Advertisement

ಅಬ್ಬಬ್ಬಾ ಎನಿಸುವ ಜಗತ್ತಿನ ಟಾಪ್ 10 ಸೇತುವೆ

10:10 AM Sep 04, 2019 | sudhir |

ಮಣಿಪಾಲ: ಸೇತುವೆಗಳು ಜನರನ್ನು ಮತ್ತಷ್ಟು ಹತ್ತಿರಕ್ಕೆ ಕರೆದುಕೊಳ್ಳುತ್ತವೆ. ಸಮುದ್ರವಾಗಿರಲಿ, ನದಿಯಾಗಿರಲಿ ಅಥವ ಕೆರೆಯೇ ಆಗಿರಲಿ; ಸಂಪರ್ಕ ಕಲ್ಪಿಸಬೇಕಾದರೆ ಸೇತುವೆಗಳು ಅತೀ ಅವಶ್ಯಕ. ಹಾಗೆ ನೋಡಿದರೆ ಸೇತುವೆಗಳು ಮತ್ತು ಜನರ ಜೀವನಕ್ಕೆ ಆಪ್ತವಾದ ಭಾವಾನಾತ್ಮಕ ಬಂಧವೂ ಇದೆ. ಇತ್ತೀಚೆಗೆ ಸಂಭವಿಸಿದ ಭಾರೀ ಪ್ರವಾಹಗಳಲ್ಲಿ ಹಲವು ಸೇತುವೆಗಳು ನೀರು ಪಾಲಾಗಿತ್ತು. ಇದರಿಂದ ಒಂದು ಪ್ರದೇಶದೊಂದಿಗಿನ ಸಂಪರ್ಕವೇ ಬದಲಾಗಿತ್ತು. ಇಂತಹ ಸಂದರ್ಭ ಜನರು ಆ ಸೇತುವೆಯೋಂದಿಗೆ ತಾವು ಹೊಂದಿದ್ದ ಭಾವಾನಾತ್ಮಕ ನೆನಪುಗಳ ಬುತ್ತಿಯನ್ನು ತೆರೆದಿಟ್ಟಿದ್ದರು.

Advertisement

ಸೇತುವೆ ಎಂದರೆ ಹಲವು ತಲೆಮಾರು
ಒಂದು ಸೇತುವೆ ಎಂದರೆ ಹಲವು ತಲೆಮಾರುಗಳ ಪ್ರತೀಕ. ನಮ್ಮ ಹಿರಿಯರ ಕಾಲದಲ್ಲೇ ಬಳಕೆಯಲ್ಲಿದ್ದ ಸೇತುವೆಗಳ ಕುರಿತು ಜನರಲ್ಲಿ ಭಾವಾನಾತ್ಮಕ ಬಂಧ ಏರ್ಪಟ್ಟಿರುತ್ತದೆ. ಭಾರತದಲ್ಲಿ ಬ್ರಿಟೀಷರು ಆಡಳಿತ ಮಾಡುತ್ತಿದ್ದ ಕಾಲದಲ್ಲಿ ನಿರ್ಮಿಸಿದ ಹಲವು ಸೇತುವೆಗಳು ಇಂದೂ ಇವೆ. ಇಂದಿನ ಅವಶ್ಯಕತೆಗೆ ತಕ್ಕಂತೆ ವಿಸ್ತಾರವಾಗಿಲ್ಲ ಎಂಬ ಕಾರಣಕ್ಕೆ ಅವುಗಳನ್ನು ಬಳಕೆಯಿಂದ ದೂರಗೊಳಿಸಲಾಗಿದೆ. ಇರಲಿ ಅದು ಅಭಿವೃದ್ಧಿಯ ದೃಷ್ಠಿಯಿಂದ ಅಗತ್ಯವಾಗಿತ್ತು.

ನಮ್ಮಲ್ಲಿ ನದಿ, ತೋಡು, ಕೆರೆ ಮೊದಲಾದವುಗಳಿಗೆ ಸೇತುವೆಯನ್ನು ಕಟ್ಟಲಾಗುತ್ತದೆ. ಅದೇ ರೀತಿ ವಿದೇಶಗಳಲ್ಲೀ ಇಂತಹದ್ದೇ ಹಲವು ಸೇತುವೆಗಳು ಇವೆ. ಅದರ ಜತೆಗೆ ಅಲ್ಲಿನ ದ್ವೀಪಗಳ ನಡುವೆ, ಸಮುದ್ರಕ್ಕೆ ಸೇತುವೆಗಳನ್ನು ನಿರ್ಮಾಣ ಮಾಡಲಾಗಿದೆ. ಅಲ್ಲಿನ ಈ ಸೇತುವೆಗಳು ಬಳಕೆಯಾಗುವುದಕ್ಕಿಂತ ಹೆಚ್ಚಾಗಿ ಪ್ರವಾಸೋದ್ಯಮದ ತವರಾಗಿ ಮಾರ್ಪಟ್ಟಿದೆ. ಹಾಗಾದರೆ ಸಮುದ್ರಕ್ಕೆ ನಿರ್ಮಿಸಿದ ಜಗತ್ತಿನ ಟಾಪ್ 10 ಸೇತುವೆಗಳನ್ನು ನೋಡೋಣ ಬನ್ನಿ.

1. ಥರ್ಡ್ ಮೈನ್ಲ್ಯಾಂಡ್ ಬ್ರಿಡ್ಜ್ (Third Mainland Bridge)
ಇದು ಆಫ್ರಿಕಾದ ಅತೀ ಉದ್ದನೆಯ ಬ್ರಿಡ್ಜ್ ಆಗಿದೆ. ಇದು ಆಫ್ರಿಕಾ ಮತ್ತು ಲಾಗೋಸ್ ಐಲ್ಯಾಂಡ್ ಅನ್ನು ಸಂಪರ್ಕಿಸುತ್ತಿದ್ದು, ಇದರ ಗಾತ್ರ 11.8 ಕಿ.ಮೀ. (7.4 ಮೈಲು).

Advertisement

2. ಕಾನ್ಫೆಡರೇಶನ್ ಬ್ರಿಡ್ಜ್ (Confederation Bridge)
ಇದು ಕೆನಡದಲ್ಲಿದೆ. 12.3 ಕಿ.ಮೀ. (8 ಮೈಲು) ಉದ್ದದ ಈ ಸೇತುವೆ ಕೆನಡದ ಬ್ರನ್ಸಿಕ್ ಮತ್ತು ಪ್ರಿನ್ಸ್ ಎಡ್ವರ್ಡ್ ಐಲ್ಯಾಂಡ್ಗಳನ್ನು ಸಂಪರ್ಕಿಸುತ್ತದೆ.

3. ಟೋಕಿಯೋ ಬೇ ಅಕ್ವಾ ಲೈನ್ (Tokyo Bay Aqua-Line)
ಜಪಾನ್ನ ಚಿಬಾದಲ್ಲಿರುವ ಈ ಸೇತುವೆ ಟ್ರಾನ್ಸ್ ಟೋಕಿಯೋ ಬೇ ಎಕ್ಸ್ಪ್ರೆಸ್ವೇ ಎಂದೇ ಪ್ರಸಿದ್ದ. ಇದು ಕನಗಾವದ ಕವಾಸಕಿ ನಗರ ಮತ್ತು ಚಿಬಾದ ಕಿಸರಾಝು ನಗರವನ್ನು ಸಂಪರ್ಕಿಸುತ್ತದೆ. ಇದು 23.7 ಕಿ.ಮೀ (14.8) ಮೈಲು ಉದ್ದ ಇದೆ.

4. ಕಿಂಗ್ ಫಾಹ್ ಕಾಸ್ವೇ (King Fahd Causeway)
ಇದು ಸೌದಿ ಅರೆಬಿಯಾ ಮತ್ತು ಬೆಹರೈನ್ ಅನ್ನು ಸಂಪರ್ಕಿಸುವ ಸೇತುವೆಯಾಗಿದೆ. ಇದು 25 ಕಿ.ಮೀ. (16 ಮೈಲು) ಉದ್ದ ಇದೆ.

5. ಜಿಂತಾಂಗ್ ಬ್ರಿಡ್ಜ್ (Jintang Bridge)
ಇಂದು ಜಿಂಟಾಂಗ್ ದ್ವೀಪ ಮತ್ತು ಚೀನದ ಝೆನೈ ಅನ್ನು ಸಂಪರ್ಕಿಸುತ್ತದೆ. ಇದು 26 ಕಿ.ಮೀ. (16 ಮೈಲು) ಉದ್ದವಿದೆ.

6. ಚೆಸಾಪೀಕ್ ಬೇ ಬ್ರಿಡ್ಜ್ (Chesapeake Bay Bridge-Tunnel)
ಇದು ಸುರಂಗದ ಮೂಲಕ ಹಾದು ಹೋಗುವ ವಿಶೇಷ ಸೇತುವೆಯಾಗಿದೆ. ಇದು ಡೆನ್ಮಾರ್ವದ ಪೆನಿನ್ಸುವೆಲ್ಲಾ ಮತ್ತು ಪೂರ್ವ ಸಾಗರದ ಮೂಲಕ ವರ್ಜೀನಿಯಾ ಬೀಚ್, ನಾರ್ಪೋಕ್, ಚೆಸಾಪೀಕ್ ಮತ್ತು ಪೋರ್ಟ್ಮೌತ್ ನಡುವೆ ಸಂಪರ್ಕ ಕಲ್ಪಿಸುತ್ತದೆ. ಇದು 37 ಕಿ.ಮೀ. (23 ಮೈಲು) ಉದ್ದ ಇರುವ ಸೇತುವೆಯಾಗಿದೆ.

7. ಡಾಂಗ್ಹೈ ಬ್ರಿಡ್ಜ್ (Donghai Bridge)
ಇದು ವಿಶ್ವದ ಅತೀ ದೊಡ್ಡ ಕ್ರಾಸ್ ಸೀ ಬ್ರಿಡ್ಜ್ ಆಗಿದೆ. ಇದು ಶಾಂಗೈನ ಪುಡಾಂಗ್ ಪ್ರದೇಶವನ್ನು ಅಫ್ಶಾರ್ ಯಗಾÏನ್ ಮೂಲಕ ಪೂರ್ವ ಚೀನದ ಝೇಜ್ಯಾಂಗ್ ಪ್ರದೇಶವನ್ನು ಸಂಪರ್ಕಿಸುತ್ತದೆ. ಇದು 32.5 ಕಿ.ಮೀ (20.2 ಮೈಲು) ಉದ್ದ ಹೊಂದಿದೆ.

8. ಹ್ಯಾಂಜೊÕàವ್ ಬೇ ಬ್ರಿಡ್ಜ್ (Hangzhou Bay Bridge)
ಇದು ಚೀನದ ಜಿಯಾಂಗ್ ಮತ್ತು ನಿಗ್ಬೋ ಪ್ರದೇಶದಲ್ಲಿ ಕಂಡು ಬರುವ ಸೇತುವೆಯಾಗಿದೆ. ಇದು 35.673 ಕಿ.ಮೀ. (22) ಮೈಲು ಉದ್ದ ಇದೆ.

9. ಕ್ವಿಂಗ್ಡಾವೋ ಹೈವಾನ್ ಬ್ರಿಡ್ಜ್ (Qingdao Haiwan Bridge)
ಇದನ್ನು ಜಿಯಾಸೋ ಬೇ ಬ್ರಿಡ್ಜ್ ಎಂದೂ ಕರೆಯುತ್ತಾರೆ. ಇದು ಚೀನದ ಕ್ವಿಂಗ್ಡಾವೋ ಮತ್ತು ಹೌಂಗ್ಡಾವೋ ಜಿಲ್ಲೆಗಳಲ್ಲಿದೆ. ಇದು 42.6 ಕಿ.ಮೀ. (26.4 ಮೈಲು) ಉದ್ದ ಇದೆ.

10. ಓವರ್ಸೀಸ್ ಹೈವೇ (Overseas Highway)
ಇದು ಜಗತ್ತಿನ ಅತೀ ಸುಂದರವಾದ ಸೇತುವೆಯಾಗಿದೆ. ಅಮೆರಿಕದಲ್ಲಿರುವ ಈ ಸೇತುವೆ ರೋಚಕವಾದ ಅನುಭವವನ್ನು ಕಟ್ಟಿಕೊಡುತ್ತದೆ. ಇದು ಅಮೆರಿಕದ ಮಿಯಾಮಿ ಮತ್ತು ಪಶ್ಚಿಮ ಫ್ಲೋರಿಡಾವನ್ನು ಸಂಪರ್ಕಿಸುತ್ತದೆ. ಇದು ಬರೊಬ್ಬರಿ 181.9 (113 ಮೈಲು) ಉದ್ದ ಇದೆ.

– ಕಾರ್ತಿಕ್ ಅಮೈ 

Advertisement

Udayavani is now on Telegram. Click here to join our channel and stay updated with the latest news.

Next