Advertisement
ಗಾಂಧಿನಗರದ ನ್ಯಾಷನಲ್ ಮಾರ್ಕೆಟ್ ವಾಣಿಜ್ಯ ಸಂಕೀರ್ಣದ ಬಳಿ ನಗರೋತ್ಥಾನ ಯೋಜನೆ ಅಡಿಯಲ್ಲಿ ಸ್ವತ್ಛ ಮತ್ತು ಆರೋಗ್ಯಕರ ನಗರ ನಿರ್ಮಾಣಕ್ಕಾಗಿ ಹಮ್ಮಿಕೊಂಡಿರುವ “ಜೋಡಿ ಕಸದ ಡಬ್ಬಿಗಳ ಅಳವಡಿಕೆ’ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
Related Articles
Advertisement
2,232 ಕಸದ ಡಬ್ಬಿಗಳ ಅಳವಡಿಕೆ!: ಮೇಯರ್ ಜಿ.ಪದ್ಮಾವತಿ ಮಾತನಾಡಿ, ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆಯಡಿಯಲ್ಲಿ 2,232 ಕಸ ಸಂಗ್ರಹಿಸುವ ಡಬ್ಬಿಗಳ ಖರೀದಿ ಹಾಗೂ ಅಳವಡಿಕೆಗಾಗಿ 4.15 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಇಂತಹ ಡಬ್ಬಿಗಳನ್ನು ನಗರದಲ್ಲಿನ ಜನಸಂದಣಿ ಪ್ರದೇಶಗಳು, ವಾಣಿಜ್ಯ, ಮಾರುಕಟ್ಟೆ, ಕೊಳಚೆ ಪ್ರದೇಶಗಳು, ಪ್ರಮುಖ ರಸ್ತೆ ಹಾಗೂ ಪಾದಚಾರಿ ಮಾರ್ಗಗಳಲ್ಲಿ ಇರಿಸಲು ತೀರ್ಮಾನಿಸಿದ್ದು, ಅವುಗಳನ್ನು ಬಳಸುವ ಮೂಲಕ ನಗರದ ಸ್ವತ್ಛತೆಗೆ ನಾಗರಿಕರು ಮುಂದಾಗಬೇಕು ಎಂದು ಕರೆ ನೀಡಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರು, ನಗರದಲ್ಲಿಯೇ ಅತಿ ಹೆಚ್ಚು ಜನಸಂದಣಿ ಇರುವುದು ಗಾಂಧಿನಗರ. ಇಂತಹ ಭಾಗದಲ್ಲಿ ಪಾಲಿಕೆಯಿಂದ ಕಸ ಸಂಗ್ರಹ ಡಬ್ಬಿಗಳ ಅಳವಡಿಕೆ ಕಾರ್ಯಕ್ಕೆ ಚಾಲನೆ ನೀಡಿರುವುದು ಸ್ವಾಗತಾರ್ಹ. ನಗರದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಹಾಗೂ ಪಾಲಿಕೆಯಿಂದ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಆದರೆ, ಅದನ್ನು ಯಾರು ಪರಿಗಣಿಸಿದೆ ಹೇವಲ ನಕಾರತ್ಮಕ ವಿಷಯಗಳನ್ನಿಟ್ಟುಕೊಂಡು ಟೀಕೆ ಮಾಡುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಉಪಮೇಯರ್ ಎಂ.ಆನಂದ್, ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್, ಆಡಳಿತ ಪಕ್ಷ ನಾಯಕ ಮಹಮ್ಮದ್ ರಿಜ್ವಾನ್ ನವಾಬ್, ಘನತ್ಯಾಜ್ಯ ನಿರ್ವಹಣೆ ವಿಭಾಗದ ಜಂಟಿ ಆಯುಕ್ತ ಸಫ್ರಾಜ್ ಖಾನ್ ಸೇರಿದಂತೆ ಪ್ರಮುಖರು ಹಾಜರಿದ್ದರು.
ಬಿಜೆಪಿ ರಾಜಕಾರಣ ಸರಿಯಲ್ಲ: ರಾಜರಾಜೇಶ್ವರಿ ನಗರದಲ್ಲಿನ ಪಾಲಿಕೆ ಸದಸ್ಯೆಯರ ಮೇಲಿನ ಹಲ್ಲೆ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಕೆ.ಜೆ.ಜಾರ್ಜ್, “ಕ್ಷೇತ್ರದಲ್ಲಿ ಉಂಟಾಗಿರುವ ಸಣ್ಣಪುಟ್ಟ ಗೊಂದಲಗಳನ್ನು ಬಗೆಹರಿಸಲು ನಾವು ಮುಂದಾಗಿದ್ದೇವೆ. ಆದರೆ, ಬಿಜೆಪಿಯವರು ಇದರಲ್ಲಿಯೂ ರಾಜಕೀಯ ಮಾಡುತ್ತಿರುವುದು ಸರಿಯಲ್ಲ,’ ಎಂದು ಕಿಡಿಕಾರಿದರು. ಈ ಕುರಿತು ಪ್ರತಿಕ್ರಿಯಿಸಿದ ಮೇಯರ್ ಜಿ.ಪದ್ಮಾವತಿ, “ಪಾಲಿಕೆ ಸದಸ್ಯೆ ಮಂಜುಳಾ ನಾರಾಯಣಸ್ವಾಮಿ ಸೇರಿದ ಮೂವರು ಸದಸ್ಯೆಯರಿಗೆ ಘಟನೆಯ ವಿವರ ಕೋರಿ ಪತ್ರ ಬರೆಯಲಾಗಿದೆ. ಆದರೆ, ಇದುವರೆಗೆ ಅವರಿಂದ ಯಾವುದೇ ಉತ್ತರ ಬಂದಿಲ್ಲ,’ ಎಂದು ತಿಳಿಸಿದರು.
ತ್ಯಾಜ್ಯದ ಕ್ವಾರಿಗಳಲ್ಲಿ ವೈಜ್ಞಾನಿಕ ತ್ಯಾಜ್ಯ ವಿಲೇವಾರಿ ಮಾಡುತ್ತಿದ್ದು, ಭರ್ತಿಯಾಗಿರುವ ಕ್ವಾರಿಗಳನ್ನು ಆಟದ ಮೈದಾನ, ಉದ್ಯಾನಗಳಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಇದರೊಂದಿಗೆ ಹೊರ ವಲಯಗಳಲ್ಲಿ ತ್ಯಾಜ್ಯದಿಂದ ದುರ್ವಾಸನೆ ಬರುತ್ತಿರುವ ದೂರುಗಳಿದ್ದು, ಕೃಷಿ ಇಲಾಖೆ ನೆರವಿನಿಂದ ಸಮಸ್ಯೆ ಬಗೆಹರಿಸಲಾಗುವುದು. ಹಾಗೇ ತ್ಯಾಜ್ಯ ಘಟಕಗಳಲ್ಲಿ ಉಳಿಯುತ್ತಿರುವ ಆರ್‌ಡಿಎಫ್ ಮೂಲಕ ವಿದ್ಯುತ್ ಉತ್ಪಾದನೆ ಯೋಜನೆಯನ್ನು ಕೈಗತ್ತಿಕೊಳ್ಳಲಾಗಿದೆ. -ಕೆ.ಜೆ.ಜಾರ್ಜ್, ಸಚಿವ