Advertisement
ನಿತ್ಯಾನಂದ ಡಿ. ಕೋಟ್ಯಾನ್ ಅಧ್ಯಕ್ಷೀಯ ಭಾಷಣಗೈದು, ಭವಿಷ್ಯದಲ್ಲಿ ನಮ್ಮ ಟ್ರಸ್ಟ್ ಅತ್ಯಂತ ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು ಮತ್ತು ಸದಸ್ಯರಲ್ಲಿ ಏಕತೆಯನ್ನು ತರಲು ವಿಭಿನ್ನ ಸಾಂಸ್ಕೃತಿಕ ಮತ್ತು ಸಾಮಾಜಿಕ ಚಟುವಟಿಕೆಗಳನ್ನು ನಡೆಸಬೇಕು. ಯುವಕರು ಮತ್ತು ಮಹಿಳೆಯರಿಗಾಗಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಟ್ರಸ್ಟ್ ತೋನ್ಸೆ ಗರೋಡಿ ಧಾರ್ಮಿಕ ಕ್ರಮಬದ್ಧತೆಯ ಚಟುವಟಿಕೆಗಳಿಗೆ ಕೊಡುಗೆ ನೀಡಬೇಕು. ಭಕ್ತರಿಂದ ಹಣಕಾಸಿನ ಸಹಾಯಕ್ಕಾಗಿ ಮನವಿ ಮಾಡಲು ಮುಂದಾಗಬೇಕು ಎಂದು ತಿಳಿಸಿ, ಟ್ರಸ್ಟ್‌ನ ಆರ್ಥಿಕ ಬಲವನ್ನು ಹೆಚ್ಚಿಸಲು ಸಂಪನ್ಮೂಲಗಳನ್ನು ಸಜ್ಜುಗೊಳಿಸಲು ಸದಸ್ಯರಿಗೆ ಮನವಿ ಮಾಡಿದರು.
Related Articles
Advertisement
ಕೋವಿಡ್ ಸಾಂಕ್ರಾಮಿಕ ಪರಿಸ್ಥಿತಿಯ ನಡುವೆ ಸಭೆಯಲ್ಲಿ ಅನೇಕ ಸದಸ್ಯರು ಹಾಜರಿರುವುದು ನಮ್ಮ ಟ್ರಸ್ಟ್‌ನ ಹಿರಿಮೆ. ಯಾವುದೇ ಸಂಘವು ತನ್ನ ಧ್ಯೇಯವನ್ನು ನಿರ್ವಹಿಸಲು ಬಲವಾದ ಅಡಿಪಾಯ ಅಗತ್ಯವಾಗಿದ್ದು, ನಿರಂತರ ಬೆಂಬಲವಿದೆ ಎಂದು ಉಪಾಧ್ಯಕ್ಷರಾದ ಸಿ. ಕೆ. ಪೂಜಾರಿ ಮತ್ತು ಡಿ. ಬಿ. ಅಮೀನ್ ಅವರು ತಿಳಿಸಿ, ಸಂತೋಷ ವ್ಯಕ್ತಪಡಿಸಿದರು. ಸಭಿಕರ ಪರವಾಗಿ ಕೃಷ್ಣ ಪಾಲನ್, ಭಾರತಿ ಎನ್. ಸುವರ್ಣ, ಲಕ್ಷ್ಮೀ ಎನ್. ಕೋಟ್ಯಾನ್, ವಿಜಯ್ ಸನಿಲ್, ಸಾಹಿಲ್ ಮಹೇಶ್ ಮತ್ತು ಅನುಷಾ ಪೂಜಾರಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಸಭೆಯಲ್ಲಿ ಕಾರ್ಯಕಾರಿ ಸಮಿತಿಯ ಸದಸ್ಯರು, ಸಲಹೆಗಾರರು, ಸದಸ್ಯರು ಹಾಜರಿದ್ದು, ಸದಸ್ಯರು ಶ್ರೀ ಬ್ರಹ್ಮ ಬೈದರ್ಕಳರಿಗೆ ಪ್ರಾರ್ಥನೆಗೈದು ಮಹಾಸಭೆ ಉದ್ಘಾಟಿಸಿದರು. ಉಪಾಧ್ಯಕ್ಷ ವಿಶ್ವನಾಥ ತೋನ್ಸೆ ಸ್ವಾಗತಿಸಿದರು. ಗತ ಸಾಲಿನಲ್ಲಿ ಅಗಲಿದ ಟ್ರಸ್ಟ್‌ನ ಹಿತೈಷಿ ಹಾಗೂ ಕೊಡುಗೈದಾನಿಗಳಾದ ಜಯ ಸಿ. ಸುವರ್ಣ, ಎಂ. ಬಿ. ಕುಕ್ಯಾನ್, ಪ್ರೊ| ಶಿವ ಬಿಲ್ಲವ ಮತ್ತು ಟ್ರಸ್ಟ್‌ನ
ಸದಸ್ಯ ಶೇಖರ್ ಪೂಜಾರಿ ಸಹಿತ ಅನೇಕರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಂಜೀವ ಪೂಜಾರಿ ತೋನ್ಸೆ ಅವರು ಭಕ್ತರು ಒದಗಿಸಿದ ಹಣಕಾಸಿನ ಸಹಾಯದ ವಿವರಗಳನ್ನು ನೀಡಿ, ದಾನಿಗಳ ಹೆಸರುಗಳನ್ನು ತಿಳಿಸಿ ವಂದಿಸಿದರು.