Advertisement

ಜಾಲತಾಣಗಳ ಬಳಕೆಯಲ್ಲಿ ಜಾಣತನವಿರಲಿ

01:30 AM Oct 07, 2018 | |

ಒಂದು ಅಧ್ಯಯನದ ಪ್ರಕಾರ ಸುಮಾರು 35 ಪ್ರತಿಶತಕ್ಕಿಂತಲೂ ಹೆಚ್ಚು ಜನರು ನಿತ್ಯ 4 ಗಂಟೆಗಳಿಗಳಿಗಿಂತಲೂ ಹೆಚ್ಚಿನ ಸಮಯವನ್ನು ಈ ಸಾಮಾಜಿಕ ಜಾಲತಾಣಗಳಲ್ಲಿ ವ್ಯಯಿಸುವ ಬಗ್ಗೆ ತಿಳಿಸಿದೆ. ಇದರಲ್ಲಿ ಯುವಕರೇ ಹೆಚ್ಚಿನ ಪ್ರಮಾಣದಲ್ಲಿರುವ ಬಗ್ಗೆಯೂ ವರದಿ ಮಾಡಲಾಗಿದೆ. ಯುವಕರು ಈ ಸಾಮಾಜಿಕ ಜಾಲತಾಣಗಳ ಸಾಧಕ ಬಾಧಕಗಳ ಬಗ್ಗೆ ಸರಿಯಾಗಿ ಅರಿಯದೇ ಅವುಗಳ ಪ್ರಭಾವಕ್ಕೆ ಸಿಲುಕುತ್ತಾರೆ.

Advertisement

ನಮ್ಮ ಜೀವನದ ಒಳ-ಹೊರಗಣ ಆವರಣವನ್ನು ಸಾಮಾಜಿಕ ಜಾಲತಾಣಗಳು ಪ್ರಭಾವಿಸುತ್ತವೆ. ಕುಳಿತರೂ ನಿಂತರೂ ಅದೇ ಗುಂಗಿನಲ್ಲಿರುವ ಜನ ಸಮೂಹ ಇಡೀ ಜಗತ್ತಿನಾದ್ಯಂತ ಹೆಚ್ಚಾಗುತ್ತಿದೆ. ನಾವು ಸುಖವಾಗಿ ನಿದ್ದೆ ಮಾಡುವ ಸಮಯಕ್ಕಿಂತಲೂ ಹೆಚ್ಚಿನ ಸಮಯವನ್ನು ಈ ಸಾಮಾಜಿಕ ಜಾಲತಾಣಗಳ ಸಹವಾಸದಲ್ಲಿ ಕಳೆಯುತ್ತೇವೆ. ಮೊಬೈಲ್‌ ಮತ್ತು ಕಂಪ್ಯೂಟರ್‌ ಹೊರತುಪಡಿಸಿದ ಬದುಕನ್ನು ಊಹಿಸಿಕೊಳ್ಳಲು ಕೂಡಾ ನಮಗೀಗ ಸಾಧ್ಯವಾಗುವುದಿಲ್ಲ. ಈ ಸಾಮಾಜಿಕ ಜಾಲತಾಣಗಳಿಗೆ ಮನುಷ್ಯ ತನ್ನ ಖಾಸಗಿ ಬದುಕನ್ನೂ ಗುತ್ತಿಗೆ ಕೊಟ್ಟಿರುವಂತಿದೆ. ಪರಿಣಾಮವಾಗಿ ತವಕ ತಲ್ಲಣಗಳ ನಡುವೆಯೇ ಆತ ಈ ಸಾಮಾಜಿಕ ಜಾಲತಾಣಗಳೊಂದಿಗೆ ವ್ಯವಹರಿಸಬೇಕಾಗಿದೆ. ನಮ್ಮ ದೇಹ ಮತ್ತು ಮನಸಿನ ಮೇಲೆ ಅನೇಕ ಬಗೆಯ ಅಡ್ಡ ಪರಿಣಾಮಗಳಾದರೂ ನಾವು ಅವುಗಳೊಂದಿಗೆ ರಾಜಿ ಮಾಡಿಕೊಂಡಂತೆ ಬದುಕು ನಡೆಸಿದ್ದೇವೆ. ಇಡೀ ಜಗತ್ತಿನಲ್ಲಿ ವ್ಯಕ್ತಿಯೊಬ್ಬ ಸರಾಸರಿ 135 ನಿಮಿಷ ಅಂತರ್ಜಾಲದ ಬಳಕೆಯಲ್ಲಿ ಕಳೆಯುವುದಿದೆ ಎಂದು ಹೇಳಲಾಗುತ್ತದೆ. ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್‌, ಯೂಟ್ಯುಬ್‌, ವಾಟ್ಸ್‌ಆ್ಯಪ್‌ಗ್ಳನ್ನು ಬಳಸಿಕೊಳ್ಳುವ ಪ್ರಮುಖ ರಾಷ್ಟ್ರಗಳಲ್ಲಿ ಭಾರತವೂ ಇದೆಯಾದರೂ ಇತ್ತೀಚಿನ ಅಂಕಿ ಅಂಶಗಳ ಪ್ರಕಾರ ಸ್ಪೇನ್‌ 88 ಪ್ರತಿಶತ, ಇಟಲಿ 82 ಪ್ರತಿಶತ ಮತ್ತು ಅಮೆರಿಕ 80 ಪ್ರತಿಶತ ಈ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳುವಲ್ಲಿ ಮುಂಚೂಣಿಯಲ್ಲಿವೆ. 

ಒಂದು ಅಧ್ಯಯನದ ಪ್ರಕಾರ ಸುಮಾರು 35 ಪ್ರತಿಶತಕ್ಕಿಂತಲೂ ಹೆಚ್ಚು ಜನರು ನಿತ್ಯ 4 ಗಂಟೆಗಳಿಗಳಿಗಿಂತಲೂ ಹೆಚ್ಚಿನ ಸಮಯವನ್ನು ಈ ಸಾಮಾಜಿಕ ಜಾಲತಾಣಗಳಲ್ಲಿ ವ್ಯಯಿಸುವ ಬಗ್ಗೆ ತಿಳಿಸಿದೆ. ಇದರಲ್ಲಿ ಯುವಕರೇ ಹೆಚ್ಚಿನ ಪ್ರಮಾಣದಲ್ಲಿರುವ ಬಗ್ಗೆಯೂ ವರದಿ ಮಾಡಲಾಗಿದೆ. ಯುವಕರು ಈ ಸಾಮಾಜಿಕ ಜಾಲತಾಣಗಳ ಸಾಧಕ ಬಾಧಕಗಳ ಬಗ್ಗೆ ಸರಿಯಾಗಿ ಅರಿಯದೇ ಅವುಗಳ ಪ್ರಭಾವಕ್ಕೆ ಸಿಲುಕುತ್ತಾರೆ. ನಮ್ಮ ಜೊತೆಯಲ್ಲಿ ಮುಖಾಮುಖೀಯಾಗಿ ಮತ್ತೆ ಮತ್ತೆ ಮಾತಿಗೆ ಸಿಗುವ, ಅಂತರಕ್ರಿಯೆಯಲ್ಲಿ ತೊಡಗುವ ಗೆಳೆಯರಿಗಿಂತಲೂ ನಮಗೆ ಫೇಸ್‌ಬುಕ್‌ ಗೆಳೆಯರು ದೂರವಿದ್ದರೂ ಹತ್ತಿರವಾಗುತ್ತಿರುವುದು ವಿಚಿತ್ರವಾದರೂ ಸತ್ಯ. ಆ ಮೂಲಕ ಖರೆ ಖರೆ ಸಂಬಂಧಗಳು ಹಳಸತೊಡಗಿವೆ. ಕೈಯಲ್ಲೊಂದು ಮೊಬೈಲಿದ್ದರೆ ತೀರಿತು, ಸುತ್ತಮುತ್ತಲಿರುವವರ ಖಬರೇ ಇಲ್ಲದಂತೆ ವ್ಯವಹರಿಸುವವರ ಪ್ರಮಾಣ ದಿನೇ ದಿನೇ ಹೆಚ್ಚಾಗುತ್ತಿದೆ. ಯಾವುದೇ ಸಂಗತಿಯಾಗಿರಲಿ ಅಲ್ಲಿ ಸಾಧಕ ಬಾಧಕಗಳು ಇದ್ದೇ ಇರುತ್ತವೆ ಈ ಸಾಮಾಜಿಕ ಜಾಲತಾಣಗಳಿಂದ ನಮ್ಮ ಯುವಕರಿಗಿರುವ ಪ್ರಯೋಜನಗಳನ್ನು ಹೀಗೆ ಹೇಳಬಹುದು

ವಿದ್ಯಾರ್ಥಿಗಳ ಬೆರಳ ತುದಿಯಲ್ಲಿ ಇಡೀ ಜಗತ್ತೇ ಹುದುಗಿರುತ್ತದೆ. ಒಂದೇ ಒಂದು ಕ್ಲಿಕ್‌ನಿಂದ ಆ ಜಗತ್ತು ಅನಾವರಣಗೊಳ್ಳುತ್ತದೆ. ಯಾವುದೇ ವಿಷಯದ ಬಗೆಗಿನ ಗೊಂದಲಕ್ಕೂ ಇಲ್ಲಿ ಉತ್ತರವಿದೆ.

ಸುಮಾರು 50 ಪ್ರತಿಶತದಷ್ಟು ಯುವಕರು ತಮ್ಮ ಪ್ರಾಯೋಜಿತ ಕೆಲಸಗಳಿಗೆ ಮತ್ತು ಅಧ್ಯಯನಕ್ಕಾಗಿ ಜಾಲತಾಣಗಳನ್ನು ಅವಲಂಬಿಸಿದ್ದಾರೆ.

Advertisement

ಮತದಾನದಲ್ಲಿ ಹೆಚ್ಚಳ ಮತ್ತು ಮತದಾರರ ಸಕ್ರಿಯ ಪಾಲ್ಗೊಳ್ಳುವಿಕೆಯಲ್ಲಿ ಸುಧಾರಣೆಯಾಗು ವಲ್ಲಿ ಸಾಮಾಜಿಕ ಜಾಲತಾಣಗಳು ನೆರವಾಗಿವೆ.

ಸಾಮಾಜಿಕ ಹಾಗೂ ರಾಜಕೀಯ ಬದಲಾವಣೆಗಾಗಿ ಮತ್ತು ಸಂಘಟನೆಯನ್ನು ಹುಟ್ಟು ಹಾಕಲು, ಸಮಾನ ಮನಸ್ಕರನ್ನು ಸಂಪರ್ಕಿಸಲು ಜಾಲತಾಣಗಳು ತುಂಬಾ ಉಪಯುಕ್ತವಾಗಿವೆ.

ಅಮೆರಿಕದಲ್ಲಿ ಸುಮಾರು 28 ಪ್ರತಿಶತದಷ್ಟು ಜನರು ಅಂತರ್ಜಾಲದ ಪತ್ರಿಕೆಗಳನ್ನು ಓದುತ್ತಾರೆ. 

ವ್ಯಕ್ತಿಗತ ಬದಲಾವಣೆ ಮತ್ತು ಜ್ಞಾನ ಸಂಗ್ರಹಣೆಯಲ್ಲಿಯೂ ಸಾಮಾಜಿಕ ಜಾಲತಾಣಗಳು ನೆರವಾಗುತ್ತವೆ

52 ಪ್ರತಿಶತ ಯುವಕರು ಸಾಮಾಜಿಕ ಜಾಲತಾಣಗಳಿಂದಾಗಿ ಗೆಳೆಯರೊಂದಿಗಿನ ಸಂಪರ್ಕ ಸಾಧ್ಯವಾಗಿದೆ ಎನ್ನುತ್ತಾರೆ. 

ಸುಮಾರು 57 ಪ್ರತಿಶತ ಯುವಕರು ಈ ಫೇಸ್‌ಬುಕ್‌ ಮತ್ತು ಟ್ವಿಟರ್‌ನಂಥ ಜಾಲತಾಣಗಳ ಮೂಲಕವೇ ಹೊಸ ಹೊಸ ಗೆಳೆಯರನ್ನು ಕಂಡುಕೊಳ್ಳುತ್ತಾರೆ. 

ಸಾಮಾಜಿಕ ಜಾಲತಾಣಗಳು ಉದ್ಯೋಗವನ್ನು ಒದಗಿಸುವಲ್ಲಿಯೂ ನೆರವಾಗುತ್ತಿವೆ. 

ಸಾಮಾಜಿಕ ಜಾಲತಾಣಗಳಿಂದ ಇಂಥಾ ಇನ್ನೂ ಸಾಕಷ್ಟು ಪ್ರಯೋಜನಗಳಿರುವುದಾದರೂ ಅದರ ಅಪಾಯಗಳಿಂದ ತಪ್ಪಿಸಿಕೊಳ್ಳುವುದು ಕೂಡಾ ಸಾಧ್ಯವಿಲ್ಲ. ಅನೇಕ ಯುವಕರು ಸಾಮಾಜಿಕ ಜಾಲತಾಣಗಳ ಜಾಲಕ್ಕೆ ಸಿಲುಕಿ ತಮ್ಮ ಭವಿಷ್ಯವನ್ನೇ ಹಾಳು ಮಾಡಿಕೊಂಡಿದ್ದಾರೆ. ದೀಪದ ಬುಡದ ಕತ್ತಲೆಯ ಹಾಗೆ ಈ ಸಾಮಾಜಿಕ ಜಾಲತಾಣಗಳಿಂದ ಮಾರಕ ಪರಿಣಾಮಗಳು ಕೂಡಾ ಸಾಕಷ್ಟು ಪ್ರಮಾಣದಲ್ಲಿವೆ ಅವುಗಳಲ್ಲಿ ಪ್ರಮುಖವಾಗಿ…

ಶಾಲೆ-ಕಾಲೇಜುಗಳ ಪ್ರಾಯೋಜಿತ ಕಾರ್ಯಗಳಲ್ಲಿಯೇ ಅವರು ಅಡ್ಡ ಹಾದಿ ಹಿಡಿದು ಶ್ರಮ ಪಡದೇ ಬರೀ ಕಟ್‌ ಆ್ಯಂಡ್‌ ಪೇಸ್ಟ್‌ ಮಾಡಲು ತೊಡಗುತ್ತಾರೆ. 

ಹೆಚ್ಚು ಸಮಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ತೊಡಗಿಸುವವರು ಕಡಿಮೆ ಅಂಕಗಳನ್ನು ಪಡೆದಿರುವ ಬಗ್ಗೆ ವರದಿಗಳಿವೆ

ಉದ್ಯೋಗಿಗಳ ಕಾರ್ಯಕ್ಷಮತೆಯ ಮೇಲೆಯೂ ಅಡ್ಡ ಪರಿಣಾಮ ಬೀರುತ್ತವೆ

ಖಾಸಗೀತನಕ್ಕೆ ಧಕ್ಕೆ ತರುವ ಜೊತೆಗೆ ಕೆಲವೊಮ್ಮೆ ಮಾನ ಹರಾಜಾಗುವ ದುಷ್ಕೃತ್ಯಗಳಿಗೂ ಕಾರಣವಾಗುತ್ತದೆ

ಅಶ್ಲೀಲ ಚಿತ್ರಗಳ ಸೈಟ್‌ಗಳು ಯುವಕರನ್ನು ದಾರಿತಪಿಸುವ ಸಾಧ್ಯತೆಗಳಿವೆ

ತಪ್ಪು ಮಾಹಿತಿಯನ್ನು ಒದಗಿಸುವಲ್ಲಿಯೂ ಸಾಮಾಜಿಕ ಜಾಲತಾಣಗಳು ಹಿಂದೆ ಬಿದ್ದಿಲ್ಲ.

ಇವುಗಳ ಸಹವಾಸದಲ್ಲಿ ಸಾಕಷ್ಟು ಸಮಯ ವ್ಯಯವಾಗುತ್ತದೆ

ಓದು ಬರಹದ ಅಭಿರುಚಿಯನ್ನು ಕೊಂದು ಹಾಕುವ ಜೊತೆಗೆ ಸೃಜನಶೀಲತೆಯನ್ನು ಹಾಳುಗೆಡವುತ್ತದೆ.

ಸಾಮಾಜಿಕ ಜಾಲತಾಣಗಳು ಅನೇಕ ಬಗೆಯ ಮಾರಕ ಪರಿಣಾಮಗಳನ್ನು ಮೀರಿಯೂ ಯುವಕರಿಗೆ ಪ್ರಯೋಜನಕಾರಿಯಾಗಿವೆ. ಪೋರ್ಟಿಸ್‌ ಆರೋಗ್ಯ ಸಂಸ್ಥೆ ನಡೆಸಿದ ಒಂದು ಸಮೀಕ್ಷೆಯ ಪ್ರಕಾರ ಸುಮಾರು 74 ಪ್ರತಿಶತದಷ್ಟು ವಿದ್ಯಾರ್ಥಿಗಳು ಪ್ರಚಲಿತ ವಿದ್ಯಮಾನಗಳನ್ನು ಅರಿಯುವಲ್ಲಿ ಮತ್ತು ಹೊಸ ಹೊಸ ಮಾಹಿತಿಯನ್ನು ಪಡೆಯುವಲ್ಲಿ ತಮಗೆ ಈ ಜಾಲತಾಣಗಳಿಂದ ತುಂಬಾ ಅನುಕೂಲವಾಗಿದೆ ಎನ್ನುತ್ತಾರೆ. ಅವರು ಹೇಳುವುದು ನಿಜ. ಅಡ್ಡ ಪರಿಣಾಮಗಳು ಆರೋಗ್ಯ ಮತ್ತು ಔಚಿತ್ಯದ ನೆಲೆಯಲ್ಲಿ ಸಂಶೋಧನೆ ಮಾಡಿ ಬಿಡುಗಡೆ ಮಾರುಕಟ್ಟೆಗೆ ಬಿಟ್ಟ ಔಷಧಿಯಲ್ಲಿಯೂ ಇರುತ್ತವೆ. ಈ ಸಾಮಾಜಿಕ ಜಾಲತಾಣಗಳಿಂದ ಹಾನಿಗಳೂ ಇವೆ. ಔಚಿತ್ಯಪೂರ್ಣವಾಗಿ ಬಳಸಿಕೊಳ್ಳುವಲ್ಲಿಯೇ ಇವುಗಳ ಮಹತ್ವ ಅಡಕವಾಗಿದೆ. 

ಡಾ|ಎಸ್‌.ಬಿ.ಜೋಗುರ 

Advertisement

Udayavani is now on Telegram. Click here to join our channel and stay updated with the latest news.

Next