Advertisement
ಬಾಯಿಯಲ್ಲಿ ಇರುವ ಬ್ಯಾಕ್ಟೀರಿಯಾಗಳು ಆಟೋ ಆ್ಯಂಟಿ ಬಾಡಿಗಳ ಉತ್ಪಾದನೆಗೆ ಕಾರಣವಾಗಬಲ್ಲವು, ಇದರಿಂದಾಗಿ ದೇಹದ ಪ್ರೊಟೀನ್‌ಗಳಲ್ಲಿ ಬದಲಾವಣೆ ಕಂಡುಬರಬಹುದು. ಇದರಿಂದಾಗಿ ಸಂಧಿಗಳ ಜೋಡಣೆಯ ಭಾಗದಲ್ಲಿ ದೇಹವು ಕೆಲವು ಪ್ರೊಟೀನ್‌ಗಳನ್ನು ಅಪಾಯವೆಂಬಂತೆ ಪರಿಗಣಿಸುವ ಪರಿಸ್ಥಿತಿ ಮತ್ತು ಇದಕ್ಕೆ ಪ್ರತಿಕ್ರಿಯೆಯಾಗಿ ಈ ಪ್ರೊಟೀನ್‌ಗಳ ವಿರುದ್ಧ ರಕ್ಷಣೆಗಾಗಿ ಆ್ಯಂಟಿಬಾಡಿಗಳನ್ನು ಉತ್ಪಾದಿಸುವಂತೆ ಆಗಬಹುದು.
Related Articles
Advertisement
ಎಎಯು ಬಿಳಿ ರಕ್ತಕಣಗಳಲ್ಲಿ ಇದು ರುಮಟಾಯಿಡ್ ಆರ್ಥೈಟಿಸ್ ಹೊಂದಿರುವವರ ಸಂಧಿಗಳಲ್ಲಿ ಕಂಡುಬರುವ ಬದಲಾವಣೆಯಂತಹುದೇ ಬದಲಾವಣೆಯನ್ನು ಉಂಟು ಮಾಡಬಹುದಾಗಿದೆ.
ಪೆರಿಯೋಡೊಂಟೈಟಿಸ್ ವಸಡುಗಳು ಮತ್ತು ಹಲ್ಲುಗಳ ಸುತ್ತಲು ಇರುವ ಎಲುಬುಗಳನ್ನು ಬಾಧಿಸುವ ಒಂದು ಅನಾರೋಗ್ಯ ಸ್ಥಿತಿ. ಇದರ ತೀವ್ರತರಹದ ಪ್ರಕರಣಗಳಲ್ಲಿ ಇದರಿಂದಾಗಿ ಎಲುಬು ಅಥವಾ ಹಲ್ಲು ನಷ್ಟವಾಗಬಹುದು. ಪೆರಿಯೊಡೊಂಟೈಟಿಸ್ ರುಮಟಾಯಿಡ್ ಆರ್ಥೈಟಿಸ್ ಉಂಟಾಗಬಲ್ಲಂತಹ ಆಟೊಇಮ್ಯೂನ್ ಪ್ರತಿಕ್ರಿಯೆಗೆ ಕಾರಣವಾಗಬಲ್ಲುದಾಗಿದೆ.
ರುಮಟಾಯಿಡ್‌ನ ಆರಂಭಿಕ ಹಂತಗಳಲ್ಲಿ ಸಂಧಿಗಳು ಮೃದುವಾಗುವುದು ಅಥವಾ ಸಂಧಿನೋವು ಉಂಟಾಗಬಹುದು. ರುಮಟಾಯಿಡ್ ಆರ್ಥೈಟಿಸ್‌ನ ಇತರ ಲಕ್ಷಣಗಳೆಂದರೆ
-6 ವಾರ ಅಥವಾ ಅದಕ್ಕಿಂತ ಹೆಚ್ಚು ಕಾಲ ಸಂಧಿಗಳು ಊದಿಕೊಳ್ಳುವುದು ಅಥವಾ ಗಡುಸಾಗುವುದು
-ಬೆಳಗ್ಗೆ 30 ನಿಮಿಷಗಳು ಅಥವಾ ಅದಕ್ಕಿಂತ ಹೆಚ್ಚು ಕಾಲ ಸಂಧಿಗಳು ಗಡುಸಾಗುವುದು
-ಒಂದಕ್ಕಿಂತ ಹೆಚ್ಚು ಸಂಧಿಗಳಲ್ಲಿ ಲಕ್ಷಣಗಳು ಕಾಣಿಸಿಕೊಳ್ಳುವುದು
-ಲಕ್ಷಣಗಳು ಆರಂಧಿಕವಾಗಿ ಮಣಿಕಟ್ಟು, ಪಾದ ಅಥವಾ ಹಸ್ತಗಳಂತಹ ಸಣ್ಣ ಸಂಧಿಗಳಲ್ಲಿ ಕಾಣಿಸಿಕೊಳ್ಳುವುದು
-ದೇಹದ ಎರಡೂ ಪಾರ್ಶ್ವಗಳಲ್ಲಿ ಲಕ್ಷಣಗಳು ಅವೇ ಸಂಧಿಗಳಲ್ಲಿ ಕಂಡುಬರುತ್ತವೆ
-ದಣಿವು
-ಕಡಿಮೆ ಪ್ರಮಾಣದಲ್ಲಿ ಜ್ವರ
-ಲಕ್ಷಣಗಳು ಒಮ್ಮೆ ಕಾಣಿಸಿಕೊಂಡು ಮಾಯವಾಗುವುದು, ಮತ್ತೆ ತಲೆದೋರುವುದು
ಚಿಕಿತ್ಸೆ
ಹಲ್ಲು ಸೋಂಕಿಗೆ ಈ ಕೆಳಗಿನ ಚಿಕಿತ್ಸೆಗಳನ್ನು ನಡೆಸಬಹುದು
-ಕೀವನ್ನು ಹೊರತೆಗೆಯುವುದು
-ಆ್ಯಂಟಿಬಯೋಟಿಕ್ ಚಿಕಿತ್ಸೆ
-ನೋವು ನಿವಾರಕ ಔಷಧಗಳು
-ಜ್ವರ ಅಥವಾ ತೀವ್ರ ಬಾವಿನಂತಹ ಸಮಸ್ಯೆಗಳಿಗೆ ಚಿಕಿತ್ಸೆ
-ರೂಟ್ ಕೆನಲ್ ಚಿಕಿತ್ಸೆ
-ದಂತ ವೈದ್ಯರಿಗೆ ಹಲ್ಲನ್ನು ಉಳಿಸಿಕೊಳ್ಳುವುದು ಸಾಧ್ಯವಾಗದೆ ಇದ್ದರೆ ಬಾಧಿತ ಹಲ್ಲನ್ನು ತೆಗೆಯುವುದು
ಪೆರಿಯೊಡೊಂಟೈಟಿಸ್‌ಗೆ ಚಿಕಿತ್ಸೆ-
-ಬಾಯಿಯ ನೈರ್ಮಲ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳುವುದು
-ಬಾಯಿಯ ವೃತ್ತಿಪರ ಶುಚಿತ್ವ ಪ್ರಾವೀಣ್ಯವನ್ನು ಹೊಂದಿರುವ ದಂತವೈದ್ಯರಿಂದ ನಿಯಮಿತವಾಗಿ ಚೆಕ್‌ಅಪ್ ಮಾಡಿಸಿಕೊಳ್ಳುವುದು
-ವಸಡುಗಳ ಕೆಳಗಿರುವ ಹಲ್ಲುಗಳ ಆಸನ ಭಾಗದ ಸಹಿತ ಹಲ್ಲು ಬೇರುಗಳ ಮೇಲ್ಮೈಗಳನ್ನು ಆಳವಾಗಿ ಶುಚಿಗೊಳಿಸುವುದು
-ವಸಡುಗಳ ಕೆಳಭಾಗಕ್ಕೆ ಅಥವಾ ಬಾಯಿಗೆ ಔಷಧ
-ಕೆಲವು ಪ್ರಕರಣಗಳಲ್ಲಿ ತೊಂದರೆಯನ್ನು ಸರಿಪಡಿಸುವ ಶಸ್ತ್ರಚಿಕಿತ್ಸೆ
ಸಾರಾಂಶ
ರುಮಟಾಯಿಡ್ ಆರ್ಥೈಟಿಸ್‌ನಂತಹ ಸಂಧಿನೋವುಗಳ ಜತೆಗೆ ಬಾಯಿಯ ಬ್ಯಾಕ್ಟೀರಿಯಾ ಸೋಂಕುಗಳು ಸಂಬಂಧ ಹೊಂದಿರಬಹುದು. ಬಾಯಿಯಲ್ಲಿರುವ ಬ್ಯಾಕ್ಟೀರಿಯಾಗಳು ರೋಗಪ್ರತಿರೋಧಕ ಪ್ರತಿಕ್ರಿಯೆಯನ್ನು ಪ್ರಚೋದಿಸುವ ಮೂಲಕ ರುಮಟಾಯಿಡ್ ಆರ್ಥೈಟಿಸ್‌ಗೆ ಕಾರಣವಾಗಬಲ್ಲುದು.
ಬ್ಯಾಕ್ಟೀರಿಯಾಗಳು ಬಾಯಿಯಿಂದ ರಕ್ತ ಪ್ರವಾಹದ ಮೂಲಕ ಸಂಚರಿಸಿ ಸಂಧಿಗಳನ್ನು ಮತ್ತು ಸಂಧಿ ಜೋಡಣೆಯ ಭಾಗವನ್ನು ಸೇರಿಕೊಳ್ಳಬಹುದು. ಇದನ್ನು ತಡೆಗಟ್ಟಲು ಬಾಯಿಯ ನೈರ್ಮಲ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳಬೇಕು.
ಬಾಯಿಯ ನೈರ್ಮಲ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳಲು ಪ್ರತೀ ದಿನ ಚೆನ್ನಾಗಿ ಹಲ್ಲುಜ್ಜುವುದು ಮತ್ತು ಫ್ಲಾಸ್ ಮಾಡಿ ಕೊಳ್ಳುವುದು ಅಗತ್ಯ. ಈ ಮೂಲಕ ಬಾಯಿಯ ಸೋಂಕನ್ನು ಮತ್ತು ಉರಿಯೂತವನ್ನು ಉಂಟುಮಾಡಬಹುದಾದ ಬ್ಯಾಕ್ಟೀರಿಯಾಗಳನ್ನು ನಿವಾರಿಸಿಕೊಳ್ಳಬಹುದು.
ನಿಯಮಿತವಾಗಿ ಬಾಯಿ, ಹಲ್ಲುಗಳ ತಪಾಸಣೆ ಮಾಡಿಸಿ ಕೊಳ್ಳುವುದು ಕೂಡ ಅಷ್ಟೇ ಮುಖ್ಯ. ವರ್ಷಕ್ಕೊಮ್ಮೆ ಅಥವಾ ಅಗತ್ಯಬಿದ್ದರೆ ಹೆಚ್ಚು ಬಾಯಿ ತಪಾಸಣೆ ಮಾಡಿಸಿಕೊಳ್ಳಬೇಕು.
ಸಂಧಿ ನೋವು ಅಥವಾ ಆರ್ಥೈಟಿಸ್‌ನ ಲಕ್ಷಣ ಇದ್ದರೆ ವೈದ್ಯರ ಜತೆಗೆ ಸಮಾಲೋಚನೆ ನಡೆಸಿ ಅದಕ್ಕೆ ಕಾರಣವಾಗಿರ ಬಹುದಾದ ಆಂತರಿಕ ಕಾರಣಗಳನ್ನು ಕಂಡುಕೊಳ್ಳಬೇಕು.
ಡಾ| ಆನಂದದೀಪ್ ಶುಕ್ಲಾ,
ಅಸೋಸಿಯೇಟ್ ಪ್ರೊಫೆಸರ್,
ಓರಲ್ ಸರ್ಜರಿ ವಿಭಾಗ,
ಎಂಸಿಒಡಿಎಸ್, ಮಾಹೆ, ಮಣಿಪಾಲ
(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಓರಲ್ ಸರ್ಜರಿ ವಿಭಾಗ, ಕೆಎಂಸಿ, ಮಾಹೆ, ಮಂಗಳೂರು)