Advertisement
ದಿಶಾ ಅವರೇ ರೈತರ ಪ್ರತಿಭಟನೆಗೆ ಹೇಗೆ ಬೆಂಬಲ ನೀಡಬೇಕು ಎಂಬ ವಿವರವಿದ್ದ ಟೂಲ್ ಕಿಟ್ ಅನ್ನು ಸ್ವೀಡನ್‌ನ ಹೋರಾಟಗಾರ್ತಿ ಗ್ರೆಟಾ ಥನ್ ಬರ್ಗ್‌ಗೆ ಟೆಲಿಗ್ರಾಂ ಆ್ಯಪ್ ಮೂಲಕ ರವಾನಿಸಿದ್ದರು. ಅದರಲ್ಲಿ ರೈತರ ಟ್ರ್ಯಾಕ್ಟರ್ ಪರೇಡ್‌ಗೂ ಮುನ್ನ “ಡಿಜಿಟಲ್ ಸ್ಟ್ರೆ „ಕ್’ (ರೈತರ ಪರ ಸರಣಿ ಟ್ವೀಟ್) ಮಾಡುವಂತೆಯೂ ಸೂಚಿಸ ಲಾಗಿತ್ತು. ಜತೆಗೆ ಟೂಲ್‌ಕಿಟ್ ಹಂಚಿಕೊಳ್ಳ ಲೆಂದು ವಾಟ್ಸ್‌ಆ್ಯಪ್ ಗ್ರೂಪ್ ರಚಿಸಿ, ಅದನ್ನೀಗ ಡಿಲೀಟ್ ಮಾಡಿದ್ದಾರೆ ಎಂದು ಈ ಕುರಿತು ಪತ್ರಿಕಾ ಗೋಷ್ಠಿಯಲ್ಲಿ ದಿಲ್ಲಿ ಪೊಲೀಸ್ ಜಂಟಿ ಆಯುಕ್ತ (ಸೈಬರ್) ಪ್ರೇಮ್‌ನಾಥ್ ಮಾಹಿತಿ ನೀಡಿದ್ದಾರೆ.
ತಮ್ಮ ವಿರುದ್ಧ ವಾರಂಟ್ ಜಾರಿಯಾ ಗುತ್ತಲೇ ವಕೀಲೆ ನಿಕಿತಾ ಜಾಕೋಬ್ ಸೋಮವಾರ ನಿರೀಕ್ಷಣ ಜಾಮೀನು ಕೋರಿ ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ನಾಲ್ಕು ವಾರಗಳ ಕಾಲ ನಿರೀಕ್ಷಣ ಜಾಮೀನು ನೀಡುವಂತೆ ಅವರು ಮನವಿ ಮಾಡಿದ್ದು, ಮಂಗಳವಾರ ಅರ್ಜಿಯ ವಿಚಾರಣೆ ನಡೆಯಲಿದೆ