Advertisement

ಅಭ್ಯರ್ಥಿ ಗೊಂದಲ ನಿವಾರಣೆಗಾಗಿ ನಾಳೆ ಕಾರ್ಯಕರ್ತರ ಸಭೆ

12:14 PM Jun 28, 2017 | |

ಹುಣಸೂರು: ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಬಗೆಗಿನ ಗೊಂದಲ ನಿವಾರಣೆಗಾಗಿ ಗುರುವಾರ ಪಕ್ಷದ ವರಿಷ್ಠ ಎಚ್‌.ಡಿ.ದೇವೇಗೌಡರು ಹಾಗೂ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ನಗರದ ಅದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ನಡೆಯುವ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸುವರು ಎಂದು ಶಾಸಕ ಜಿ.ಟಿ.ದೇವೇಗೌಡ ತಿಳಿಸಿದರು.

Advertisement

ನಗರದ ಜಿ.ಟಿ.ಡಿಯವರ ನಿವಾಸದ ಅವರಣದಲ್ಲಿ ಜೆಡಿಎಸ್‌ ಪಕ್ಷದ ಕಾರ್ಯಕರ್ತರ ಪೂರ್ವ ಭಾವಿ ಸಭೆಯಲ್ಲಿ ಮಾತನಾಡಿ, ಸಭೆಯಲ್ಲಿ ಅಭ್ಯರ್ಥಿ ವಿಚಾರದಲ್ಲಿ ಕಾರ್ಯಕರ್ತರ, ಮುಖಂಡರ ಅಭಿಪ್ರಾಯ ಪಡೆದು ಗೊಂದಲ ನಿವಾರಿಸುವರು. ಪಕ್ಷದ ವರಿಷ್ಠರು ತೆಗೆದುಕೊಳ್ಳುವ  ತೀರ್ಮಾನ  ಅಂತಿಮ ವಾಗಿರುತ್ತದೆ. ಕಾರ್ಯಕರ್ತರು ಸಹಕಾರ ನೀಡಬೇಕು. ಪಕ್ಷದ ಕಾರ್ಯಕರ್ತರು, ಮುಖಂಡರುಗಳು ಸಮಸ್ಯೆಗಳಿದ್ದರೆ ಹಂಚಿಕೊಳ್ಳಿ, ದುಡುಕಬಾರದು ಜೊತೆಗೆ ಪಕ್ಷದ ಉಳಿವಿಗೆ ಪ್ರತಿಯೊಬ್ಬರು ಶ್ರಮಿಸಬೇಕು ಎಂದರು. 

ವಿರೋಧವಿಲ್ಲ: ಮಾಜಿ ಸಚಿವ ಎಚ್‌.ವಿಶ್ವನಾಥ್‌ ಸೇರ್ಪಡೆಗೆ ಯಾವುದೇ ವಿರೋಧವಿಲ್ಲ. ಆದರೆ ಹುಣಸೂರು ಕ್ಷೇತ್ರದ ಅಭ್ಯರ್ಥಿಯಾಗುವ ಬಗ್ಗೆ ಬೇಸರವಿದೆ, ವರಿಷ್ಠರ ತೀರ್ಮಾನಕ್ಕೆ ತಾವು ಸಹ ಬದ್ಧ ಎಂದು ತಿಳಿಸಿದರು. ತಾಲೂಕಿನ ಸಮಗ್ರ ಅಭಿವೃದ್ಧಿಗೆ ಸಾಕಷ್ಟು ಯೋಜನೆಗಳನ್ನು ಮತ್ತು ಅನುದಾನ ತಂದು ತಮ್ಮ ಅಧಿಕಾರವಾದಿಯಲ್ಲಿ ಅಭಿವೃದ್ಧಿಪಡಿಸಿದ್ದೇನೆ, ಹುಣಸೂರಿನ ಜನತೆಗೂ ನಮ್ಮ ಕುಟುಂಬಕ್ಕೂ ಉತ್ತಮ ಸಂಬಂಧ ಮುಂದೆಯೂ ಇರಲಿದೆ. ಇಡೀ ಕುಟುಂಬ ನಿಮ್ಮೊಂದಿಗೆ ಇರುತ್ತೇವೆ ಯಾರು ಧೃತಿಗೇಡಬೇಡಿ ಎಂದರು.

ಬಾವುಕರಾದರು: ನಮ್ಮ ಸಮುದಾಯದ ಕೆಲವರು ನನ್ನ ಮತ್ತು ಕುಟುಂಬದ ಮೇಲೆ ಹೊಟ್ಟೆಕಿಚ್ಚುಪಟ್ಟಿದ್ದು ಬಿಟ್ಟರೆ, ಉಳಿದ ಎಲ್ಲ ಜನಾಂಗ ಮತ್ತು ಸಣ್ಣಪುಟ್ಟ ಸಮುದಾಯದವರು ಸಹ ನಮ್ಮನ್ನು ದೇವರಂತೆ ಪೂಜಿಸಿದ್ದಾರೆ ನಾನೆಂದು ಅವರನ್ನು ಮರೆಯಲ್ಲ ಎಂದು ಬಾವುಕರಾದ ಅವರು ಕ್ಷೇತ್ರದ ಅಭಿವೃದ್ಧಿಗೆ ಜಿಟಿಡಿ ಬಿಡಲ್ಲ ಎನ್ನುತ್ತಿದ್ದ ಶಾಸಕ ಮಂಜುನಾಥ್‌ ಅವರು ಈಗ ಅವರದೇ ಸರಕಾರ ಇದೆ, ಇನ್ನೂ ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿ ಏಕೆ ಆಗಿಲ್ಲವೆಂದು ಪ್ರಶ್ನಿಸಿದರು.

ಮುಂದೆ ಜೆಡಿಎಸ್‌ ನಿರ್ಣಾಯಕ: ಯಾವುದೇ ರಾಷ್ಟ್ರೀಯ ಪಕ್ಷಕ್ಕೆ 2018ಕ್ಕೆ ನಡೆಯುವ ಚುನಾವಣೆಯಲ್ಲಿ ಬಹುಮತ ಸಿಕ್ಕಲ್ಲ ಹಾಗಾಗಿ ಮುಂದಿನ ಸರಕಾರ ರಚನೆಯಲ್ಲಿ ಜೆಡಿಎಸ್‌ ಪಕ್ಷವೇ ನಿರ್ಣಾಯಕ ಪಾತ್ರವಹಿಸಲಿದೆ. ರಾಜ್ಯದ ಮತದಾರರು ಎರಡು ರಾಷ್ಟ್ರೀಯ ಪಕ್ಷದ ಅಧಿಕಾರವನ್ನು ನೋಡಿ  ಬೇಸತ್ತಿದ್ದಾರೆ. ಹಾಗಾಗೀ ಜೆಡಿಎಸ್‌ ಪಕ್ಷದ ಪ್ರಮುಖ ಪಾತ್ರವಹಿಸಲಿದೆ ಕಾರ್ಯಕರ್ತರು ಧೃತಿಗೇಡಬೇಡಿ, ಮುಂದಿನ ಸರಕಾರ ಹೆಚ್‌.ಡಿ.ಕುಮಾರಸ್ವಾಮಿ ನಾಯಕತ್ವದಲ್ಲೇ ರಚನೆಯಾಗಲಿದೆ ಎಂದು ಭವಿಷ್ಯ ನುಡಿದರು.

Advertisement

ಜೆಡಿಎಸ್‌ ಅಧ್ಯಕ್ಷ ಹರಳಹಳ್ಳಿಮಹದೇವೇಗೌಡ, ಮೈಮುಲ್‌ ನಿರ್ದೇಶಕ ಕೆ.ಎಸ್‌.ಕುಮಾರ್‌, ತಾಪಂ ಉಪಾಧ್ಯಕ್ಷ ಪ್ರೇಮಕುಮಾರ್‌, ಸದಸ್ಯರಾದ  ಪ್ರಭು, ಪ್ರೇಮೇಗೌಡ, ಪುಟ್ಟಮ್ಮ, ಶ್ರೀನಿವಾಸ್‌, ಎಪಿಎಂಸಿ.ಅಧ್ಯಕ್ಷ ಕುಮಾರ್‌, ನಗರಸಭೆ ಸದಸ್ಯರು, ಪಿಎಲ್‌ಡಿ ಬ್ಯಾಂಕ್‌ ನಿರ್ದೇಶಕರು ಸೇರಿದಂತೆ ನೂರಕ್ಕೂ ಹೆಚ್ಚು ಮಂದಿ ಕಾರ್ಯಕರ್ತರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next