Advertisement

ಆಮೆ, ಹರಳು ಮಾರುತ್ತಿದ್ದ ಮೂವರ ಬಂಧನ

11:21 AM Oct 11, 2017 | |

ಬೆಂಗಳೂರು: ಕೆ.ಆರ್‌. ರಸ್ತೆಯಲ್ಲಿರುವ ಉಮಿನೋ ಪೆಟ್‌ ಮಳಿಗೆಯಲ್ಲಿ ಅಕ್ರಮವಾಗಿ ಆಮೆ ಹಾಗೂ ಹರಳುಗಳನ್ನು ಮಾರಾಟ ಮಾಡುತ್ತಿದ್ದ ಚೆನ್ನೈ ಮೂಲದ ಮೂವರನ್ನು ಸಿಐಡಿ ಅರಣ್ಯ ವಿಭಾಗದ ಅಧಿಕಾರಿಗಳು ಮಂಗಳವಾರ ಬಂಧಿಸಿದ್ದಾರೆ.

Advertisement

ಚೆನ್ನೈ ಮೂಲದ ವೆಲೈಕೋನಾ (45) ಗಣೇಶನ್‌ (27) ಹಾಗೂ ಚಿನ್ನರಾಯುಡು (20) ಬಂಧಿತರು. ಮತ್ತೂಬ್ಬ ಪ್ರಮುಖ ಆರೋಪಿ ಹಾಗೂ ಉಮಿನೋ ಪೆಟ್‌ ಮಳಿಗೆಯ ಮಾಲೀಕ ರಾಜುನಾರಾಯಣಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಆರೋಪಿಗಳಿಂದ ಎರಡು ನಕ್ಷತ್ರ ಆಮೆಗಳು ಮತ್ತು 460 ಕೆ.ಜಿ.ಹರಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಿಐಡಿ ಅರಣ್ಯ ಘಟಕದ ಅಧಿಕಾರಿಗಳು ಮಾಹಿತಿ ನೀಡಿದರು.

ಇನ್ನು ರಾಜುನಾರಾಯಣ ಮಾಲೀಕತ್ವದಲ್ಲಿ ಚೆನ್ನೈ ಮತ್ತು ಬೆಂಗಳೂರಿನಲ್ಲಿ ಎರಡು ಪೆಟ್‌ ಮಳಿಗೆಗಳಿದ್ದು, ಬೆಂಗಳೂರಿನ ಮಳಿಗೆಯ ನಿರ್ವಹಣೆಯನ್ನು ವೆಲೈಕೋನಾಗೆ ವಹಿಸಲಾಗಿದೆ. ಇದರಲ್ಲಿ ಗಣೇಶನ್‌ ಮತ್ತು ಚಿನ್ನರಾಯುಡು ಕೆಲಸ ಮಾಡುತ್ತಿದ್ದಾರೆ. ಈ ಮೊದಲು ಈಜಿಪುರದಲ್ಲಿ ಮಳಿಗೆ ನಡೆಸುತ್ತಿದ್ದ ಆರೋಪಿಗಳು, ಕಳೆದ ಮೂರು ತಿಂಗಳ ಹಿಂದೆ ಕೆ.ಆರ್‌. ರಸ್ತೆಗೆ ಸ್ಥಳಾಂತರಿಸಿದ್ದಾರೆ.

ಮಳಿಗೆಯಲ್ಲಿ ಚೆನ್ನೈನಿಂದ ತರುವ ಆಮೆ ಹಾಗೂ ಹರಳುಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದ ಸಿಐಡಿ ಅಧಿಕಾರಿಗಳು ಮಂಗಳವಾರ ಬೆಳಗ್ಗೆ ದಾಳಿ ನಡೆಸಿ ಮೂವರನ್ನು ಬಂಧಿಸಿದ್ದಾರೆ. ಸದ್ಯದ ಮಾಹಿತಿ ಪ್ರಕಾರ, ಚೆನ್ನೈನಲ್ಲಿರುವ ಮಳಿಗೆಯಲ್ಲಿ ಈ ದಂಧೆ ಅವ್ಯಹತವಾಗಿ ನಡೆಯುತ್ತಿದ್ದು, ಈ ಬಗ್ಗೆ ಕ್ರಮಕೈಗೊಳ್ಳುವಂತೆ ತಮಿಳುನಾಡಿನ ಪೊಲೀಸರಿಗೆ ಮಾಹಿತಿ ನೀಡಲಾಗಿದೆ ಎಂದು ಅಧಿಕಾರಿಯೊಬ್ಬರು “ಉದಯವಾಣಿ’ಗೆ ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next