Advertisement
ಚಂದ್ರಯಾನ -2 ಪರಿಕರಗಳಾದ ಆರ್ಬಿಟ್ (ಕಕ್ಷೆಗಾಮಿ), ವಿಕ್ರಂ ಹೆಸರಿನ ಲ್ಯಾಂಡರ್ (ಚಂದ್ರನ ಮೇಲೆ ಪರಿಕರ ಇಳಿಸುವ ಸಾಧನ), ಪ್ರಗ್ಯಾನ್ ಹೆಸರಿನ ರೋವರ್ (ಚಂದ್ರನ ಮೇಲೆ ವಿವಿಧ ಪ್ರಯೋಗ ನಡೆಸುವ ರೋಬೋಟ್ ಸಾಧನ)ಗಳನ್ನು ಬೆಂಗಳೂರಿನ ಮಾರತಹಳ್ಳಿಯಲ್ಲಿರುವ ಸ್ಪೇಸ್‌ಕ್ರಾಫ್ಟ್ ಇಂಟಿಗ್ರೇಷನ್ ಟೆಸ್ಟ್ ಎಸ್ಟಾಬ್ಲಿಷ್‌ಮೆಂಟ್(ಐಸೈಟ್)ನಲ್ಲಿಯೇ ಸಿದ್ಧಪಡಿಸಲಾಗಿದೆ. ಈ ಎರಡೂ ಉಪಕರಣಗಳನ್ನು ಸಾಕಷ್ಟು ಬಾರಿ ಪರೀಕ್ಷೆಗೆ ಒಳಪಡಿಸಲಾಗಿದೆ.
Related Articles
Advertisement
ಅಶೋಕ ಚಕ್ರ ಅಚ್ಚೊತ್ತಲಿದೆ: ಪ್ರಗ್ಯಾನ್ ರೋವರ್‌ನಲ್ಲಿ ಒಟ್ಟು ಆರು ಚಕ್ರಗಳಿದ್ದು, ಅವುಗಳಲ್ಲಿ ಎರಡೂ ಚಕ್ರಗಳಲ್ಲಿ ಒಂದು ಬದಿಯ ಚಕ್ರದಲ್ಲಿ ಅಶೋಕ ಚಕ್ರ, ಮತ್ತೂಂದರಲ್ಲಿ ಇಸ್ರೋ ಲಾಂಛನ ಹಾಕಲಾಗಿದೆ. ಲ್ಯಾಡರ್‌ನಲ್ಲಿ ತ್ರಿವರ್ಣ ಧ್ವಜ ಹಾಕಲಾಗಿದೆ. ಚಂದ್ರನ ಮೇಲೆ ರೋವರ್ ಸಂಚರಿಸುವಾಗ ಅಶೋಕ ಚಕ್ರ, ಇಸ್ರೋ ಲಾಂಛನವನ್ನು ಅಚ್ಚೊತ್ತಲಿದೆ. ಈ ಅಚ್ಚು ಚಂದ್ರನ ಮೇಲ್ಮೆ„ನಲ್ಲಿ ನೂರಾರು ವರ್ಷ ಉಳಿಯಲಿದೆ. ಈ ಕಾರ್ಯಾಚರಣೆಯು ಚಂದ್ರನ ದಕ್ಷಿಣ ಧ್ರುವದಲ್ಲಿ ಒಟ್ಟು 1 ಚಂದ್ರಮಾನ ದಿನ (14 ಭೂಮಿ ದಿನ) ಅಂದರೆ, ಸೆ.6 ರಿಂದ 20ರವರೆಗೆ ನಡೆಯಲಿದೆ.
* 2019ರ ಜುಲೈ 15ರಂದು ಜಿಎಸ್‌ಎಲ್‌ವಿ ಮಾರ್ಕ್-3 ಬಾಹ್ಯಾಕಾಶ ನೌಕೆ ಮೂಲಕ ಉಡಾವಣೆ. (3.8 ಟನ್ ತೂಕ) 14 ಪೇಲೋಡ್ಸ್ ಬಳಕೆ.
* ಜುಲೈ 15 ನಸುಕು 2 ಗಂಟೆ 51 ನಿಮಿಷಕ್ಕೆ ಉಡಾವಣೆ. ಆ.1ರಂದು ಚಂದ್ರನ ಕಕ್ಷೆ ಪ್ರವೇಶ. ಸೆ. 6ರಂದು ಚಂದ್ರನ ಮೇಲ್ಮೆ„ ಸ್ಪರ್ಶ. ಸೆ.6 ರಿಂದ 20ರವರೆಗೆ ಕಾರ್ಯಾಚರಣೆ.
* ಆರ್ಬಿಟ್ ಆಯಸ್ಸು – 1 ವರ್ಷ. ತೂಕ – 2,378 ಕೆ.ಜಿ. ಚಂದ್ರನ ಮೇಲ್ಮೆ„ನಿಂದ 100 ಕಿ.ಮೀ ಅಂತರದಲ್ಲಿ ಸುತ್ತಾಟ.
* ಲ್ಯಾಂಡರ್ ಆಯಸ್ಸು – 14 ದಿನ, 1,471 ಕೆ.ಜಿ. (1 ಚಂದ್ರಮಾನ ದಿನ).
*ರೋವರ್ ಆಯಸ್ಸು – 14 ದಿನ. 27 ಕೆ.ಜಿ. (1 ಚಂದ್ರಮಾನ ದಿನ).
* ಚಂದ್ರಯಾನದ ಒಟ್ಟು ದೂರ – 3.84 ಲಕ್ಷ ಕಿ.ಮೀ.
* ಚಂದ್ರಯಾನ-2ರ ವೆಚ್ಚ – 603 ಕೋಟಿ ರೂ. ಬಾಹ್ಯಾಕಾಶ ನೌಕೆಯ ವೆಚ್ಚ – 375 ಕೋಟಿ ರೂ. ಒಟ್ಟು ವೆಚ್ಚ – 978 ಕೋಟಿ ರೂ.