Advertisement

ಜಾತ್ರೆಯಲ್ಲಿ ಸರ್ವ ಧರ್ಮಿಯರಿಗೂ ವ್ಯಾಪಾರಕ್ಕೆ ಅವಕಾಶ ನೀಡುವಂತೆ ಮನವಿ

08:21 PM Apr 12, 2022 | Team Udayavani |

ಗಂಗಾವತಿ: ಗದುಗಿನ ತೋಂಟದಾರ್ಯ ಮಠದ ಜಾತ್ರೆಯಲ್ಲಿ ಮುಸಲ್ಮಾನರಿಗೆ ಅಂಗಡಿ ಹಾಕಲು ಅವಕಾಶ ಕೊಡಬಾರದೆಂದು ಶ್ರೀರಾಮಸೇನೆ ಸಂಘ ಪರಿವಾರದವ ದೌರ್ಜನ್ಯಕ್ಕೆ ಸೊಪ್ಪು ಹಾಕದೇ ಸರ್ವ ಜಾತಿಯವರಿಗೂ ವ್ಯಾಪಾರ ಮಾಡಲು ಅವಕಾಶ ಕಲ್ಪಿಸುವಂತೆ ಬಸವಕೇಂದ್ರ ಹಾಗೂ ರಾಷ್ಟ್ರೀಯ ಬಸವದಳದ ಕಾರ್ಯಕರ್ತರ ನೇತೃತ್ವದಲ್ಲಿ ತೋಂಟದಾರ್ಯಶ್ರೀಗಳನ್ನು ಭೇಟಿಯಾಗಿ ಮನವಿ ಮಾಡಲಾಯಿತು.

Advertisement

ಈ ಸಂದರ್ಭದಲ್ಲಿ ಲಡಾಯಿ ಪ್ರಕಾಶನದ ಬಸವರಾಜ ಸುಳೇಬಾವಿ, ಪ್ರಗತಿಪರ ಚಿಂತಕ ಜೆ. ಭಾರಧ್ವಾಜ್ ಮಾತನಾಡಿ, ತೋಂಟದಾರ್ಯ ಮಠ ಬಸವತತ್ವಕ್ಕೆ ಒಳಪಟ್ಟಿದ್ದು, ಯಾವುದೇ ಜಾತಿ, ಧರ್ಮಗಳ ವ್ಯತ್ಯಾಸ ಇರುವುದಿಲ್ಲವೆಂದು ಶ್ರೀಗಳು ಮನವರಿಕೆ ಮಾಡಿದರೂ ಒಪ್ಪಿಕೊಳ್ಳದೇ ದೌರ್ಜನ್ಯ ಮಾಡಲು ಯತ್ನಿಸುತ್ತಿರುವ ಶ್ರೀರಾಮಸೇನೆಯ ಹಾಗೂ ಸಂಘಪರಿವಾರದ ವಿರುದ್ಧ ಬಸವಕೇಂದ್ರ ಹಾಗೂ ರಾಷ್ಟ್ರೀಯ ಬಸವದಳದ ಕಾರ್ಯಕರ್ತರು ಸೇರಿ ಜಾತ್ಯತೀತ ಸಂಘಟನೆಗಳ ಕಾರ್ಯಕರ್ತರು ಹೋರಾಟ ನಡೆಸಲಿದ್ದಾರೆ. ಸೌಹಾರ್ದತೆ ಕೆಡಿಸುವವರಿಗೆ ರಾಜ್ಯ ಸರಕಾರ ಪ್ರೋತ್ಸಾಹ ನೀಡದೇ ಕಠಿಣ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತವನ್ನು ಆಗ್ರಹಿಸುವುದಾಗಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಬಸವಕೇಂದ್ರ ಹಾಗೂ ರಾಷ್ಟ್ರೀಯ ಬಸವದಳದ ಕಾರ್ಯಕರ್ತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next