ಮಸ್ಕಿ ಸೇರಿ ಜಿಲ್ಲೆಯ ಬಹುತೇಕ ಕಡೆ ಈ ಬಾರಿ ತೊಗರಿಯನ್ನು ಯತೇತ್ಛವಾಗಿ ಬಿತ್ತನೆ ಮಾಡಲಾಗಿತ್ತು. ಆದರೆ, ಅಕಾಲಿಕ ಮಳೆಯಿಂದ ಕೆಲವು ಕಡೆ ಹಾನಿಯಾಗಿದ್ದು, ಉಳಿದ ಬೆಳೆಯನ್ನು
ಕಟಾವು ಮಾಡಿ ರೈತರು ರಾಶಿ ಹಾಕಿದ್ದಾರೆ.
Advertisement
ಆದರೆ, ಸೂಕ್ತ ಬೆಲೆ ಇಲ್ಲದ ಕಾರಣ ರೈತರು ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಹಿಂದೇಟು ಹಾಕಿದ್ದರು. ಹೀಗಾಗಿ ಸರಕಾರ ರೈತರು ಬೆಳೆದ ತೊಗರಿ ಬೆಳೆಯನ್ನು ಖರೀದಿ ಮಾಡಲು ಎಪಿಎಂಸಿ,ಟಿಎಪಿಎಂಸಿ, ಪಿಎಸ್‌ಎಸ್‌ಎನ್‌ಗಳಲ್ಲಿ ತೊಗರಿ ಖರೀದಿ ಕೇಂದ್ರಗಳನ್ನು ಒಂದು ತಿಂಗಳ ಹಿಂದೆ ಆರಂಭ ಮಾಡಿದೆ. ಕ್ವಿಂಟಲ್ ತೊಗರಿಗೆ 6200 ರೂ. ನಂತೆ ದರ ನಿಗದಿ ಮಾಡಿದ್ದು, ಖರೀದಿ ಕೇಂದ್ರಗಳಲ್ಲಿ ತೊಗರಿ ಮಾರಾಟ ಮಾಡಲು ಆಸಕ್ತರಿರುವ ರೈತರು ತಮ್ಮ ಹೆಸರುಗಳನ್ನು ಖರೀದಿ ಕೇಂದ್ರಗಳಲ್ಲಿ ನೋಂದಾಯಿಸಲು ಅವಕಾಶ ನೀಡಲಾಗಿತ್ತು. ಈ ಪ್ರಕಾರ ಮಸ್ಕಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, ಗುಡದೂರು, ಬಳಗಾನೂರು, ತುರುವಿಹಾಳ, ಪಾಮನಕಲ್ಲೂರು, ಹಾಲಾಪೂರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳಲ್ಲಿ ಸಾವಿರಾರು ರೈತರು ತಮ್ಮ ಹೆಸರುಗಳನ್ನು ನೋಂದಣಿ ಮಾಡಿದ್ದಾರೆ. ಆದರೆ, ಹೆಸರು ನೋಂದಣಿ ಮಾಡಿಕೊಂಡ ರೈತರ ತೊಗರಿಗಳನ್ನು ಖರೀದಿ ಮಾಡುವುದಕ್ಕೆ ಇದುವರೆಗೂ ಚಾಲನೆ ಸಿಕ್ಕಿಲ್ಲ.
ಮಾಡಲು ಸರಕಾರ ಇದುವರೆಗೆ ಆದೇಶ ನೀಡಿಲ್ಲ. ಖರೀದಿಗೆ ಬೇಕಾದ ತಂತ್ರಾಂಶಗಳನ್ನು ನೀಡಿಲ್ಲ. ಹೀಗಾಗಿ ಖರೀದಿಯನ್ನು ಆರಂಭಿಸಿಲ್ಲ ಎನ್ನುತ್ತಾರೆ ಖರೀದಿ ಕೇಂದ್ರದ ಸಿಬ್ಬಂದಿ. ಆದರೆ ಖರೀದಿ ಕೇಂದ್ರವನ್ನೇ ನಂಬಿಕೊಂಡು ಮಾರಾಟ ಮಾಡದೇ ರಾಶಿ ಇಟ್ಟುಕೊಂಡ ರೈತರು ಮಾತ್ರ ಸರಕಾರದ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ.
Related Articles
Advertisement