Advertisement

ನಾಳೆ ಮಹಿಳಾ ವಿವಿ ಘಟಿಕೋತ್ಸವ

04:46 PM Jan 21, 2018 | |

ವಿಜಯಪುರ: ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ 9ನೇ ಘಟಿಕೋತ್ಸವ ಜ. 22ರಂದು ಹಮ್ಮಿಕೊಂಡಿದ್ದು ಈ ಬಾರಿ ಲಿಂಗಸಮಾನತೆ ಹಾಗೂ ಮಹಿಳಾ ಸಶಸಕ್ತೀಕರಣ ಬಿಂಬಿಸುವ ವಿಶಿಷ್ಟ ಕಲಾಕೃತಿ ವೇದಿಕೆಯ ವೈಶಿಷ್ಟÂತೆ ಹೊಂದಿರಲಿದೆ ಎಂದು ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಡಾ| ಸಬಿಹಾ ಭೂಮಿಗೌಡ ಹೇಳಿದರು.

Advertisement

ಶನಿವಾರ ವಿಶ್ವವಿದ್ಯಾಲಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಘಟಿಕೋತ್ಸವದ ಮಾಹಿತಿ ನೀಡಿದ ಅವರು, ಜ. 22ರಂದು
ಬೆಳಗ್ಗೆ 11ರಿಂದ ಮಧ್ಯಾಹ್ನ 1ರವರೆಗೆ ತೊರವಿ ಗ್ರಾಮದ ಹೊರ ವಲಯದಲ್ಲಿರುವ ವಿಶ್ವವಿದ್ಯಾಲಯದ ಜ್ಞಾನಶಕ್ತಿ ಆವರಣದ ಕ್ರೀಡಾಂಗಣದಲ್ಲಿ ಘಟಿಕೋತ್ಸವ ಆಯೋಜಿಸಲಾಗಿದೆ. ಪುಣೆಯ ಸಿಂಬಯಾಸಿಸ್‌ ಕಾನೂನು ಮಹಾವಿದ್ಯಾಲಯದ ನಿರ್ದೇಶಕಿ ಶಶಿಕಲಾ ಗುರುಪುರ ಘಟಿಕೋತ್ಸವ ಭಾಷಣ ಮಾಲಿದ್ದಾರೆ ಎಂದರು.

ಪದವಿ ಪ್ರಮಾಣ ಪತ್ರದಲ್ಲಿ ಆಯಾ ವಿದ್ಯಾರ್ಥಿನಿಯರ ಭಾವಚಿತ್ರ ಅಳವಡಿಕೆ ಸೇರಿದಂತೆ ನಕಲು ಮಾಡಲು ಅವಕಾಶ ಇಲ್ಲದಂತೆ ಹಲವಾರು ಭದ್ರತಾ ಕ್ರಮ ಕೈಗೊಂಡಿರುವುದು ನಮ್ಮ ವಿಶ್ವವಿದ್ಯಾಲಯದ ಪರೀಕ್ಷಾ ಮೌಲ್ಯಮಾಪನ ವಿಭಾಗದ ವಿಶೇಷ ಸಂಗತಿ ಎಂದರು.

ಈ ಬಾರಿಯ ಘಟಿಕೋತ್ಸವದಲ್ಲಿ ವಿವಿಧ ವಿಭಾಗಗಳ 21 ಪಿಎಚ್‌ಡಿ, 14 ಎಂμಲ್‌ ಪದವಿ ಹಾಗೂ ಸ್ನಾತಕ ಮತ್ತು ಸ್ನಾತಕೋತ್ತರ ಕೋರ್ಸ್‌ಗಳಲ್ಲಿ ಗರಿಷ್ಠ ಅಂಕ ಗಳಿಸಿರುವ 56 ವಿದ್ಯಾರ್ಥಿನಿಯರಿಗೆ 66 ಚಿನ್ನದ ಪದಕ ಸಹಿತ ಪದವಿ ಪ್ರದಾನ ನಡೆಯಲಿದೆ. ಸ್ನಾತಕ, ಸ್ನಾತಕೋತ್ತರ ಮತ್ತು ಪಿಜಿ ಡಿಪ್ಲೋಮಾ ಸೇರಿ ಒಟ್ಟು 8873 ವಿದ್ಯಾರ್ಥಿನಿಯರು ಪದವಿ ಪಡೆಯಲು ಅರ್ಹರಾಗಿರುತ್ತಾರೆ. ಕಳೆದ ಬಾರಿಗಿಂತ ಈ ಬಾರಿ 251 ವಿದ್ಯಾರ್ಥಿನಿಯರು ಹೆಚ್ಚಳವಾಗಿದ್ದಾರೆ. 

1041 ವಿದ್ಯಾರ್ಥಿನಿಯರಿಗೆ ವಿವಿಧ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪ್ರದಾನ ನಡೆಯಲಿದ್ದು, ಎಂಎ 217, ಎಂಕಾಂ 207, ಎಂಬಿಎ 73, ಎಂಎಸ್‌ಸಿ- 213, ಎಂಈಡಿ 10, ಎಂಪಿ.ಈಡಿ 30, ಎಂಎಲ್‌ಐಎಸ್‌ಸಿ 17, ಎಂಎಸ್‌ಡಬ್ಲೂ 57 ಮತ್ತು ಎಂಸಿಎ 21 ವಿದ್ಯಾರ್ಥಿನಿಯರು ಪದವಿಗೆ ಅರ್ಹರಾಗಿದ್ದಾರೆ. 

Advertisement

ಪಿಜಿ ಡಿಪ್ಲೋಮಾದಲ್ಲಿ 71, ಡಿಎಫ್‌ಎಂ 23, ಯೋಗ ಅಧ್ಯಯನದಲ್ಲಿ 17 ವಿದ್ಯಾರ್ಥಿನಿಯರು ಸೇರಿದಂತೆ ಒಟ್ಟು 111 ವಿದ್ಯಾರ್ಥಿನಿಯರು ಡಿಪ್ಲೋಮಾ ಪದವಿ ಪ್ರಮಾಣಪತ್ರ ಪಡೆಯಲಿದ್ದಾರೆ. ಬಿಎ 4235, ಬಿಎಸ್‌ಡಬ್ಲೂ 43, ಬಿಈಡಿ 23, ಬಿಪಿಈಡಿ 25, ಬಿಕಾಂ 2456, ಬಿಬಿಎ 176, ಬಿಎಸ್‌ಸಿ 703, ಬಿಎಚ್‌ಎಸ್‌ಸಿ 5, ಬಿಸಿಎ 34 ಮತ್ತು ಬಿಎಫ್‌ಟಿ 21 ವಿದ್ಯಾರ್ಥಿನಿಯರು ಸೇರಿ 7721 ಸ್ನಾತಕ ಪದವಿ ಪ್ರದಾನ ನಡೆಯಲಿದೆ. ವಿಶ್ವವಿದ್ಯಾಲಯದ 9ನೇ ಘಟಿಕೋತ್ಸವವನ್ನು ಯಶಸ್ವಿಯಾಗಿ ಸಂಘಟಿಸಲು ಈಗಾಗಲೇ ಹಲವಾರು ಸಮಿತಿ ರಚಿಸಲಾಗಿದ್ದು ಭರದಿಂದ ಸಿದ್ಧತೆಗಳು ನಡೆದಿವೆ ಎಂದರು. 

ಕುಲಸಚಿವ ಪ್ರೊ| ಎಲ್‌.ಆರ್‌. ನಾಯಕ, ಮೌಲ್ಯಮಾಪನ ಕುಲಸಚಿವ ಪ್ರೊ| ಎಸ್‌.ಬಿ. ಮಾಡಗಿ, ಆರ್ಥಿಕ ಅಧಿಕಾರಿ ಪ್ರೊ| ಆರ್‌. ಸುನಂದಮ್ಮ, 9ನೇ ಘಟಿಕೋತ್ಸವದ ಸಂಯೋಜನಾಧಿಕಾರಿ ಪ್ರೊ|ಎಸ್‌.ಎ. ಖಾಜಿ, ಮಾಧ್ಯಮ ಸಂಯೋಜನಾಧಿಕಾರಿ ಪ್ರೊ| ಓಂಕಾರ ಕಾಕಡೆ, ಡಾ| ಗವಿಸಿದ್ದಪ್ಪ ಆನಂದಹಳ್ಳಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next