Advertisement
ಸಮುದ್ರದಲ್ಲಿ ಕಾರ್ಗಿಲ್ ಮೀನುಗಳು ಹೇರಳವಾಗಿ ಕಂಡು ಬಂದರೆ ಇತರ ಜಾತಿಯ ಮೀನಿನ ಸಂತತಿ ಕಡಿಮೆಯಾಗುತ್ತದೆ ಎಂಬ ನಂಬಿಕೆ ಮೀನುಗಾರರಲ್ಲಿದೆ. ಇದಕ್ಕೆ ಪುಷ್ಟಿ ನೀಡುವಂತೆ ಈ ಬಾರಿ ಬಂಗುಡೆ, ಬೂತಾಯಿ ಅಂತಹ ಕೆಲವೊಂದು ಜಾತಿಯ ಮೀನುಗಳು ತೀರಾ ಕಡಿಮೆಯಾಗುತ್ತಿದೆ. ಮಲ್ಪೆ ಬಂದರಿನಲ್ಲಿ ಆಳಸಮುದ್ರ ಬೋಟುಗಳಿಗೆ 5ರಿಂದ 30ಟನ್‌ಗಳಷ್ಟು ಮೀನುಗಳು ಬಲೆಗೆ ಬೀಳುತ್ತಿದೆ.
ಸಾವಿರಾರು ರೂಪಾಯಿ ಡಿಸೇಲ್ ವ್ಯಯಿಸಿ ಮೀನುಗಾರಿಕೆ ತೆರಳಿದ ಮೀನುಗಾರರು ಬರಿಗೈಯಲ್ಲಿ ಹಿಂದಿರುಗಲಾಗದೆ ಸಿಕ್ಕಿದ ಕಾರ್ಗಿಲ್ ಮೀನನ್ನೆ ಹೊತ್ತು ತರುತ್ತಿದ್ದಾರೆ. ಟನ್‌ಗಟ್ಟಲೆ ಸಿಕ್ಕದರೂ ಇದರಿಂದ ಸಿಗುವ ಆದಾಯ ವೆಚ್ಚವನ್ನು ಸರಿದೂಗಿಸಲು ಆಗುತ್ತಿಲ್ಲ. ಒಟ್ಟಿನಲ್ಲಿ ಅಪರೂಪದ ಕಾರ್ಗಿಲ್ ಮೀನು ಕಡಲಲ್ಲಿ ಕಾಣಿಸಿಕೊಳ್ಳುವ ಮೂಲಕ ಮೀನುಗಾರರಲ್ಲಿ ನಷ್ಟ ಆತಂಕ ಹುಟ್ಟಿಕೊಂಡಿದೆ. ಯಾವುದಿದು ಕಾರ್ಗಿಲ್
ಕಪ್ಪಗಿನ ದಪ್ಪ ಚರ್ಮದ ಈ ಮೀನು ಹೆಚ್ಚಾಗಿ ಆಫ್ರಿಕಾ, ಇಂಡೋನೇಷ್ಯಾ ಶ್ರೀಲಂಕದ ಮತ್ತು ಭಾರತದ ಲಕ್ಷದ್ವೀಪದಲ್ಲಿ ಕಾಣಸಿಗುತ್ತದೆ. ಚಂಡಮಾರುತ ಉಂಟಾದಾಗ ಇದು ತನ್ನ ಪಥವನ್ನು ಬದಲಾಯಿಸುತ್ತದೆ. ಈ ಮೀನು ಹೆಚ್ಚಾಗಿ ಕಂಡು ಬರುವ ಪ್ರದೇಶದಲ್ಲಿ ಉತ್ತಮ ಜಾತಿಯ ಮೀನುಗಳ ಸಂತತಿ ಕ್ಷೀಣವಾಗುತ್ತಿದೆ. ಇತರ ಮೀನುಗಳನ್ನು ತಿನ್ನುತ್ತದೆ ಅಥವಾ ಕಚ್ಚಿ ಗಾಯಗೊಳಿಸುತ್ತದೆ.