Advertisement

ಎನ್‌ಕೌಂಟರ್‌ : ಹಿಜ್ಬುಲ್‌ ಟಾಪ್‌ ಉಗ್ರ ಅಲ್‌ ತಾಫ್, ಉಮರ್‌ ಹತ್ಯೆ

04:46 PM Aug 29, 2018 | Team Udayavani |

ಶ್ರೀನಗರ : ಭದ್ರತಾ ಪಡೆಗಳಿಗೆ ದೊರಕಿರುವ ಮಹತ್ವದ ಸೀಮೋಲ್ಲಂಘನದಲ್ಲಿ  ಹಿಜ್ಬುಲ್‌ ಸಂಘಟನೆಯ ಟಾಪ್‌ ಉಗ್ರರಾದ ಅಲ್‌ ತಾಫ್ ಅಹ್ಮದ್‌ ದಾರ್‌ ಮತ್ತು ಉಮರ್‌ ರಶೀದ್‌ ವಾನಿ, ಜಮ್ಮು ಕಾಶ್ಮೀರದ ಅನಂತನಾಗ್‌ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಹತರಾಗಿರುವುದು ವರದಿಯಾಗಿದೆ. 

Advertisement

ಖಾನಾಬಾಲ್‌ ಪ್ರದೇಶದಲ್ಲಿ ಇಂದು ಬುಧವಾರ ನಡೆದ ಎನ್‌ಕೌಂಟರ್‌ನಲ್ಲಿ ಹಿಜ್ಬುಲ್‌ನ ಇಬ್ಬರು ಟಾಪ್‌ ಉಗ್ರರಾದ ಅಲ್‌ ತಾಫ್ ಅಹ್ಮದ್‌ ದಾರ್‌ ಅಲಿಯಾಸ್‌ ಅಲ್‌ ತಾಫ್ ಕಚ್‌ರೂ ಮತ್ತು ಆತನ ಸಹಚರನಾದ ಉಮರ್‌ ರಶೀದ್‌ ವಾನಿ ಹತರಾದರು ಎಂದು ಭದ್ರತಾ ಮೂಲಗಳು ತಿಳಿಸಿವೆ. 

ಬಿನ್‌ಪೋರಾ ಗ್ರಾಮವನ್ನು ಭದ್ರತಾ ಪಡೆಗಳು ಇಂದು ನಸುಕಿನ ವೇಲೆ ಸುತ್ತುವರಿದುದನ್ನು ಅನುಸರಿಸಿ ಉಗ್ರರೊಂದಿಗೆ ಗುಂಡಿನ ಕಾಳಗ ನಡೆಯಿತು ಎಂದು ಮೂಲಗಳು ತಿಳಿಸಿವೆ. 

Advertisement

Udayavani is now on Telegram. Click here to join our channel and stay updated with the latest news.

Next