಯಾಂಕಾ ಶರ್ಮಾ

01:55 AM May 16, 2019 | mahesh |

ಪಶ್ಚಿಮ ಬಂಗಾಲ ಸಿಎಂ ಮಮತಾ ಬ್ಯಾನರ್ಜಿಯ ಮೀಮ್‌ ರಚಿಸಿ ಜಾಲತಾಣಗಳಲ್ಲಿ ಹರಿಬಿಟ್ಟ ಕಾರಣ 5 ದಿನಗಳ ಕಾಲ ಬಂಧಿತರಾಗಿದ್ದ ಬಿಜೆಪಿ ಯುವ ಮೋರ್ಚಾ ನಾಯಕಿ ಪ್ರಿಯಾಂಕಾ ಶರ್ಮಾ ಜೈಲಿನಲ್ಲಿ ತಮ್ಮನ್ನು ಹಿಂಸಿಸಲಾಯಿತು ಎಂದು ಆರೋಪಿಸಿದ್ದಾರೆ. ಕ್ಷಮಾ ಪಣೆ ಪಡೆದು ಅವರನ್ನು ಬಿಡುಗಡೆ ಮಾಡಲು ಸುಪ್ರೀಂ ಕೋರ್ಟ್‌ ಮಂಗಳವಾರವೇ ಆದೇಶಿಸಿತ್ತು. ಆದರೂ ಅವರ ಬಿಡುಗಡೆ 18 ಗಂಟೆ ತಡವಾಯಿತು. ಬುಧವಾರ ಬೆಳಗ್ಗೆ 9:40ಕ್ಕೆ ಅವರನ್ನು ಬಿಡುಗಡೆ ಮಾಡ ಲಾಯಿತು. ಬಳಿಕ ಸುದ್ದಿಗೋಷ್ಠಿ ನಡೆಸಿದ ಅವರು, ಜೈಲಿನಲ್ಲಿ ಜೈಲರ್‌ಗಳು ನನ್ನನ್ನು ಎಳೆ ದಾಡಿ ದರು. ಒಳಗಡೆ ಸ್ವಲ್ಪವೂ ಸ್ವತ್ಛತೆ ಇಲ್ಲ. ಮಹಿಳೆಯರ ಶೌಚಾಲಯಗಳಲ್ಲಿ ನೀರೇ ಇಲ್ಲ ಎಂದು ಆರೋಪಿಸಿದ್ದಾರೆ. ಜತೆಗೆ, “ನನಗೆ ಯಾವ ಪಶ್ಚಾತ್ತಾಪವೂ ಇಲ್ಲ. ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ’ ಎಂದೂ ಅವರು ಹೇಳಿದ್ದಾರೆ.

Advertisement

ಸರಕಾರಕ್ಕೆ ತರಾಟೆ: ಇದೇ ವೇಳೆ, ಶರ್ಮಾರ ಬಿಡುಗಡೆ ವಿಳಂಬ ಮಾಡಿದ್ದಕ್ಕೆ ಪ.ಬಂಗಾಲ ಸರಕಾರವನ್ನು ಬುಧವಾರ ಸುಪ್ರೀಂ ಕೋರ್ಟ್‌ ತರಾಟೆಗೆ ತೆಗೆದು ಕೊಂಡಿದೆ. ಮೇಲ್ನೋಟಕ್ಕೆ ಪ್ರಿಯಾಂಕಾ ಶರ್ಮಾರ ಬಂಧನವು ನಿರಂಕುಶದಂತೆ ಕಾಣುತ್ತಿದೆ ಎಂದೂ ಅಭಿಪ್ರಾಯಪಟ್ಟಿದೆ. ಆಕೆಯನ್ನು ಕೂಡಲೇ ಬಿಡುಗಡೆ ಮಾಡದಿದ್ದರೆ, ಪರಿಣಾಮ ಎದುರಿಸಬೇಕಾದೀತು ಎಂದೂ ಎಚ್ಚರಿಕೆ ನೀಡಿದೆ. ಆಗ ಸರಕಾರದ ಪರ ವಕೀಲರು, ಶರ್ಮಾರನ್ನು ಬೆಳಗ್ಗೆಯೇ ಬಿಡುಗಡೆ ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next