Advertisement
ರವಿವಾರ ಸಂಜೆ ಮಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿತ್ತು. ದಕ್ಷಿಣ ಕನ್ನಡ ಜಿಲ್ಲೆಯ ಗುತ್ತಿಗಾರು, ಪಂಬೆತ್ತಾಡಿ, ಪಂಜ, ಕಲ್ಮಡ್ಕ, ಮರ್ಕಂಜ, ಸುಳ್ಯ, ಉರುವಾಲು, ಕಬಕ, ವಿಟ್ಲ, ವೇಣೂರು, ಬಂಟ್ವಾಳ, ಸುಬ್ರಹ್ಮಣ್ಯ, ಕಡಬ, ಪುತ್ತೂರುಗಳಲ್ಲಿ ಸಂಜೆ ಸಿಡಿಲು ಸಹಿತ ಉತ್ತಮ ಮಳೆಯಾಗಿದೆ. ಸುಳ್ಯ ಆಸುಪಾಸಿನ ಹಲವು ಕಡೆಗಳಲ್ಲಿ ಧಾರಾಕಾರ ಮಳೆ ಸುರಿದಿದೆ.
Related Articles
ಬೆಳ್ತಂಗಡಿ ತಾಲೂಕಿನಾದ್ಯಂತ ರವಿವಾರ ಸಂಜೆ ಬಳಿಕ ಉತ್ತಮ ಮಳೆ ಯಾಗಿದ್ದು, ಮುಂಡಾಜೆ, ಕಕ್ಕಿಂಜೆ, ಚಾರ್ಮಾಡಿ, ನೆರಿಯ ಸುತ್ತಮುತ್ತ ಆಲಿಕಲ್ಲು ಮಳೆಯಾಗಿದೆ. ಗುಡುಗು ಮಿಂಚು ಸಹಿತ ಎರಡು ತಾಸಿಗೂ ಅಧಿಕ ನಿರಂತರ ಮಳೆ ಸುರಿದಿದೆ. ಸಣ್ಣ ಗಾತ್ರದ ಆಲಿಕಲ್ಲುಗಳು ಬಿದ್ದಿದ್ದು, ಗಾಳಿ ಮಳೆಗೆ ಜನ ಗಾಬರಿಗೊಂಡಿದ್ದರು. ಉಜಿರೆ, ಧರ್ಮಸ್ಥಳ, ಗುರುವಾಯನಕೆರೆ, ಕುಕ್ಕಾವು, ಮಿತ್ತಬಾಗಿಲು, ಮಡಂತ್ಯಾರು, ಗೇರುಕಟ್ಟೆ ಸುತ್ತಮುತ್ತ ಉತ್ತಮ ಮಳೆಯಾಗಿದೆ. ಗುಡುಗು ಸಹಿತ ಮಳೆಯಿಂದಾಗಿ ಮಿಲಾದ್ ರ್ಯಾಲಿಗೆ ಅಡ್ಡಿಯಾಯಿತು.
Advertisement
ಹೆಬ್ರಿ: ಹೆಬ್ರಿ ಸುತ್ತಮುತ್ತ ರವಿವಾರ ಸಂಜೆ ಉತ್ತಮ ಮಳೆ ಆಗಿದೆ. ಗುಡುಗು ಸಹಿತ ಸುಮಾರು ಒಂದು ತಾಸು ಮಳೆ ಸುರಿದಿದೆ. ಆಗುಂಬೆ, ಸೋಮೇಶ್ವರ, ಕುಚ್ಚಾರು ಮುದ್ರಾಡಿ ಸುತ್ತಮುತ್ತಲಿನ ಪರಿಸರದಲ್ಲಿ ಮಳೆಯಾಗಿದೆ.