Advertisement
ಟಾಪ್ 10 ಪಟ್ಟಿಯಲ್ಲಿ ಮೊದಲ ನಾಲ್ಕು ಸ್ಥಾನಗಳನ್ನು ಅಲಂಕರಿಸಿರುವ ಸಂಸ್ಥೆ ಫೇಸ್‌ಬುಕ್!ಫೇಸ್‌ಬುಕ್ ಸಂಸ್ಥೆ ಒಂದೇ ಆಗಿರುವುದರಿಂದ ನಾಲ್ಕು ಸ್ಥಾನಗಳು ಸಿಕ್ಕಿದ್ದು ಹೇಗೆ ಎಂಬ ಪ್ರಶ್ನೆ ಈ ಸಂದರ್ಭದಲ್ಲಿ ಮೂಡುವುದು ಸಹಜ. ಮೊದಲ ಸ್ಥಾನ ಫೇಸ್‌ಬುಕ್ ಆ್ಯಪ್‌ನ ಪಾಲಾಗಿದ್ದರೆ, ಎರಡನೇ ಸ್ಥಾನ ಫೇಸ್‌ಬುಕ್‌ನ ಮೆಸೆಂಜರ್ ಆ್ಯಪ್ ಪಾಲಾಗಿದೆ. ಇನ್ನು ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿರುವ ವಾಟ್ಸ್‌ಆ್ಯಪ್ ಮತ್ತು ಇನ್‌ಸ್ಟಾಗ್ರಾಂ ಎರಡೂ ಫೇಸ್‌ಬುಕ್ ಒಡೆತನದ ಸಂಸ್ಥೆಗಳೇ ಆಗಿವೆ. ಖಾಸಗಿತನ, ಫೇಕ್ ನ್ಯೂಸ್ ಇನ್ನೂ ಹಲವು ವಿವಾದಗಳನ್ನು ಎದುರಿಸುತ್ತಿರುವ ಫೇಸ್‌ಬುಕ್ ಮಾರುಕಟ್ಟೆಯಲ್ಲಿ ತನ್ನ ಜನಪ್ರಿಯತೆಯನ್ನು ಕಳೆದುಕೊಂಡಿಲ್ಲ ಎನ್ನುವುದು ಇದರಿಂದ ಸಾಬೀತಾದಂತಾಗಿದೆ. ನಂತರದ ಸ್ಥಾನಗಳಲ್ಲಿ ಸ್ನ್ಯಾಪ್‌ಚಾಟ್(5), ವಿಡಿಯೋ ಕಾಲಿಂಗ್ ಆ್ಯಪ್ ಸ್ಕೈಪ್(6), ಟಿಕ್‌ಟಾಕ್(7), ಯುಸಿ ಬ್ರೌಸರ್(8), ಯುಟ್ಯೂಬ್(9) ಮತ್ತು ಹತ್ತನೆಯದಾಗಿ ಟ್ವಿಟ್ಟರ್ ಆ್ಯಪ್‌ಗ್ಳಿವೆ. ಅದನ್ನು ಹೊರತುಪಡಿಸಿ ಗೇಮಿಂಗ್ ಆ್ಯಪ್‌ಗ್ಳ ನಡುವಿನ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಗಳಿಸಿರುವುದು “ಸಬ್‌ವೇ ಸರ್ಪೆರ್’. ಇದರ ಬಳಕೆದಾರರಲ್ಲಿ ಶೇ. 15ರಷ್ಟು ಮಂದಿ ಭಾರತೀಯರು ಎನ್ನುವುದು ಗಮನಾರ್ಹ ಸಂಗತಿ.