Advertisement
ಆರಂಭದಲ್ಲಿ ಕಿರುಚಿತ್ರಗಳ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟ ಬಳಿಕ “ಮೂಕ ವಿಸ್ಮಿತ’, “ಸಿಲಿಕಾನ್ ಸಿಟಿ’, “ಕಿಸ್’ ಸಿನಿಮಾಗಳಲ್ಲಿ ಸಪೋರ್ಟಿಂಗ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದ ಚಂದ್ರ ಕೀರ್ತಿ, “ತೂತು ಮಡಿಕೆ’ ಸಿನಿಮಾದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಚಿತ್ರಕ್ಕೆ ಚಂದ್ರ ಕೀರ್ತಿ ಅವರೇ ಕಥೆ ಬರೆದು ನಿರ್ದೇಶನವನ್ನೂ ಮಾಡಿದ್ದಾರೆ.
Related Articles
Advertisement
“ಕಾಸಿನ ದುರಾಸೆಯಿಂದ ಅತ್ಯಮೂಲ್ಯ “ಆ್ಯಂಟಿಕ್ ಪೀಸ್’ ಒಂದರ ಹಿಂದೆ ಬೀಳುವ ಒಂದಷ್ಟು ಪಾತ್ರಗಳ ಸುತ್ತ ಏನೆಲ್ಲ ನಡೆಯುತ್ತದೆ. ಕೊನೆಗೆ ಈ “ಆ್ಯಂಟಿಕ್ ಪೀಸ್’ ಹಿಂದೆ ಬಿದ್ದವರಿಗೆ ದಕ್ಕುತ್ತದೆಯಾ? ಇಲ್ಲವಾ? ಹೀಗೆ, “ಆ್ಯಂಟಿಕ್ ಪೀಸ್’ ಹಿಂದೆ ಬಿದ್ದು ಶಾಂತಿ ಕಳೆದುಕೊಂಡವರ ಕಥೆ “ತೂತು ಮಡಿಕೆ’ಯಲ್ಲಿದೆ’ ಎಂದು ಚಿತ್ರದ ಕಥಾಹಂದರ ಬಿಚ್ಚಿಡುತ್ತದೆ ಚಿತ್ರತಂಡ.
ನಾಯಕಿ ಪಾವನಾ, ಪ್ರಮೋದ್ ಶೆಟ್ಟಿ, ಗಿರಿ, ಉಗ್ರಂ ಮಂಜು ತಮ್ಮ ಪಾತ್ರಗಳ ಹಾಗೂ ಹೊಸಬರ ತಂಡದ ಶಿಸ್ತು ಹಾಗೂ ಶ್ರಮದ ಬಗ್ಗೆ ಮಾತನಾಡಿದರು.
ಚಿತ್ರಕ್ಕೆ ನವೀನ್ ಚಲ್ಲ ಛಾಯಾಗ್ರಹಣ, ಉಜ್ವಲ್ ಚಂದ್ರ ಸಂಕಲನವಿದೆ. ಚಿತ್ರದ ಎರಡು ಹಾಡುಗಳಿಗೆ ಸ್ವಾಮಿನಾಥನ್ ಆರ್. ಕೆ ಸಂಗೀತ ಸಂಯೋಜಿಸಿದ್ದಾರೆ. ವಿಜಯ ಪ್ರಕಾಶ್, ಚೇತನ್ ನಾಯಕ್ ಧ್ವನಿಯಾಗಿದ್ದು, ಹಾಡುಗಳಿಗೆ ಚೇತನ್ ಕುಮಾರ್, ನಿತಿನ್ ಜೈ ಹಾಡುಗಳಿಗೆ ಸಾಹಿತ್ಯ ಒದಗಿಸಿದ್ದಾರೆ. ಮೋಹನ್ ಮಾಸ್ಟರ್ ಈ ಗೀತೆಗಳಿಗೆ ನೃತ್ಯ ಸಂಯೋಜಿಸಿದ್ದಾರೆ.
ಚಿತ್ರಕ್ಕೆ ಚಂದ್ರ ಕೀರ್ತಿ, ಎಎಸ್‌ಜಿ ಮತ್ತು ಡಾಲರ್ ಚಿತ್ರಕಥೆ, ರಘು ನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ. “ಸರ್ವತಾ ಸಿನಿ ಗ್ಯಾರೇಜ್’ ಬ್ಯಾನರ್‌ನಲ್ಲಿ ಮಧುಸೂದನ್ ರಾವ್ ಮತ್ತು ಶಿವಕುಮಾರ್ ಕೆ. ಬಿ ಈ ಚಿತ್ರವನ್ನು ನಿರ್ಮಿಸಿದ್ದಾರೆ.