ಇದೇ ಮೊದಲ ಬಾರಿಗೆ ಕನ್ನಡ ಸಂಘ ಟೊರೊಂಟೊ ಮಾ. 7ರಂದು ವಿಶ್ವ ಮಹಿಳಾ ದಿನವನ್ನು ಆಚರಿಸಿತ್ತು. ಕೆನಡಾದ ಆರ್ಡರ್ ಆಫ್ ಕೆನಡಾ ಪ್ರಶಸ್ತಿ ವಿಜೇತ ಕನ್ನಡಿಗರಾದ ಲತಾ ಪಾದ ಹಾಗೂ ಕೆನಡಾದ ಕನ್ನಡಿಗ ಸಂಸದ ಚಂದ್ರ ಆರ್ಯ ಮತ್ತು ಅವರ ಪತ್ನಿ ಸಂಗೀತ ಆರ್ಯ ಅವರು ದೀಪ ಬೆಳಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕನ್ನಡ ಸಂಘದ ಅಧ್ಯಕ್ಷರಾದ ನಾಗೇಂದ್ರ ಕೃಷ್ಣಮೂರ್ತಿ ಅವರು ಅತಿಥಿಗಳನ್ನು ಸ್ವಾಗತಿಸುತ್ತಾ, ಈ ವರ್ಷದ ಮಹಿಳಾ ದಿನಾಚರಣೆಯ “THEME CHOSEN TO CHALLENGE’ ಗೆ ಅನುಗುಣ ವಾಗಿ ತಮ್ಮದೇ ಆದ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಮೂವರು ಗಣ್ಯ ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.
ಮಿಸ್ಸಿಸ್ಸಾಗ ಮೇಯರ್ ಬೋನಿ ಕ್ರಾಂಬಿ ಅವರು ಅನಿವಾರ್ಯ ಕಾರಣದಿಂದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗದ ಕಾರಣ, ಮಹಿಳೆಯರ ಸಾಮರ್ಥ್ಯದ ಬಗ್ಗೆ ಅವರು ಮಾತನಾಡಿದ ವೀಡಿಯೋ ಸಂದೇಶವನ್ನು ಪ್ರಸಾರ ಮಾಡಲಾಯಿತು.
ಅನಂತರ ಟೊರೊಂಟೊ ಕನ್ನಡ ಸಂಘದ ಮುಂದಾಳತ್ವ ವಹಿಸಿದ್ದ ಮಾಜಿ ಮಹಿಳಾ ಅಧ್ಯಕ್ಷರು ಮಹಿಳಾ ದಿನದ ಸಂದೇಶದೊಂದಿಗೆ ಎಲ್ಲರಿಗೂ ಶುಭ ಕೋರಿದರು.
Related Articles
ಲತಾ ಪಾದ ಅವರು ಮಾತನಾಡಿ, ತಮ್ಮ ಜೀವನದ ದುರಂತ ಘಟನೆಗಳನ್ನು ನೆನಪಿಸಿಕೊಂಡು ನೃತ್ಯಕಲೆ ಹೇಗೆ ಜೀವನದಲ್ಲಿ ವಿಶ್ವಾಸ ಹಾಗೂ ಧೈರ್ಯ ತುಂಬಲು ಸಹಾಯ ಮಾಡಿತು ಎಂಬುದನ್ನು ತಿಳಿಸಿದರು. ಬಳಿಕ ಲತಾ ಪಾದ ಅವರ ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನ ನಡೆಯಿತು.
ಕಲಾವಿದೆ ಮಾಳವಿಕಾ ಅವಿನಾಶ್ ಮಾತನಾಡಿ, ತಮ್ಮ ರಾಜಕೀಯ ಚಟುವಟಿಕೆಗಳು ಹಾಗೂ ಮಹಿಳೆಯರು ಪ್ರಾಚೀನ ಕಾಲದಿಂದಲೂ ಸಂಸತ್ ಕಾರ್ಯ ಗಳಲ್ಲಿ ಹೇಗೆ ಭಾಗವಹಿಸು ತ್ತಿದ್ದರು ಎಂಬುವುದಕ್ಕೆ ಅನುಭವ ಮಂಟಪದ ಶರಣೆಯರ ಉದಾಹರಣೆಗಳನ್ನು ವಿವರಿಸಿದರು.
ಕನ್ನಡ ಬ್ಲಾಗ್ ಖ್ಯಾತಿಯ ಪ್ರಜ್ಞಾ ಜೈನ್ ಮಾತನಾಡಿ, ಗೃಹಿಣಿಯಾಗಿ, ತಾಯಿಯಾಗಿ ಮನೆಯÇÉೇ ಕುಳಿತು ಕುಟುಂಬವನ್ನು ನೋಡಿಕೊಂಡು ತಮ್ಮದೇ ಆದ ಯೂಟ್ಯೂಬ್ ಚಾನೆಲ್‌ನಲ್ಲಿ ಕೆನಡಾದ ಮಾಹಿತಿಗಳನ್ನು ಕನ್ನಡ ದÇÉೇ ಜನರಿಗೆ ತಿಳಿಸಿ ಅದರಿಂದ ಉಪಯೋಗ ವಾಗುವಂತೆ ಸಹಾಯ ಮಾಡುತ್ತಿ¨ªಾರೆ ಎಂಬುದನ್ನು ವಿವರಿಸಿದರು.
ಮಾತನಾಡಿದ ಸಂಸದ ಚಂದ್ರ ಆರ್ಯ ಅವರು ಕೆನಡಾದಲ್ಲಿ ಮಹಿಳೆಯರಿಗೆ ಸರಕಾರದಿಂದ ಸಿಗುವ ಸೌಲಭ್ಯಗಳ ಕುರಿತು ವಿವರಿಸಿದರು.
ಕಾರ್ಯಕ್ರಮದಲ್ಲಿ ಯುವ ಸಮಿತಿ ಸದಸ್ಯರು ದೇಶವಿದೇಶಗಳಲ್ಲಿರುವ ಪ್ರಸಿದ್ಧ ಮಹಿಳೆಯರ ಸಾಹಸ ಹಾಗೂ ವ್ಯಕ್ತಿತ್ವದ ಕುರಿತು ಪರದೆಯ ಮೇಲೆ ದೃಶ್ಯಗಳ ಮೂಲಕ ಪ್ರಸ್ತುತ ಪಡಿಸಿದರು. ಸತೀಶ್ ವೆಂಕೋಬ್ ವಂದಿಸಿದರು. ಬೆಳಗ್ಗೆ 10 ರಿಂದ ಮಧ್ಯಾಹ್ನ 12.30ರವರೆಗೆ ನಡೆದ ಕಾರ್ಯಕ್ರಮವನ್ನು ಜೂಮ…, ಫೇಸ್‌ಬುಕ್, ಯೂಟ್ಯೂಬ್‌ಗಳಲ್ಲಿ ನೇರಪ್ರಸಾರ ಮಾಡಲಾಯಿತು.
– ಕಾವ್ಯಾ ಹೆಗಡೆ