Advertisement

ಉನ್ನತ ನ್ಯಾಯಾಧೀಶರು ಸರಕಾರದ ಪಕ್ಷಪಾತಿಗಳಲ್ಲ: ಸುಪ್ರೀಂ ಕೋರ್ಟ್‌

03:51 PM Oct 05, 2017 | Team Udayavani |

ಹೊಸದಿಲ್ಲಿ : ”ಉನ್ನತ ನ್ಯಾಯಾಲಯದ ನ್ಯಾಯಾಧೀಶರು ಸರಕಾರದ ಪರ ಎಂಬ ಭಾವನೆ ತಪ್ಪು; ದಿನಂಪ್ರತಿಯ ಕಲಾಪಗಳಲ್ಲಿ ಉನ್ನತ ನ್ಯಾಯಾಲಯ ಸರಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಲೇ ಇರುವುದನ್ನು ಕಾಣಬಹುದಾಗಿದೆ” ಎಂದು ಸುಪ್ರೀಂ ಕೋರ್ಟ್‌ ಇಂದು ಗುರುವಾರ ಹೇಳಿದೆ.

Advertisement

ಸುಪ್ರೀಂ ಕೋರ್ಟ್‌ ಬಾರ್‌ ಅಸೋಸಿಯೇಶನ್‌ನ ಮಾಜಿ ಅಧ್ಯಕ್ಷರು ಟಿವಿ ಸಂದರ್ಶನವೊಂದರಲ್ಲಿ “ಉನ್ನತ ನ್ಯಾಯಾಲಯದ ಕೆಲವು ನ್ಯಾಯಾಧೀಶರು ಸರಕಾರದ ಪಕ್ಷಪಾತಿಗಳಾಗಿದ್ದಾರೆ” ಎಂದು ಆರೋಪಿಸಿರುವುದಕ್ಕೆ ವರಿಷ್ಠ ನ್ಯಾಯಮೂರ್ತಿ ದೀಪಕ್‌ ಮಿಶ್ರಾ, ಜಸ್ಟಿಸ್‌ ಎ ಎಂ ಖಾನ್‌ವಿಲ್‌ಕರ್‌ ಮತ್ತು ಜಸ್ಟಿಸ್‌ ಡಿ ವೈ ಚಂದ್ರಚೂಡ್‌ ಅವರನ್ನು ಒಳಗೊಂಡ ಪೀಠ ತೀವ್ರ ಆಕ್ಷೇಪ ವ್ಯಕ್ತಪಡಿಸಿತು. 

“ಉನ್ನತ ನ್ಯಾಯ ಪೀಠದ ನ್ಯಾಯಾಧೀಶರು ಸರಕಾರದ ಪಕ್ಷಪಾತಿಗಳಾಗಿ ಕೆಲಸ ಮಾಡುತ್ತಾರೆಯೇ ಇಲ್ಲವೇ ಎಂಬುದನ್ನು ಯಾರೇ ಆದರೂ ಕೋರ್ಟಿಗೆ ಬಂದು ಸ್ವತಃ ಕಾಣಬಹುದು. ದಿನನಿತ್ಯದ ಕಲಾಪಗಳಲ್ಲಿ ಸರಕಾರವನ್ನು  ಅದರ ಕಾರ್ಯ ನಿರ್ವಹಣೆ, ಲೋಪ ದೋಷ, ನಿರ್ಲಕ್ಷ್ಯ ಇತ್ಯಾದಿಗಳಿಗಾಗಿ ನ್ಯಾಯಾಧೀಶರು ತರಾಟೆಗೆ ತೆಗೆದುಕೊಳ್ಳುವುದನ್ನು ಅವರು ಕಾಣಬಹದು’ ಎಂದು ಹೇಳಿತು. 

Advertisement

Udayavani is now on Telegram. Click here to join our channel and stay updated with the latest news.

Next