ಬೆಂಗಳೂರು: ನಗರದ ಹಲವೆಡೆ ಬುಧವಾರ ಧಾರಾಕಾರ ಮಳೆಯಾಗಿದ್ದು ಶ್ರೀನಗರ, ಶ್ರೀನಿವಾಸನಗರ ಮತ್ತು ಜಯನಗರದ ನಾಲ್ಕನೇ ಬ್ಲಾಕ್‌ನಲ್ಲಿ ಹಲವು ಮರಗಳು ಧರೆಗುರುಳಿವೆ. ಮಳೆ ಹಾಗೂ ಗಾಳಿಗೆ ನಗರದ ಹಲವೆಡೆ ರಂಬೆ-ಕೊಂಬೆಗಳು ಬಿದ್ದಿವೆ. ಆದರೆ, ಯಾವುದೇ ಅನಾಹುತಗಳು ಸಂಭವಿಸಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಬುಧುವಾರ ಮಧ್ಯಾಹ್ನದಿಂದ ಮೆಜೆಸ್ಟಿಕ್, ಕೆ.ಆರ್.ಮಾರುಕಟ್ಟೆ, ಬಸವನಗುಡಿ, ಲಾಲ್‌ಬಾಗ್, ಆರ್.ಆರ್.ನಗರ, ಮಲ್ಲೇಶ್ವರ, ವಿಜಯನಗರ,ಯಶವಂತಪುರ, ಕೆ.ಆರ್.ಪುರ, ಮಹದೇವಪುರ ಸೇರಿದಂತೆ ಹಲವೆಡೆ ಒಂದು ಗಂಟೆಗೂ ಹೆಚ್ಚು ಕಾಲ ಮಳೆಯಾದ ಪರಿಣಾಮ ವಾಹನ ಸವಾರರು ಪರದಾಡುವಂತಾಗಿತ್ತು. ಪ್ರಮುಖ ಜಂಕ್ಷನ್‌ಗಳಲ್ಲಿ ದಟ್ಟಣೆ ಉಂಟಾಗಿತ್ತು.
ಎಲ್ಲೆಲ್ಲಿ ಎಷ್ಟು ಮಳೆ: ಗೋಪಾಲಪುರ 9.5 ಮಿ.ಮೀ ಹುಸ್ಕೂರು 8.5 ಮಿ.ಮೀ, ಮಾಚೋಹಳ್ಳಿ9.5 ಮಿ.ಮೀ, ಮಾದಾವರ25.5 ಮಿ.ಮೀ, ಸೊಂಡೆಕೊಪ್ಪ 9.5 ಮಿ.ಮೀ, ಲಕ್ಷ್ಮೀಪುರ 15.5 ಮಿ.ಮೀ, ಶ್ರೀಕಂಠಪುರ 21 ಮಿ.ಮೀ, ರಾಜಾನುಕುಂಟೆ 12.5 ಮಿ.ಮೀ, ಬಾಗಲೂರು 9ಮಿ.ಮೀ, ಜ್ಞಾನಭಾರತಿ 18 ಮಿ.ಮೀ, ದೊರೆಸಾನಿ ಪಾಳ್ಯ 3 ಮಿ.ಮೀ, ಪಿದ್ಯಾಪೀಠ 11ಮಿ.ಮೀ, ಕೆಂಗೇರಿ 4 ಮಿ.ಮೀ, ವಿದ್ಯಾರಣ್ಯಪುರ 23 ಮಿ.ಮೀ, ಲಕ್ಕಸಂದ್ರ 8.5 ಮಿ.ಮೀ, ರಾಜರಾಜೇಶ್ವರಿ ನಗರ 8.5 ಮಿ.ಮೀ, ಕುಮಾರಸ್ವಾಮಿ ಬಡಾವಣೆ 5.2 ಮಿ.ಮೀ,
ಬಸವನಗುಡಿ 6.5 ಮಿ.ಮೀ, ಅಂಜನಾಪುರ 6.5 ಮಿ.ಮೀ, ಬಿಟಿಎಂ ಬಡಾವಣೆ 8.5 ಮಿ.ಮೀ, ನಂದಿನಿ ಬಡಾವಣೆ 18 ಮಿ.ಮೀ, ಕಾಟನಪೇಟೆ 10 ಮಿ.ಮೀ, ಕೆ.ಆರ್‌ಪುರ ಮತ್ತುಮಹದೇವಪುರ 12.5 ಮಿ.ಮೀ, ಚಾಮರಾಜಪೇಟೆ 12 ಮಿ.ಮೀ, ಅಗ್ರಹಾರ 8ಮಿ.ಮೀ, ದಾಸರಹಳ್ಳಿ 13 ಮಿ.ಮೀ, ಲಕ್ಕಸಂದ್ರ 5.5 ಮಿ.ಮೀ, ಕೋನಪ್ಪನ ಅಗ್ರಹಾರ 6 ಮಿ.ಮೀ, ಪೀಣ್ಯ ಕೈಗಾರಿಕಾ ಪ್ರದೇಶ 8 ಮಿ.ಮೀ, ನಾಯಂಡಹಳ್ಳಿ 9 ಮಿ.ಮೀ, ಬೆನ್ನಿಗಾನಹಳ್ಳಿ 8 ಮಿ.ಮೀ ಮಳೆಯಾಗಿರುವುದು ವರದಿಯಾಗಿದೆ.