Advertisement

ಎಂಥಾ ಕರಕರ್ರೆ ಮಾರ್ರೇ

10:18 AM Sep 20, 2019 | mahesh |

ಕೆಲವೊಂದು ಶಬ್ದಗಳನ್ನು ಕೇಳಿದರೆ ಭಯಂಕರ ಕಿರಿಕಿರಿಯಾಗುತ್ತದೆ. ಅದರಲ್ಲೂ ಚಾಕುವಿನಿಂದ ಬಾಟಲನ್ನು ಉಜ್ಜುತ್ತಿದ್ದರೆ, ಚಮಚದಿಂದ ಗಾಜನ್ನು ತೀಡಿದಾಗ ಉತ್ಪತ್ತಿಯಾಗುವ ಶಬ್ದವನ್ನು ಕೇಳಿದೊಡನೆಯೇ ನಖಶಿಕಾಂತ ಕೋಪವೇ ಬಂದು ಬಿಡುತ್ತದೆ. ಇಪ್ಪತ್ತೆರಡು ಸಾವಿರ ಹರ್ಡ್ಸ್‌ ತನಕ ಶಬ್ದಗಳನ್ನು ತಡೆದು ಕೊಳ್ಳುವ ಕಿವಿಗೆ, ಈ ಚಿಲ್ಲರೆ ಶಬ್ದ ಏಕೆ ಕಿರಿಕಿರಿ ಮಾಡುತ್ತದೆ? ಇಲ್ಲಿದೆ ಉತ್ತರ.

Advertisement

ಈ ಶಬ್ದಗಳನ್ನೊಮ್ಮೆ ನೆನಪಿಸಿಕೊಳ್ಳಿ …
1. ಬಾಟಲಿಯ ಮೇಲೆ ಉಜ್ಜುತ್ತಿರುವ ಚಾಕು
2. ಗಾಜನ್ನು ಚಮಚದಿಂದ ತೀಡಿದರೆ
3. ಶಾಲೆಯ ಕಪ್ಪುಹಲಗೆಯ ಮೇಲೆ ಗೀಚುತ್ತಿರುವ ಬಳಪ
4. ಗಾಜಿನ ಕಪ್ಪುಹಲಗೆಯ ಮೇಲೆ ಉಗುರುಗಳ ಕೆರೆತ
5. ವೇಗದಿಂದ ಬರುತ್ತಿರುವ ಸೈಕಲ್‌ಗೆ ಜೋರಾಗಿ ಹಾಕಿದ ಬ್ರೇಕ್‌
6. ಪುಟ್ಟಮಗುವಿನ ಜೋರಾದ ಅಳು
7. ಗೋಡೆಯ ಮೇಲೆ ತೂತು ಕೊರೆಯುತ್ತಿರುವ ಯಂತ್ರ

ಕೇಳಿಸಿಕೊಂಡ್ರ ಶಬ್ದನಾ? ಈ ವಾಕ್ಯಗಳನ್ನು ಓದುತ್ತಲೇ ಮನಸಲ್ಲಿ ಶಬ್ದಗಳ ಊಹೆ ಶುರುವಾಗಿ, ಮೈ ಜುಂ ಅನ್ನಿಸುತ್ತಿದೆ ಅಲ್ಲವೇ? ಈ ರೀತಿ ಶಬ್ದ ಕೇಳಿದಾಕ್ಷಣ ನಮ್ಮ ವರ್ತನೆಗಳು ಬದಲಾಗುವುದು ಏಕೆ ಎಂದು ಒಮ್ಮೆಯಾದರೂ ಯೋಚಿಸಿದ್ದಿರಾ ? ಅಂದಹಾಗೆ, ಮೇಲೆ ಪಟ್ಟಿಮಾಡಿದ ಧ್ವನಿಗಳೆಲ್ಲ ಸಮೀಕ್ಷೆಯೊಂದರ ಪ್ರಕಾರ, ಜಗತ್ತಿನ ಅತ್ಯಂತ ಕಿರಿಕಿರಿ ಮಾಡುವ ಧ್ವನಿಗಳಲ್ಲಿ ಅತಿಹೆಚ್ಚು ಮತಗಳನ್ನು ಪಡೆದಿವೆ. ಅಲ್ಲಿಗೆ, ಇದೊಂದು ಜಾಗತಿಕ ಕಿರಿಕಿರಿ ಎಂದಾಯಿತು. ವಿಜ್ಞಾನದಲ್ಲಿ ಇದಕ್ಕೂ ಉತ್ತರವಿದೆ.

ನಮ್ಮ ಕಿವಿಗಳು ಇಪ್ಪತ್ತು ಹರ್ಡ್ಸ್‌ ನಿಂದ ಇಪ್ಪತ್ತು ಸಾವಿರ ಹರ್ಡ್ಸ್‌ ಗಳವರೆಗಿನ ಧ್ವನಿ ತರಂಗಗಳನ್ನು ಗ್ರಹಿಸಬಲ್ಲವು. ಈ ತರಂಗಗುತ್ಛದಲ್ಲಿ ಎರಡುಸಾವಿರದಿಂದ ನಾಲ್ಕುಸಾವಿರ ಹರ್ಡ್ಸ್‌ನಷ್ಟು ಶಬ್ದ ಹರಿಯುತ್ತದೆ. 20 ಸಾವಿರ ಹರ್ಡ್ಸ್‌ನ್ನು ತಡೆದು ಕೊಳ್ಳುವ ಕಿವಿಗೆ ಕಡಿಮೆ ಹರ್ಡ್ಸ್‌ನ ಶಬ್ದವನ್ನೇಕೆ ತಾಳಿಕೊಳ್ಳಲು ಆಗುವುದಿಲ್ಲ ಅನ್ನೋ ಅನುಮಾನ ಸಾಮಾನ್ಯ. ನಮ್ಮ ಮೆದುಳಿಗೆ, ದೇಹ-ಮನಸ್ಸನ್ನು ಕಿರಿಕಿರಿ ಮಾಡುವ ಶಬ್ದಗಳನ್ನು ತಡೆದು ಕೊಳ್ಳುವುದಿಲ್ಲ. ಅದರ ಈ ಎಲ್ಲ ಧ್ವನಿಗಳೂ ಇದೇ ವ್ಯಾಪ್ತಿಯಲ್ಲಿ ಬರುತ್ತವೆ. ಎಲ್ಲಾ ಓಕೆ, ಕಿರಿಕಿರಿ ಯಾಕೆ ಅಂತಿರಾ? ಇದಕ್ಕೆ ಉತ್ತರ ಹುಡುಕುವತ್ತ ವಿಜ್ಞಾನಿಗಳ ತಂಡವೊಂದು ಇತ್ತೀಚೆಗೆ ಹಲವು ಪ್ರಯೋಗಗಳನ್ನು ನಡೆಸಿ ಒಂದು ನಿರ್ಧಾರಕ್ಕೆ ಬಂದಿದೆ.

ನಮ್ಮ ಮೆದುಳಿನಲ್ಲಿ ಮೂರ್ನಾಲ್ಕು ಭಾಗಗಳಿದ್ದು, ಅದರಲ್ಲಿ ಒಂದೊಂದು ಭಾಗವೂ ತನ್ನದೇ ಆದ ಕಾರ್ಯವನ್ನು ನಿರ್ವಹಿಸುತ್ತದೆ. ಎಮಿಗಾxಲಾ ಎಂಬ ಭಾಗವು ನಮ್ಮ ಭಾವನೆಗಳನ್ನು ನಿಯಂತ್ರಿಸಿದರೆ , ಆಡಿಟರಿ ಕಾರ್ಟೆಕೆಕ್ಸ್‌ (ಶ್ರವಣ ಚಿಪ್ಪು) ಕಿವಿಯಿಂದ ಗ್ರಹಿಸಿದ ಧ್ವನಿಯನ್ನು ಸಂಕೇತವನ್ನಾಗಿ ಪರಿವರ್ತಿಸುವ ಕೆಲಸ ಮಾಡುತ್ತದೆ. ಈ ಕಿರಿಕಿ, ಧ್ವನಿ ತರಂಗಗಳನ್ನು ಗ್ರಹಿಸಿದ ಸಂಕೇತಗಳನ್ನು ಶ್ರವಣದ ಚಿಪ್ಪು ರವಾನಿಸಿದಾಗಲೆಲ್ಲ ಎಮಿಗಾಲಾವು ತುಸುಜಾಸ್ತಿಯೇ ಸ್ಪಂದಿಸುವ ಪರಿಣಾಮವಾಗಿ ನಮ್ಮ ದೇಹವೂ ಅದೇ ರೀತಿ ನಕಾರಾತ್ಮಕವಾಗಿ ಪ್ರತಿಕ್ರಿಯಿಸುತ್ತದೆ. ಈ ಸಂದರ್ಭದಲ್ಲಿ, ಮನುಷ್ಯ ತನಗೆ ಆಘಾತ ಅಥವಾ ದಿಗಿಲುಂಟಾದಾಗ ಪ್ರತಿಕ್ರಿಯಿಸುವ ರೀತಿಯಲ್ಲೇ ಈ ಶಬ್ದಗಳನ್ನು ಕೇಳಿದಾಗಲೂ ರಿಯಾಕ್ಟ್ ಮಾಡುವುದನ್ನು ಸಂಶೋಧನೆ ಮೂಲಕ ವಿಜ್ಞಾನಿಗಳು ಗುರುತಿಸಿದ್ದಾರೆ. ಇದೇ ರೀತಿ ಪುಟ್ಟ ಮಗುವಿನ ನಗುವನ್ನೋ ಅಥವಾ ಇಂಪಾದ ಸಂಗೀತವನ್ನೋ ಕೇಳಿದಾಗ ಮೆದುಳಿನ ಇದೇ ಭಾಗಗಳು ಸಕಾರಾತ್ಮವಾಗಿ ಸ್ಪಂದಿಸುತ್ತವೆ. ಇದಕ್ಕೂ ಕೂಡ ಎಮಿಗಾxಲಾನೇ ಕಾರಣ. ಸುಶ್ರಾವ್ಯ ದನಿಗೆ ಇದು ಪೂರಕವಾಗಿ ಸ್ಪಂದಿಸುತ್ತದೆ. ಆಗ ದೇಹದ ಪ್ರತಿಕ್ರಿಯೆ ಕೂಡ ಸಕಾರಾತ್ಮಕವಾಗಿರುತ್ತದೆ. ಇದಕ್ಕೇ ಅಲ್ವೇ ಸಂಗೀತಕ್ಕೆ ರೋಗವನ್ನೂ ಸರಿಪಡಿಸುವ ಶಕ್ತಿ ಇದೆ ಅಂತ ಹಿರಿಯರು ಹೇಳುವುದು ?

Advertisement

ನಮ್ಮ ಕಿವಿಗಳು ಏಕೆ ಈ ತರಂಗಗಳಿಗಷ್ಟೇ ಹೆಚ್ಚು ಸ್ಪಂದಿಸುತ್ತವೆ ಎಂಬುದರ ಬಗ್ಗೆ ವಿಜಾ`ನಿಗಳಲ್ಲಿಯೇ ಭಿನ್ನಾಭಿಪ್ರಾಯವಿದ್ದರೂ ನಮ್ಮ ಕಿವಿಗಳ ವಿನ್ಯಾಸವೇ ಮುಖ್ಯ ಕಾರಣವೆಂಬುದು ಸದ್ಯದ ಮಟ್ಟಿಗೆ ಎಲ್ಲರೂ ಒಪ್ಪುವ ವಾದ. ಈ ಸಂಶೋಧನೆ ಮುಂಬರುವ ದಿನಗಳಲ್ಲಿ ಹಲವು ವರ್ಷಗಳಿಂದ ವೈದ್ಯರ ಮಂಡೆಬಿಸಿ ಮಾಡುತ್ತಿರುವ ಮೈಗ್ರೇನ್‌ ( ತೀವ್ರತರ ತಲೆನೋವು) ಮಿಸೊಫೋನಿಯಾ ( ಧ್ವನಿಗಳಿಂದಲೇ ಉದ್ಭವಿಸುವ ತಲೆನೋವು) ನಂಥ ಕಾಯಿಲೆಗಳಿಗೆ ಪ್ರಭಾವಿ ಚಿಕಿತ್ಸೆಯನ್ನು ಕಂಡು ಹಿಡಿಯಲು ಸಹಕಾರಿಯಾಗಬಹುದು ಎಂಬ ಆಶಾಭಾವನೆ ಮೂಡಿದೆ.

ಸುನೀಲ್‌ ಬಾರ್ಕೂರ್‌

Advertisement

Udayavani is now on Telegram. Click here to join our channel and stay updated with the latest news.

Next