Advertisement

Video;KGF ಚಾಪ್ಟರ್-2; ತೂಫಾನ್…ಚಿತ್ರದ ಮೊದಲ ಲಿರಿಕಲ್ ವಿಡಿಯೋ ಬಿಡುಗಡೆ, ಬಸ್ರೂರ್ ಸಾಹಿತ್ಯ

12:52 PM Mar 21, 2022 | Team Udayavani |

ಬೆಂಗಳೂರು: ಸ್ಯಾಂಡಲ್ ವುಡ್ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ಕೆಜಿಎಫ್ ಚಾಪ್ಟರ್-2 ಸಿನಿಮಾದ ತೂಫಾನ್ ಲಿರಿಕಲ್ ಹಾಡನ್ನು ಸೋಮವಾರ (ಮಾರ್ಚ್ 21) ಹೊಂಬಾಳೆ ಫಿಲ್ಮ್ಸ್ ಟ್ವೀಟರ್ , ಇನ್ಸ್ ಸ್ಟಾಗ್ರಾಮ್ ಹಾಗೂ ಯೂಟ್ಯೂಬ್ ಸೇರಿದಂತೆ ಸಾಮಾಜಿಕ ಜಾಲತಾಣಗಗಳಲ್ಲಿ ಬಿಡುಗಡೆ ಮಾಡಿದೆ.

Advertisement

ಇದನ್ನೂ ಓದಿ:Watch Video: ಮಧ್ಯರಾತ್ರಿ 10 ಕಿ.ಮೀ. ಓಟ…ಈ ಯುವಕನ ಓಟದ ಹಿಂದಿನ ಕಾರಣ ಸ್ಫೂರ್ತಿದಾಯಕ

ರವಿ ಬಸ್ರೂರ್ ಸಂಗೀತ ನೀಡಿರುವ ತೂಫಾನ್ ಹಾಡಿನಲ್ಲಿ ಯಶ್ ಕಾಣಿಸಿಕೊಂಡಿದ್ದಾರೆ. ಮತ್ತೊಂದೆಡೆ ಕೆಜಿಎಫ್ ಚಾಪ್ಟರ್ 2 ಸಿನಿಮಾದ ಟ್ರೈಲರ್ ಮಾರ್ಚ್ 27ರಂದು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿದೆ.

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್-2 ಸಿನಿಮಾ 2022ರ ಏಪ್ರಿಲ್ 14ರಂದು ದೇಶಾದ್ಯಂತ ಕನ್ನಡ, ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂನಲ್ಲಿ ತೆರೆಕಾಣಲಿದೆ. ಕೆಜಿಎಫ್ ಚಾಪ್ಟರ್ -1 ಸಿನಿಮಾ ದಾಖಲೆಯ ಯಶಸ್ಸು ಪಡೆದಿತ್ತು.

ಇದೀಗ ಕೆಜಿಎಫ್ ಚಾಪ್ಟರ್-2 ಸಿನಿಮಾ ಬಿಡುಗಡೆಗೆ ದಿನಗಣನೆ ಆರಂಭವಾದ ಬೆನ್ನಲ್ಲೇ ಚಿತ್ರದ ತೂಫಾನ್ ಲಿರಿಕಲ್ ವಿಡಿಯೋವನ್ನು ಬಿಡುಗಡೆಗೊಳಿಸುವ ಮೂಲಕ ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲಿಸುವಂತೆ ಮಾಡಿದೆ.

Advertisement

ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ -2 ಸಿನಿಮಾದಲ್ಲಿ ಬಾಲಿವುಡ್ ನ ಸಂಜಯ್ ದತ್, ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ ಹಾಗೂ ಪ್ರಕಾಶ್ ರೈ ಸೇರಿದಂತೆ ಹಲವು ಪ್ರಮುಖ ನಟರು ಮುಖ್ಯಭೂಮಿಕೆಯಲ್ಲಿದ್ದಾರೆ.

ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ 2 ಸಿನಿಮಾದ ನಿರ್ಮಾಪಕ ವಿಜಯ್ ಕಿರಗಂದೂರ್. ಇದೀಗ ರಾಕಿ ಹಾಗೂ ಅಧೀರನ ಅಬ್ಬರವನ್ನು ತೆರೆಮೇಲೆ ಕಾಣಲು ಸಿನಿ ಪ್ರಿಯರು ಕಾಯುತ್ತಿದ್ದು, ಏಪ್ರಿಲ್ 14ರಂದು ದೇಶಾದ್ಯಂತ ಸಿನಿಮಾ ಬಿಡುಗಡೆಯಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next