Advertisement

ರಸ್ತೆ ಮೇಲೆ ಹರಿದ ಸೀರೆ ಹೊಳೆ

07:20 AM Aug 29, 2017 | Harsha Rao |

ಪುತ್ತೂರು: ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಬಡಗನ್ನೂರು ಗ್ರಾಮದ ಪಟ್ಟೆ – ಈಶ್ವರಮಂಗಲ ರಸ್ತೆಯ ಎರಡೂ ಬದಿ ಯಲ್ಲಿನ ಸೀರೆ ಹೊಳೆ ತುಂಬಿ ಹರಿದು ರಸ್ತೆ ಜಲಾವೃತಗೊಂಡು ಸಂಚಾರಕ್ಕೆ ಅಡಚಣೆ ಯಾಯಿತು. ಈ ರಸ್ತೆ ಪಟ್ಟೆಯಿಂದ ಈಶ್ವರಮಂಗಲಕ್ಕೆ ಸಂಪರ್ಕ ಕಲ್ಪಿಸು ತ್ತಿದ್ದು,  ಸಂಚಾರಕ್ಕೆ ಪ್ರಮುಖ ರಸ್ತೆಯಾಗಿದೆ.

Advertisement

ಕಳೆದ ವರ್ಷವೂ ಇಲ್ಲಿ ರಸ್ತೆ ಜಲಾವೃತಗೊಂಡಿತ್ತು. ಈ ವರ್ಷ ಪ್ರಥಮ ಬಾರಿಗೆ ಜಲಾವೃತಗೊಂಡಿದೆ. ಕಾಲುಸಂಕದಿಂದ ಕೆಲಭಾಗದಲ್ಲಿ ರಸ್ತೆ ಇರುವುದರಿಂದ ಹಾಗೂ ಕಿಂಡಿ ಅಣೆಕಟ್ಟಿನಲ್ಲಿ ಹೂಳು ತುಂಬಿರುವುದು ಹೆಚ್ಚಿನ ನೀರು ಶೇಖರಣೆಯಾಗಲು ಕಾರಣ.

ಮುಂಡೋಳೆ, ಅಂಬಟೆಮೂಲೆ ಪರಿಸರದಿಂದ ವಿದ್ಯಾರ್ಥಿಗಳ ಸಹಿತ ದಿನಂಪ್ರತಿ ನೂರಾರು ಮಂದಿ ಪಟ್ಟೆಗೆ ಬಂದು ನಗರವನ್ನು ಸಂಪರ್ಕಿಸುತ್ತಾರೆ. ಮಧ್ಯಾಹ್ನದ ಅವಧಿಯಲ್ಲಿ ಜನಸಂಚಾರ ಕಡಿಮೆಯಿದ್ದುದರಿಂದ ಹೆಚ್ಚಿನ ತೊಂದರೆಯಾಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next