ಬೆಂಗಳೂರು: ನಗರದಲ್ಲಿ ಮತ್ತೂಬ್ಬ ಮಹಿಳೆ ತನ್ನ ಪ್ರಿಯಕರನ ಜತೆ ಸೇರಿ ಮಗಳ ಮೇಲೆ ಹಲ್ಲೆ ನಡೆಸಿ ಕ್ರೌರ್ಯ ಮೆರೆದಿರುವ ಘಟನೆ ನಡೆದಿದೆ.
ಪತಿ ಮೇಲಿನ ಕೋಪಕ್ಕೆ ಪ್ರಿಯಕರನೊಂದಿಗೆ ಸೇರಿ ತನ್ನ 10 ವರ್ಷದ ಮಗಳಿಗೆ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಿದ್ದಾಳೆ. ದೌರ್ಜನ್ಯಕ್ಕೊಳಗಾದ ಬಾಲಕಿಯ ತಂದೆ ಇಮ್ರಾನ್‌ಖಾನ್ ಎಂಬುವರು ನೀಡಿದ ದೂರಿನ ಮೇರೆಗೆ ಜಗಜೀವನ್ ರಾಮ್ ನಗರ ಠಾಣೆ ಪೊಲೀಸರು, ಚಿಕ್ಕಬಸ್ತಿ ಆಯಿಷಾ ಬೀಬಿ, ಸಲೀಂ ಮತ್ತು ಜಬೀರ್ ಖಾನ್ ಎಂಬುವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಇಮ್ರಾನ್ ಖಾನ್ 2013ರಲ್ಲಿ ಆಯಿಷಾಳನ್ನು ಮದುವೆಯಾಗಿದ್ದು, ದಂಪತಿಗೆ ಒಂದು ಹೆಣ್ಣು, ಒಂದು ಗಂಡು ಮಗು ಇದೆ. ಕೌಟುಂಬಿಕ ವಿಚಾರವಾಗಿ ದಂಪತಿ ದೂರಾಗಿದ್ದು, ಕೋಟ್ ìನಲ್ಲಿ ವಿಚಾರಣೆ ಹಂತದಲ್ಲಿದೆ. ತಾಯಿ ಜತೆಯೇ ಇಬ್ಬರು ಮಕ್ಕಳು ವಾಸವಾಗಿದ್ದಾರೆ. ಈ ಮಧ್ಯೆ ಆಯಿಷಾಗೆ ಸಲೀಂ ಎಂಬಾತನ ಜತೆ ಗೆಳೆತನವಾಗಿದ್ದು ಆತ ಆಗಾಗ್ಗೆ ಮನೆಗೆ ಬಂದಾಗ ಬಾಲಕಿ ಮೇಲೆ ಹಲ್ಲೆ ನಡೆಸಿ, “ತಾನು ಮನೆಗೆ ಬರುವ ವಿಚಾರವನ್ನು ನಿನ್ನ ತಂದೆಗೆ ಹೇಳದಂತೆ ಎಚ್ಚರಿಕೆ ನೀಡಿದ್ದ. ಸಿಗರೇಟ್‌ನಿಂದ ಎಡಗೈ ಕೂಡ ಸುಟ್ಟಿದ್ದಾನೆ ಎಂದು ದೂರಿನಲ್ಲಿ ತಿಳಿಸಲಿದೆ.
ಅಲ್ಲದೆ, ಜಬೀರ್ ಎಂಬಾತ, “ಅಮ್ಮನನ್ನು ನಿತ್ಯ ಹೊರಗಡೆ ಕರೆದೊಯ್ದು, ಕೆಲ ಹೊತ್ತಿನ ಬಳಿಕ ಮನೆಗೆ ಬಿಟ್ಟು ಹೋಗುತ್ತಾರೆ. ಈ ವಿಚಾರವನ್ನು ಯಾರಿಗೂ ಹೇಳಬೇಡ. ಒಂದು ವೇಳೆ ಯಾರಿಗಾದರೂ ಹೇಳಿದರೆ, ನೀನು ಮತ್ತು ನಿನ್ನ ತಂದೆಯನ್ನು ಕೊಲ್ಲುತ್ತೇನೆ’ ಎಂದು ಬೆದರಿಕೆ ಹಾಕಿದ್ದಾನೆ ಎಂದು ಪುತ್ರಿ ಬಳಿ ಹೇಳಿಕೊಂಡಿದ್ದಾಳೆ ಎಂದು ಇಮ್ರಾನ್ ಖಾನ್ ತಿಳಿಸಿದ್ದಾನೆ. ಈ ಮಧ್ಯೆ ಫೆ.24ರಂದು ಪುತ್ರಿ ಮತ್ತು ಪುತ್ರನ್ನು ದೂರುದಾರರು ಹೊರಗಡೆ ಕರೆದೊಯ್ದು ತಿಂಡಿ ಕೊಡಿಸಿ ಬಳಿಕ ಮನೆಗೆ ಬಿಟ್ಟು ಹೋಗಿದ್ದಾರೆ. ಅದೇ ದಿನ ರಾತ್ರಿ ಆಯಿಷಾ ಮಗಳ ಮೇಲೆ ಹಲ್ಲೆ ನಡೆಸಿ, ಕೈಯನ್ನು ಕಚ್ಚಿದ್ದಾಳೆ. ಈ ವಿಚಾರವನ್ನು ಪುತ್ರಿ ವಿಡಿಯೋ ಕಾಲ್ ಮಾಡಿ ನನಗೆ ತಿಳಿಸಿದ್ದಾಳೆ ಎಂದು ತಿಳಿದ್ದಾನೆ. ವಾರದ ಹಿಂದೆ ತಾಯಿಯೊಬ್ಬಳು ತನ್ನ ಪ್ರಿಯಕ ರನ ಜತೆ ಸೇರಿ 4 ವರ್ಷದ ಮಗುವಿನ ಮೇಲೆ ಹಲ್ಲೆ ನಡೆಸಿದಲ್ಲದೆ, ಮರ್ಮಾಂಗ ಗಾಯಗೊಳಿಸಿದ್ದಳು. ಗಿರಿನಗರ ಪೊಲೀಸರು ತಾಯಿ, ಆಕೆಯ ಪ್ರಿಯಕರನನ್ನು ಬಂಧಿಸಿದ್ದರು.