Advertisement

ನಾಳೆಯದ್ದು “ಥಂಡರ್‌ ಮೂನ್‌’

02:03 AM Jul 15, 2019 | Sriram |

ಹೊಸದಿಲ್ಲಿ: ಇನ್ನು ಎರಡು ದಿನಗಳಲ್ಲಿ ಅಂದರೆ ಮಂಗಳವಾರ (ಜು. 16) ಆಂಶಿಕ ಚಂದ್ರಗ್ರಹಣ ನಡೆಯಲಿದೆ. ಈ ಸಂದರ್ಭ ದಲ್ಲಿ ಗುಡುಗು ಸಿಡಿಲು ಕೂಡ ಇರುವ ಕಾರಣ, ಅದನ್ನು “ಥಂಡರ್‌ ಮೂನ್‌’ ಎಂದೂ ಬಣ್ಣಿಸಲಾಗುತ್ತಿದೆ.

Advertisement

ಹಾಲಿ ತಿಂಗಳಲ್ಲಿ ಆಗಸದಲ್ಲಿ ಗುಡುಗು- ಸಿಡಿಲುಗಳು ಇರುವುದರಿಂದ ಈ ರೀತಿಯಾಗಿ ವಿಶ್ಲೇಷಿಸಲಾಗಿದೆ ಎಂದು “ಓಲ್ಡ್‌ ಫಾರ್ಮರ್ಸ್‌ ಅಲ್ಮಾನಿಕ್‌’ ಎಂಬ ವೆಬ್‌ಸೈಟ್‌ನಲ್ಲಿ ಪ್ರಸ್ತಾಪಿಸಲಾಗಿದೆ.

ವೈಜ್ಞಾನಿಕವಾಗಿ ಗ್ರಹಣದ ಬಗ್ಗೆ ಹಲವು ಅಧ್ಯಯನ, ವಿಶ್ಲೇಷಣೆಗಳು ನಡೆ ಯುತ್ತಿದ್ದರೂ, ಕೆಲವೊಂದು ಕುತೂಹಲಕರ ಅಂಶಗಳು ಇವೆ.

ಈ ಗ್ರಹಣವನ್ನು “ಬಕ್‌ ಮೂನ್‌’ ಎಂದು ಹೇಳಲಾಗುತ್ತದೆ. ಅದಕ್ಕೊಂದು ಕುತೂಹಲಕರ ವಾದ ಅಂಶವೊಂದು ಇದೆ. ಈ ತಿಂಗಳು ಪೂರ್ಣ ಚಂದ್ರ ಇರುವ ಸಂದರ್ಭದಲ್ಲಿಯೇ ಸಾರಂಗಗಳ ತಲೆಯಲ್ಲಿ ಹೊಸ ಕೊಂಬುಗಳು ಮೂಡುತ್ತವೆ. ಹೀಗಾಗಿ ಈ ಹೆಸರು ಕೂಡ ಇದೆ. “ರೈಪ್‌ ಕಾರ್ನ್ ಮೂನ್‌’, “ಹೇ ಮೂನ್‌’, “ಓಲ್ಡ್‌ ಮೂನ್‌’ ಎಂಬ ಹೆಸರು ಗಳಿಂ ದಲೂ ಹಾಲಿ ಗ್ರಹಣವನ್ನು ಕರೆಯಲಾಗುತ್ತದೆ.
ಭಾರತ ಸೇರಿದಂತೆ ಜಗತ್ತಿನ ಕೆಲ ಭಾಗ ಗಳಲ್ಲಿ ಆಂಶಿಕ ಗ್ರಹಣ ಕಾಣಿಸಿಕೊಳ್ಳಲಿದೆ. ಈ ಸಂದರ್ಭದಲ್ಲಿ ಚಂದ್ರ ಭೂಮಿಯ ನೆರಳಿನ ಒಳಗಿನ ಮೂಲಕ ಹಾದು ಹೋಗಲಿದೆ. ಈ ಸಂದರ್ಭದಲ್ಲಿ ಚಂದ್ರನ ಒಂದು ಭಾಗ ಕಪ್ಪಾಗಿಯೂ, ಮತ್ತೂಂದು ಭಾಗ ಸೂರ್ಯನ ಬೆಳಕಿನಿಂದ ಹೊಳೆಯಲಿದೆ. ಜು.16ರಿಂದ 2 ವಾರಗಳ ಬಳಿಕ ಮತ್ತೂಂದು “ಬ್ಲಾಕ್‌ ಮೂನ್‌’ ಉಂಟಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next