Advertisement

ತವರಿನಲ್ಲಿ ಸರ್ಬಿಯಾಗೆ ಆಘಾತ; ಮಿಂಚಿದ ಮೊರೊಕ್ಕೊ

06:00 AM Jun 06, 2018 | Team Udayavani |

ಮಾಸ್ಕೊ: ವಿಶ್ವಕಪ್‌ಗೆ ಪೂರ್ವಭಾವಿಯಾಗಿ ನಡೆಯುತ್ತಿರುವ ಅಭ್ಯಾಸ ಪಂದ್ಯಗಳಲ್ಲಿ ಸರ್ಬಿಯಾ ತಂಡವು ತವರಿನಲ್ಲಿ ನಡೆದ ಪಂದ್ಯದಲ್ಲಿ ಚಿಲಿ ವಿರುದ್ಧ 0-1 ಗೋಲಿನಿಂದ ಸೋತಿದೆ. ಇನ್ನೊಂದು ಪಂದ್ಯದಲ್ಲಿ ಮೊರೊಕ್ಕೊ ತಂಡವು ಸ್ಲೋವಾ ಕಿಯ ತಂಡವನ್ನು 2-1 ಗೋಲುಗಳಿಂದ ಕೆಡಹಿ ಮಿಂಚಿದೆ. ರಶ್ಯಕ್ಕೆ ತೆರಳಲು ವಿಫ‌ಲವಾದ ಇಟಲಿ, ಹಾಲೆಂಡ್‌ ಟ್ಯುರಿನ್‌ನಲ್ಲಿ ನಡೆದ ಪಂದ್ಯದಲ್ಲಿ 1-1 ಗೋಲಿನಿಂದ ಡ್ರಾ ಸಾಧಿಸಿದೆ.

Advertisement

ತನ್ನ ಬಣದಲ್ಲಿ ಬ್ರಝಿಲ್‌, ಕೋಸ್ಟಾರಿಕಾ ಮತ್ತು ಸ್ವಿಟ್ಸರ್ಲಂಡ್‌ ತಂಡವನ್ನು ಎದುರಿಸಲಿರುವ ಸರ್ಬಿಯಾ ತಂಡವು ದಕ್ಷಿಣ ಅಮೆರಿಕನ್‌ ಚಾಂಪಿಯನ್‌ ಚಿಲಿ ವಿರುದ್ಧ ನೀರಸವಾಗಿ ಆಡಿತ್ತು. ಚಿಲಿ ಈ ಬಾರಿಯ ವಿಶ್ವಕಪ್‌ಗೆ ಅರ್ಹತೆ ಗಳಿಸಲು ವಿಫ‌ಲವಾಗಿದೆ. ಆದರೂ ಹೋರಾಟದ ಪ್ರದರ್ಶನ ನೀಡಿದ ಚಿಲಿ 89ನೇ ನಿಮಿಷದಲ್ಲಿ ಗೈಲೆರ್ಮೊ ಮರಿಪನ್‌ ಮೂಲಕ ವಿಜಯಿ ಗೋಲನ್ನು ಹೊಡೆದು ಸಂಭ್ರಮ ಆಚರಿಸಿತು. 

“ಬಿ’ ಬಣದಲ್ಲಿ ಇರಾನ್‌, ಸ್ಪೇನ್‌ ಮತ್ತು ಪೋರ್ಚುಗಲ್‌ ತಂಡವನ್ನು ಎದುರಿಸಲಿರುವ ಮೊರೊಕ್ಕೊ ತಂಡ ಅಭ್ಯಾಸ ಪಂದ್ಯದಲ್ಲಿ ಸ್ಲೋವಾಕಿಯ ತಂಡವನ್ನು ಮಣಿಸುವಲ್ಲಿ ಯಶಸ್ವಿ ಯಾಯಿತು. ಈ ಮೂಲಕ ತನ್ನ ಸತತ ಗೆಲುವನ್ನು 11 ಪಂದ್ಯಗಳಿಗೆ ವಿಸ್ತರಿಸಿತು. ಸ್ಲೋವಾಕಿಯದ ಜಾನ್ಸ್‌ ಗ್ರೆಗಸ್‌ 59ನೇ ನಿಮಿಷದಲ್ಲಿ ಗೋಲು ಹೊಡೆದು ಮುನ್ನಡೆ ಸಾಧಿಸಿದ್ದರೂ ಮೊರೊಕ್ಕೊ 10 ನಿಮಿಷಗಳ ಅಂತರ ದಲ್ಲಿ ಆಯೂಬ್‌ ಕಾಬಿ ಮತ್ತು ಯೂನೆಸ್‌ ಬೆಲ್ಹಾಂಡ ಮೂಲಕ ಗೋಲು ಹೊಡೆದು ಜಯಭೇರಿ ಬಾರಿಸಿತು.

ಗ್ಲಿಕ್‌ಗೆ ಗಂಭೀರ ಗಾಯ
ಪೋಲ್ಯಾಂಡಿನ ಡಿಫೆಂಡರ್‌ ಕಮಿಲ್‌ ಗ್ಲಿಕ್‌ ಅವರು ತರಬೇತಿ ನಡೆಸುತ್ತಿದ್ದ ವೇಳೆ ಭುಜಕ್ಕೆ ಗಂಭೀರ ಗಾಯ ಮಾಡಿಕೊಂಡಿದ್ದಾರೆ.  23 ಸದಸ್ಯರ ತಂಡದಲ್ಲಿ ಸ್ಥಾನ ಪಡೆದಿರುವ ಅವರು ಪಂದ್ಯದಲ್ಲಿ ಆಡುವುದು ಅನು ಮಾನವೆಂದು ಹೇಳಲಾಗಿದೆ. ಒಂದು ವೇಳೆ ನಿಗದಿತ ಸಮಯದೊಳಗೆ ಚೇತರಿಸಿಕೊಳ್ಳದಿದ್ದರೆ ಅವರ ಬದಲಿಗೆ ಮಾರ್ಸಿನ್‌ ಕಮಿನ್ಸ್‌ಕಿ ಅವರನ್ನು ಆಡಿಸಲಾಗುವುದು ಎಂದು ಕೋಚ್‌ ಆ್ಯಡಂ ನವಾಲ್ಕ ಹೇಳಿದ್ದಾರೆ.

ನಿಯತಕಾಲಿಕೆಗಾಗಿ ಮೇಕೆ ಜತೆ ಮೆಸ್ಸಿ ಫೋಟೊ
ಮ್ಯಾಡ್ರಿಡ್‌: ವಿಶ್ವ ವಿಖ್ಯಾತ ಫ‌ುಟ್ಬಾಲ್‌ ಆಟಗಾರ ಆರ್ಜೆಂಟೀನಾದ ಲಿಯೋನೆಲ್‌ ಮೆಸ್ಸಿ ಮೇಕೆಯನ್ನು ಹೆಗಲ ಮೇಲೆ ಹೊತ್ತುಕೊಂಡ ಫೋಟೊ ವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ವಿಶ್ವಕಪ್‌ ಫ‌ುಟ್ಬಾಲ್‌ ಸನಿಹದಲ್ಲಿದ್ದು ಇದಕ್ಕೂ ಮೊದಲು ಮೆಸ್ಸಿ ನಿಯತಕಾಲಿಕೆಯೊಂದರ ಮುಖಪುಟಕ್ಕಾಗಿ ಮೇಕೆ ಹಿಡಿದು ಫೋಟೋ ಕ್ಲಿಕ್ಕಿಸಿಕೊಂಡಿರುವುದು ವಿಶೇಷ. ನಿಯತಕಾಲಿಕೆಯ ಮುಖಪುಟದಲ್ಲಿ ಮೆಸ್ಸಿ ಫೋಟೊ ಜತೆಗೆ “ಮೆಸ್ಸಿ ಈಸ್‌ ದಿ ಜಿ.ಒ.ಎ.ಟಿ. (ಗ್ರೇಟೆಸ್ಟ್‌ ಆಫ್ ಆಲ್‌ ಟೈಮ್‌)’ ಎಂದು ಪ್ರಕಟಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next