Advertisement

ನಗರಸಭೆ ಹಿಂಭಾಗದ ತೋಡಿಗೆ ಹರಿದ ಕಚೇರಿ ಶೌಚ ತ್ಯಾಜ್ಯ

12:15 AM Nov 08, 2019 | Team Udayavani |

ಉಡುಪಿ: ನಗರಸಭೆ ಕಚೇರಿ ಸಿಬಂದಿ ಹಾಗೂ ಸಾರ್ವಜನಿಕರು ಉಪಯೋಗಿಸುವ ಶೌಚಾಲಯದಿಂದ ಶೌಚ ತ್ಯಾಜ್ಯವು ನಗರಸಭೆ ಹಿಂಭಾಗದಲ್ಲಿರುವ ತೆರೆದ ತೋಡಿನಲ್ಲಿ ಹರಿಯುತ್ತಿದೆ. ಇದರಿಂದ ಈ ಪರಿಸರದಲ್ಲಿ ಹಲವಾರು ದಿನಗಳಿಂದ ಗಬ್ಬುವಾಸನೆ ಕಂಡುಬರುವುದಲ್ಲದೇ ಈ ಸ್ಥಳ ಸೊಳ್ಳೆಗಳ ಆಶ್ರಯ ತಾಣವಾಗಿದೆ.

Advertisement

ನಗರ ಕೇಂದ್ರ ವಾಚನಾ ಲಯದ ಪಕ್ಕದಿಂದ ನಿತ್ಯಾನಂದ ಮಂದಿರಕ್ಕೆ ಸಂಪರ್ಕಿಸುವ ರಸ್ತೆಯಲ್ಲಿ ಸಾರ್ವಜನಿಕರು ಸಂಚರಿ ಸುತ್ತಿದ್ದು, ಮೂಗು ಮುಚ್ಚಿಕೊಂಡು ತಿರುಗಾಡ ಬೇಕಾದ ಪರಿಸ್ಥಿತಿ ಹಾಗೂ ಪರಿಸರದಲ್ಲಿ ಡೆಂಗ್ಯೂ, ಮಲೇರಿಯಾ ಮಾರಕ ಸಾಂಕ್ರಮಿಕ ರೋಗಗಳು ಹರಡುವ ಭೀತಿಯು ಎದುರಾಗಿದೆ.

ಈ ಬಗ್ಗೆ ಸಾರ್ವಜನಿಕರು ಸಂಬಂಧಪಟ್ಟವರಿಗೆ ಮೌಖೀಕವಾಗಿ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಸಾರ್ವಜನಿಕರ ತೊಂದರೆಗೆ ಸಂಬಂಧಪಟ್ಟ ಅಧಿಕಾರಿಗಳು ಸ್ಪಂದಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಪದಾಧಿಕಾರಿಗಳಾದ ನಿತ್ಯಾನಂದ ಒಳಕಾಡು, ತಾರಾನಾಥ್‌ ಮೇಸ್ತ ಶಿರೂರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next