Advertisement

Box Officeನಲ್ಲಿ ಅತೀ ಹೆಚ್ಚು ಗಳಿಕೆ ಕಂಡ ರಜಿನಿಕಾಂತ್‌ ನಟನೆಯ ಟಾಪ್‌ 7 ಸಿನಿಮಾಗಳಿವು

12:06 PM Aug 09, 2023 | Team Udayavani |

ಚೆನ್ನೈ: ಸೂಪರ್‌ ಸ್ಟಾರ್‌ ರಜಿನಿಕಾಂತ್‌ ʼಜೈಲರ್‌ʼ ಹವಾ ಜೋರಾಗಿದೆ. ಸಿನಿಮಾ ರಿಲೀಸ್‌ ಕ್ಷಣಗಣನೆ ಬಾಕಿ ಉಳಿದಿದೆ. ತಲೈವಾಅಭಿಮಾನಿಗಳು ಸಿನಿಮಾ ನೋಡಲು ತುದಿಗಾಲಲ್ಲಿ ನಿಂತಿದ್ದಾರೆ.

Advertisement

ಇತ್ತೀಚೆಗಿನ ದಿನಗಳಲ್ಲಿ ರಜಿನಿಕಾಂತ್‌ ಅವರ ಸಿನಿಮಾಗಳು ಹೈಪ್‌ ಕ್ರಿಯೇಟ್‌ ಮಾಡುತ್ತವೆ. ಆದರೆ ಸಿನಿಮಾದ ಕಥಾಹಂದರ ಸಾಮಾನ್ಯವಾಗಿರುತ್ತದೆ ಎನ್ನುವ ಮಾತುಗಳು ಕೇಳಿಬಂದಿವೆ. ಆದರೆ ರಜಿನಿಕಾಂತ್‌ ಸಿನಿಮಾಗಳೆಂದರೆ ಅಲ್ಲಿ ಅವರದೇ ಆದ ಖದರ್‌, ಮಾಸ್‌, ಕ್ಲಾಸ್‌ ಲುಕ್‌ ಗಳಿರುತ್ತವೆ. ಈ ಕಾರಣದಿಂದ ಆ ಸಿನಿಮಾಗಳು ಸ್ಟೋರಿ ಲೆವೆಲ್‌ ನಲ್ಲಿ ಅಷ್ಟು ಸದ್ದು ಮಾಡದೇ ಇದ್ದರೂ, ಬಾಕ್ಸ್‌ ಆಫೀಸ್‌ ನಲ್ಲಿ ಲಾಸ್‌ ಆಗದ ಬಿಸಿನೆಸ್‌ ಗಳನ್ನು ಮಾಡುತ್ತವೆ.

ಹಾಗಾದರೆ ಬನ್ನಿ ʼಜೈಲರ್‌ʼ ನೋಡುವ ಮುನ್ನ ರಜಿನಿಕಾಂತ್‌ ಸಿನಿ ಕೆರಿಯರ್‌ ನಲ್ಲಿ ಅತೀ ಹೆಚ್ಚು ಕೆಲಕ್ಷನ್‌ ಮಾಡಿದ ಸಿನಿಮಾಗಳ ಸುತ್ತ ಒಂದು ಸುತ್ತು ಹಾಕಿಕೊಂಡು ಬರೋಣ..

2.0 (ರೋಬೋ-2):

ಇದು ಎಂದಿರನ್‌ ಸಿನಿಮಾದ ಎರಡನೇ ಭಾಗ. ಈ ಸಿನಿಮಾದಲ್ಲಿ ರಜಿನಿಕಾಂತ್‌ ಜೊತೆ ಅಕ್ಷಯ್‌ ಕುಮಾರ್‌ ನಟಿಸಿದ್ದಾರೆ. ಮೊದಲ ಸ್ವೀಕೆಲ್‌ ಬಳಿಕ ಶಂಕರ್‌ ಈ ಸಿನಿಮಾದಲ್ಲಿ ಒಂದು ಸಂದೇಶದ ಜೊತೆ ರೋಬೋ ಕಥೆಯನ್ನು ಹೇಳಿದ್ದಾರೆ. ಸಿನಿಮಾ ರಿಲೀಸ್‌ ಗೂ ಮುನ್ನ ಸಿನಿಮಾದ ಬಗ್ಗೆ ದೊಡ್ಡಮಟ್ಟದ ಹೈಪ್‌ ಕ್ರಿಯೇಟ್‌ ಆಗಿತ್ತು. ಅದರಂತೆ ವರ್ಲ್ಡ್‌ ವೈಡ್‌ ಈ ಸಿನಿಮಾ 800 ಕೋಟಿ ರೂಪಾಯಿ ಕಲೆಕ್ಷನ್‌ ಮಾಡಿತು. ಆ ಮೂಲಕ ರಜಿನಿ ಸಿನಿಕೆರಿಯರ್‌ ನಲ್ಲಿ ಅತೀ ಹೆಚ್ಚು ಗಳಿಸಿದ ಸಿನಿಮಾಗಳ ಸಾಲಿನಲ್ಲಿ ಈ ಸಿನಿಮಾ ಸೇರಿದೆ.

Advertisement

ಸೆಲ್ ಫೋನ್ ಟವರ್ ವಿಕಿರಣದ ದುಷ್ಪರಿಣಾಮಗಳು ಮತ್ತು ಅದು ಪಕ್ಷಿಗಳು, ಪ್ರಾಣಿಗಳು ಮತ್ತು ಮನುಷ್ಯರ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಈ ಸಿನಿಮಾದಲ್ಲಿ ದುಬಾರಿ ವೆಚ್ಚದ ವಿಎಫ್‌ ಎಕ್ಸ್‌ ಮೂಲಕ ತೋರಿಸಲಾಗಿದೆ.

ಎಂದಿರನ್:‌ (Robot)

ಭಾರತೀಯ ಸಿನಿಮಾರಂಗದಲ್ಲಿ ಗ್ರಾಫಿಕ್ಸ್‌ ಹಾಗೂ ತಾಂತ್ರಿಕವಾಗಿ ಸದ್ದು ಮಾಡಿದ ಸಿನಿಮಾಗಳಲ್ಲಿ ಗಳಲ್ಲಿ ಆರ್‌ ಶಂಕರ್‌ – ರಜಿನಿಕಾಂತ್‌ ಕಾಂಬಿನೇಷನ್‌ ನ ʼಎಂದಿರನ್‌ʼ ಸಿನಿಮಾ ಕೂಡ ಒಂದು. 2010 ರಲ್ಲಿ ತೆರೆಕಂಡ ಈ ಸಿನಿಮಾದಲ್ಲಿ ಐಶ್ವರ್ಯಾ ರೈ ರಜಿನಿ ಅವರೊಂದಿಗೆ ನಟಿಸಿದ್ದರು. ಈ ಸಿನಿಮಾ ವರ್ಲ್ಡ್‌ ವೈಡ್‌ 290 ಕೋಟಿ ರೂಪಾಯಿ ಗಳಿಕೆಯನ್ನು ಬಾಕ್ಸ್‌ ಆಫೀಸ್‌ ನಲ್ಲಿ ಗಳಿಸಿತ್ತು.

ವಿಜ್ಞಾನಿಯೊಬ್ಬ ತನ್ನ ಮುಖಚಹರೆಯನ್ನು ಹೋಲುವ ʼ ಚಿಟ್ಟಿʼ ಎನ್ನುವ ರೋಬೋವನ್ನು ತಯಾರಿಸುತ್ತಾನೆ. ಆ ರೋಬೋಗೆ ಮಾನವ ಹಾವ -ಭಾವವನ್ನು ಆಳವಡಿಸಿದ ಕುರಿತಾದ ಕಥೆಯನ್ನು ಈ ಸಿನಿಮಾ ಒಳಗೊಂಡಿದೆ.

ಕಬಾಲಿ:

ʼಕಬಾಲಿʼ ರಜಿನಿಕಾಂತ್‌ ಫ್ಲೇವರ್‌ ಇರುವ ಸಿನಿಮಾ. ರಜಿನಿಕಾಂತ್‌ ಲುಕ್‌, ಸ್ಟೈಲ್‌, ಮಾಸ್‌ ಅವತಾರ ಈ ಸಿನಿಮಾದ ಹೈಲೈಟ್ಸ್‌ ಗಳಲ್ಲೊಂದು. ಪಾ ರಂಜಿತ್ ನಿರ್ದೇಶನ ಮಾಡಿರುವ ಈ ಸಿನಿಮಾ ಪ್ರೇಕ್ಷಕರ ಮನದಲ್ಲಿ ಅಷ್ಟಾಗಿ ಅಚ್ಚಾಗಿ ಉಳಿಯದೇ ಇದ್ದರೂ ಸಿನಿಮಾ ವಿಶ್ವದೆಲ್ಲೆಡೆ ಈ ಸಿನಿಮಾ 286 ಕೋಟಿ ರೂಪಾಯಿಯ ಗಳಿಕೆಯನ್ನು ಮಾಡಿದೆ.

ಪೆಟ್ಟಾ:

ʼಪೆಟ್ಟಾʼ ಪಕ್ಕಾ ರಜಿನಿಕಾಂತ್‌ ಫ್ಲೇವರ್‌ ವುಳ್ಳ ಮತ್ತೊಂದು ಸಿನಿಮಾ. ನಿರ್ದೇಶಕ ಕಾರ್ತಿಕ್‌ ಸುಬ್ಬರಾಜ್‌ ತಲೈವಾ ಅಭಿಮಾನಿಗಳ ನಾಡಿಮಿಡಿತವನ್ನು ಅರಿತುಕೊಂಡೇ ಈ ಸಿನಿಮಾವನ್ನು ಮಾಡಿದಂತಿದೆ. ಹಾಸ್ಟೆಲ್‌ ವಾರ್ಡನ್‌ ವೊಬ್ಬ ರಾಜಕಾರಣಿ ಹಾಗೂ ಆತನ ಗ್ಯಾಂಗ್‌ ಸ್ಟರ್‌ ಮಗನ ಮೇಲೆ ರೌದ್ರ ಅವತಾರ ತಾಳುವ ಕಥೆಯನ್ನು ಈ ಸಿನಿಮಾ ಒಳಗೊಂಡಿದೆ. ವಿಜಯ್ ಸೇತುಪತಿ, ನವಾಜುದ್ದೀನ್ ಸಿದ್ದಿಕಿ ಮತ್ತು ಸಸಿಕುಮಾರ್ ಪೋಷಕ ಪಾತ್ರಗಳಲ್ಲಿ ನಟಿಸಿರುವ ಸಿನಿಮಾ ವಿಶ್ವದೆಲ್ಲೆಡೆ 230 ಕೋಟಿ ರೂಪಾಯಿಯನ್ನು ಬಾಕ್ಸ್‌ ಆಫೀಸ್‌ ನಲ್ಲಿ ಗಳಿಸಿದೆ.

ದರ್ಬಾರ್: ಎಆರ್ ಮುರುಗದಾಸ್ ನಿರ್ದೇಶನ ಮಾಡಿರುವ ʼದರ್ಬಾರ್‌ʼ ಸಿನಿಮಾದಲ್ಲಿ ರಜಿನಿಕಾಂತ್‌ ಪೊಲೀಸ್‌ ಅಧಿಕಾರಿಯಾಗಿ ಮಿಂಚಿದ್ದಾರೆ. ಮಗಳ ಸಾವಿಗೆ ಸೇಡು ತೀರಿಸಿಕೊಳ್ಳುವ ತಂದೆಯೊಬ್ಬನ ಕಥೆಯನ್ನು ಈ ಸಿನಿಮಾ ಹೇಳುತ್ತದೆ. ಕಾಲಿವುಡ್‌ ನಲ್ಲಿ ಸಿನಿಮಾಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ವರ್ಲ್ಡ್‌ ವೈಡ್‌ ಈ ಸಿನಿಮಾ 200 ಕೋಟಿ ಗಳಿಕೆಯನ್ನು ಕಂಡಿತು. ಆ ಮೂಲಕ ಲಾಸ್‌ ಆಗದ ಬ್ಯುಸಿನೆಸ್ ಮಾಡಿತ್ತು.

ಕಾಲಾ:  ಪಾ ರಂಜಿತ್‌ ʼಕಬಾಲಿʼ ಬಳಿಕ ಮತ್ತೆ ರಜಿನಿಕಾಂತ್‌ ರೊಂದಿಗೆ ಮಾಡಿದ ಸಿನಿಮಾ ʼಕಾಲಾʼ ಭೂಮಿಯ ಹಕ್ಕಿಗಾಗಿ ಹೋರಾಡುವ ಕಥೆಗೆ ಪ್ರೇಕ್ಷಕರು ಜೈ ಎಂದಿದ್ದರು. ಸಿನಿಮಾ ಬಾಕ್ಸ್‌ ಆಫೀಸ್‌ ನಲ್ಲಿ ಭರ್ಜರಿ ಗಳಿಕೆ ಕಂಡಿತ್ತು. ರಜನಿಕಾಂತ್ ಮತ್ತು ನಾನಾ ಪಾಟೇಕರ್ ಅಭಿನಯ ಸಿನಿಮಾದ ಪಾಸಿಟಿವ್‌ ಅಂಶಗಳಲ್ಲೊಂದು 159 ಕೋಟಿ ಗಳಿಕೆಯನ್ನು ಕಾಣುವ ಮೂಲಕ ʼಕಾಲಾʼ ರಜಿನಿಕಾಂತ್‌ ಅವರ ವೃತ್ತಿ ಬದುಕಿನಲ್ಲಿ ʼಕಾಲಾʼ ವಿಶೇಷ ಸಿನಿಮಾವಾಗಿ ನಿಂತಿದೆ.

ಲಿಂಗಾ:

ʼಲಿಂಗಾʼ ಕಾಲಿವುಡ್‌ ವಲಯದಲ್ಲಿ ಸ್ವಲ್ಪ ಸದ್ದು ಮಾಡಿತ್ತು. ಇದು ನೆಗೆಟಿವ್‌ ರೀತಿಯಲ್ಲಿ. ಅದಕ್ಕೆ ಕಾರಣ ಸಿನಿಮಾದ ಕ್ಲೈಮ್ಯಾಕ್ಸ್‌ ದೃಶ್ಯ. ಕೆ ಎಸ್ ರವಿಕುಮಾರ್ ನಿರ್ದೇಶನದ ಸಿನಿಮಾದಲ್ಲಿ ಅನುಷ್ಕಾ ಶೆಟ್ಟಿ, ಸೋನಾಕ್ಷಿ ಸಿನ್ಹಾ ಮತ್ತು ಜಗಪತಿ ಬಾಬು ನಟಿಸಿದ್ದಾರೆ. ನೆಗೆಟಿವ್‌ ರಿವ್ಯೂ ಪಡೆದುಕೊಂಡರೂ ಸಿನಿಮಾ ಬಾಕ್ಸ್‌ ಆಫೀಸ್‌ ನಲ್ಲಿ 154 ಕೋಟಿ ರೂಪಾಯಿಯ ಗಳಿಕೆಯನ್ನು ಪಡೆದಿತ್ತು.

ನೆಲ್ಸನ್ ದಿಲೀಪ್‌ಕುಮಾರ್ ತನ್ನ ಸಿನಿಮಾವನ್ನು ಮನರಂಜನೀಯವಾಗಿ ತೋರಿಸುವವರಲ್ಲಿ ಖ್ಯಾತಿ. ಅವರ ʼಜೈಲರ್‌ʼ ಆಗಸ್ಟ್‌ 10 ರಂದು ರಿಲೀಸ್‌ ಆಗಲಿದೆ. ರಜಿನಿಕಾಂತ್‌ ಬಾಕ್ಸ್‌ ಆಫೀಸ್‌ ನಲ್ಲಿ ಈ ಬಾರಿ ಎಷ್ಟು ಕಮಾಯಿ ಹಾಗೂ ಕಮಾಲ್‌ ಮಾಡುತ್ತಾರೆ ಎನ್ನುವುದು ಕಾದು ನೋಡಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next