Advertisement

ಲಾಕ್ ಡೌನ್ ನಲ್ಲಿ ಕ್ರೇಜ್ ಹುಟ್ಟಿಸಿದ ಟಾಪ್ ಆನ್ ಲೈನ್ ಗೇಮ್ಸ್ ಗಳ ಮಾಹಿತಿ ಇಲ್ಲಿದೆ !

09:31 AM Apr 29, 2020 | Mithun PG |

ಲಾಕ್ ಡೌನ್ ಪರಿಣಾಮದಿಂದ ಜನರು ಇಂದು  ತಮ್ಮ ಬೇಸರವನ್ನು ಕಳೆಯಲು ಮನರಂಜನೆಯ ಮೊರೆಹೋಗಿದ್ದಾರೆ. ಸಿನಿಮಾಗಳನ್ನು ವೀಕ್ಷಿಸುವುದು, ಪುಸ್ತಕಗಳನ್ನು ಓದುವುದು ಮುಂತಾದ ಹಲವಾರು ಹವ್ಯಾಸಗಳನ್ನು ರೂಢಿಸಿಕೊಂಡಿದ್ದಾರೆ. ಕೆಲವರು ಅದರಲ್ಲೂ ವಿಶೇಷವಾಗಿ ಯುವಜನಾಂಗ ತಮ್ಮ ಸ್ಮಾರ್ಟ್ ಫೋನ್ ಗಳಲ್ಲಿ ಆನ್ ಲೈನ್ ಗೇಮಿಂಗ್ ಗಳ ಮೊರೆ ಹೋಗಿದ್ಧಾರೆ. ಇದರಲ್ಲಿ ಹಲವು ಜನರು ಏಕಕಾಲಕ್ಕೆ ಆಡಬಹುದಾದ್ದರಿಂದ ವಿಶೇಷ ಆಕರ್ಷಣೆಯನ್ನು ಪಡೆದಿವೆ.

Advertisement

ಈಗಾಗಲೆ ಲೂಡೋ ಕಿಂಗ್, ಪಬ್ ಜೀ  ಮುಂತಾದ ಗೇಮ್ ಗಳು ಜನರಲ್ಲಿ ಭಾರೀ  ಕ್ರೇಜ್ ಹುಟ್ಟಿಸಿವೆ. ಅವುಗಳೊಂದಿಗೆ ಮತ್ತಷ್ಟು ಹೊಸ ಗೇಮ್‌ಗಳು ಟ್ರೆಂಡ್‌ ಮೂಡಿಸಿವೆ. ಬಹುತೇಕ ಗೇಮ್‌ಗಳು ಸಿಂಗಲ್‌ ಪ್ಲೇಯರ್, ಮಲ್ಟಿಪ್ಲೇಯರ್ ಹಾಗೂ ಆನ್‌ಲೈನ್‌ ಮೂಲಕ ಆಡುವ ಸೌಲಭ್ಯ ಪಡೆದಿವೆ. ಅಂತಹ ಕೆಲವು ಗೇಮ್ ಗಳ ಪರಿಚಯ ಇಲ್ಲಿದೆ.

ಲುಡೊ ಕಿಂಗ್ ಗೇಮ್ ಅಥವಾ ಲೂಡೋ ಕ್ಲಬ್ :  ಲಾಕ್‌ಡೌನ್‌ ಅವಧಿಯಲ್ಲಿ ಭಾರಿ ಜನಪ್ರಿಯವಾದ  ಏಕೈಕ ಆಟವಿದು. ಇದನ್ನು ಎಲ್ಲಾ ವಯೋಮಾನದವರೂ ಆಡಬಹುದಾಗಿದ್ದು ಸಿಂಗಲ್ ಪ್ಲೇಯರ್, ಮಲ್ಟಿಪ್ಲೇಯರ್, ಹಾಗೂ ಆನ್‌ಲೈನ್ ಪ್ಲೇಯರ್ಸ್‌ ಜೊತೆಗೆ ಆಟವನ್ನು ಆಡಬಹುದಾದ ಆಯ್ಕೆಗಳಿವೆ. ಗಮನಿಸಬೇಕಾದ ಅಂಶವೆಂದರೇ ಇದನ್ನು ಚಾಂಪಿಯನ್ ಷಿಪ್ ಮಾದರಿಯಲ್ಲಿ ಆಡಬಹುದು. ಅಂದರೇ ನಿರ್ದಿಷ್ಟ ವ್ಯಕ್ತಿಗಳು ಸಮಯ ನಿಗದಿಪಡಿಸಿಕೊಂಡು  ಕ್ವಾಲಿಫೈಯರ್, ಲೀಗ್, ಸೆಮಿಫೈನಲ್, ಫೈನಲ್ ಎಂಬ ರೀತಿಯಲ್ಲಿ ಆಡಿ ಬಹುಮಾನವನ್ನು ಘೋಷಿಸಿಕೊಳ್ಳಬಹುದು.

ಕ್ಯಾರಮ್ ಪೂಲ್(Carrom Pool): ಮನೆಯಲ್ಲಿ ಕೇರಂ ಆಟವನ್ನು ಆಡಿರುತ್ತೀರಾ.  ಅದೇ ಮಾದರಿಯಲ್ಲಿ  ಮೊಬೈಲ್ ಕೇರಂ ಗೇಮ್ ಇದಾಗಿದ್ದು, ಮಲ್ಟಿಪ್ಲೇಯರ್‌ ಸೇರಿ ಆಡಬಹುದಾಗಿದೆ. ಇಲ್ಲಿ ಮನರಂಜನೆಗೆ ಮತ್ತು ಕುತೂಹಲತೆಗೆ ಯಾವುದೇ ಕೊರತೆಯಿರುವುದಿಲ್ಲ.

Advertisement

ಫಿಫಾ ಸಾಕರ್ (FIFA Soccer):  ಅತ್ಯುತ್ತಮ ಗ್ರಾಫಿಕ್ಸ್ ಮತ್ತು ವಾಸ್ತವಿಕ ಫುಟ್ ಬಾಲ್ ನಂತೆ ಭಾಸವಾಗುವ ರೀತಿಯಲ್ಲಿ ಈ ಗೇಮ್ ರೂಪಿಸಲಾಗಿದೆ.  ಇದು ಮೊಬೈಲ್ ಮತ್ತು ಪಿಸಿ ಎರಡಕ್ಕೂ ಸಪೋರ್ಟ್ ಮಾಡುತ್ತದೆ.  ರಿಯಲ್‌ ಟೈಮ್‌ನಲ್ಲಿ 11 v 11 ಮಲ್ಟಿಪ್ಲೇಯರ್ ಮೋಡ್‌ನಲ್ಲಿ ಭಾಗವಹಿಸಲು ಅನುಮತಿಸುತ್ತದೆ.

ಕ್ಲಾಷ್ ಆಫ್ ಕ್ಲಾನ್ಸ್: ಇದು ಥೇಟ್ ಯುದ್ಧ ಮಾದರಿಯ ಆಟವಾಗಿದ್ದು, ತಮ್ಮ ತಂಡದೊಂದಿಗೆ ಸಾಮ್ರಾಜ್ಯವನ್ನು ನಿರ್ಮಿಸಿ ಮತ್ತು ಅದನ್ನು  ಅದನ್ನು  ಶತ್ರುಗಳಿಂದ ರಕ್ಷಿಸುವ  ತಂತ್ರಭರಿತವಾದ ಆಟವಾಗಿದೆ.

ಇದೇ ಮಾದರಿಯಲ್ಲಿ ಫೋರ್ಟ್ನೈಟ್(Fortnite) ಎಂಬ ಗೇಮ್ ಕೂಡ ಯುದ್ಧದ ರಾಯಲ್ ಪರಿಕಲ್ಪನೆಯನ್ನು ಪರಿಚಯಿಸುತ್ತದೆ.  ಗ್ರಾಫಿಕ್ಸ್, ಸ್ಪರ್ಶ,  ಆಪ್ಟಿಮೈಸ್ಡ್ ನಿಯಂತ್ರಣಗಳು, ನಿಯಮಿತ ಅಪ್‌ಡೇಟ್‌ಗಳು ಆಟದ ಕ್ರೇಜ್‌ ಅನ್ನು ಆಸಕ್ತಿದಾಯಕ ಮಾಡಿವೆ.

ಕಾರ್ಡ್ ಗೇಮ್ ಇಷ್ಟಪಡುವವರಿಗೆ ಯುನೊ ಗೇಮ್‌(UNO):  ಆಟಗಾರರು ತಂಡ ರಚಿಸಿಕೊಳ್ಳಬಹುದು  ಮತ್ತು ಇದು ಸಾಮಾನ್ಯರಿಗೂ ಅರ್ಥವಾಗುವಂತಿದೆ.  ಇದಲ್ಲದೆ ಕಾಲ್ ಆಫ್ ಡ್ಯುಟಿ ಗೇಮ್ ಕೂಡ ಅತೀ ಹೆಚ್ಚಿನ  ಆಕರ್ಷಣೆ ಪಡೆದಿದ್ದು ಇದರಲ್ಲಿ ಟೀಮ್ ಡೆತ್‌ಮ್ಯಾಚ್, ಡೊಮಿನೇಶನ್, ಸರ್ಚ್ ಆಂಡ್ ಡಿಸ್ಟ್ರಾಯ್ ಸೇರಿದಂತೆ ಹಲವು ಗೇಮ್‌ ಮೋಡ್ ಗಳಿವೆ.

-ಸಂಗ್ರಹ

Advertisement

Udayavani is now on Telegram. Click here to join our channel and stay updated with the latest news.

Next