ಮುಂಬೈ: ರೈತರ ಪ್ರತಿಭಟನೆಗೆ ಸಂಬಂಧಿಸಿದ “ಟೂಲ್ ಕಿಟ್” ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿದ್ದ ವಕೀಲೆ ನಿಕಿತಾ ಜೇಕಬ್ ಗೆ ಬಾಂಬೆ ಹೈಕೋರ್ಟ್ ಬುಧವಾರ(ಫೆ.17, 2021) ಮಧ್ಯಂತರ ರಿಲೀಫ್ ನೀಡಿದೆ. ಟೂಲ್ ಪ್ರಕರಣದಲ್ಲಿ 3 ವಾರಗಳ ನಿರೀಕ್ಷಣಾ ಜಾಮೀನು ಮಾಡಿ ಬಾಂಬೆ ಹೈಕೋರ್ಟ್ ಆದೇಶ ನೀಡಿದೆ.
ಇದನ್ನೂ ಓದಿ:ಎಫ್‌ಡಿಎ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಗೋಕಾಕ್ ಕಿಂಗ್ ಪಿನ್ ಅಂದರ್
ಈಗಾಗಲೇ ಪ್ರಕರಣದ ಆರೋಪಿ ಶಂತನು ಮುಲುಕ್ ಗೆ ಮಂಗಳವಾರ(ಫೆ.16, 2021) ಬಾಂಬೆ ಹೈಕೋರ್ಟ್ ಹತ್ತು ದಿನಗಳ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು. ಟೂಲ್ ಕಿಟ್ ಪ್ರಕರಣದಲ್ಲಿ ತನ್ನನ್ನು ಬಂಧಿಸದಂತೆ ನಿರೀಕ್ಷಣಾ ಜಾಮೀನು ನೀಡಬೇಕೆಂದು ಕೋರಿ ನಿಕಿತಾ ಬಾಂಬೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.
ನಿಕಿತಾ ಜೇಕಬ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬಾಂಬೆ ಹೈಕೋರ್ಟ್ ನ ಜಸ್ಟೀಸ್ ಪಿಡಿ ನಾಯ್ಕ್ ಏಕಸದಸ್ಯ ಪೀಠ ವಿಚಾರಣೆ ನಡೆಸಿ ಮಧ್ಯಂತರ ಜಾಮೀನು ನೀಡಿರುವುದಾಗಿ ವರದಿ ತಿಳಿಸಿದೆ.
ದೆಹಲಿ ಪೊಲೀಸರ ಪ್ರಕಾರ, ಬೆಂಗಳೂರಿನ ದಿಶಾ ರವಿ, ನಿಕಿತಾ ಜೇಕಬ್ ಮತ್ತು ಪುಣೆ ಎಂಜಿನಿಯರ್ ಶಂತನು ಮುಲುಕ್ ರೈತರ ಹೋರಾಟಕ್ಕೆ ಸಂಬಂಧಿಸಿದ ಟೂಲ್ ಕಿಟ್ ಅನ್ನು ರಚಿಸಿ ಅದನ್ನು ಗ್ರೆಟಾ ಥನ್ ಬರ್ಗ್ ಜತೆ ಹಂಚಿಕೊಂಡಿರುವುದಾಗಿ ತಿಳಿಸಿದ್ದಾರೆ.