ಬೆಂಗಳೂರು : ದೇಶಾದ್ಯಂತ ಸದ್ದು ಮಾಡುತ್ತಿರುವ ದಿ ಕಾಶ್ಮೀರ್ ಫೈಲ್ ಸಿನಿಮಾವನ್ನು ಶಾಸಕರಿಗೆ ಉಚಿತ ವೀಕ್ಷಣೆಗೆ ಸ್ಪೀಕರ್ ವ್ಯವಸ್ಥೆ ಮಾಡಿರುವುದು ಈಗ ಮತ್ತೊಂದು ವಿವಾದಕ್ಕೆ ಕಾರಣವಾಗಿದೆ.
ನಾಳೆ ಸಂಜೆ 6:45ಕ್ಕೆ ಮಂತ್ರಿ ಮಾಲ್ ಸ್ಕ್ರೀನ್ ನಂಬರ್ 6 ರಲ್ಲಿ ಕಾಶ್ಮೀರ್ ಫೈಲ್ಸ್ ಸಿನಿಮಾ ವೀಕ್ಷಣೆಗೆ ಶಾಸಕರಿಗಾಗಿ ವ್ಯವಸ್ಥೆ ಮಾಡಲಾಗಿದೆ. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸೋಮವಾರ ಸಂಜೆ ಈ ವಿಚಾರ ಪ್ರಸ್ತಾಪಿಸಿದರು. ಇದಕ್ಕೆ ಸದನದೊಳಗೇ ಕಾಂಗ್ರೆಸ್ ಶಾಸಕರು ಅಪಸ್ವರ ವ್ಯಕ್ತಪಡಿಸಿದರು.
ಭಾನುವಾರ ಸಿಎಂ ಬಸವರಾಜ ಬೊಮ್ಮಾಯಿ ಈ ಚಿತ್ರ ವೀಕ್ಷಣೆ ಮಾಡಿದ್ದರು. ಕಾಶ್ಮೀರಿ ಪಂಡಿತರು ಹಾಗೂ ಹಿಂದುಗಳ ಕಗ್ಗೊಲೆ ಹೃದಯವಿದ್ರಾವಕ.ಈ ನರಹತ್ಯೆ ಬಗ್ಗೆ ಕಲ್ಪಿಸಿಕೊಂಡರೆ ಹೃದಯ ಸ್ಥಂಬಿಸುತ್ತದೆ ಎಂದು ಹೇಳಿದ್ದರು. ಜತೆಗೆ ಸರಕಾರ ರಾಜ್ಯದಲ್ಲಿ ಈ ಸಿನಿಮಾಕ್ಕೆ ತೆರಿಗೆ ವಿನಾಯಿತಿ ನೀಡುತ್ತದೆ ಎಂದು ಟ್ವೀಟ್ ಮೂಲಕ ಪ್ರಕಟಿಸಿದ್ದರು.
ಇದನ್ನೂ ಓದಿ:‘ದಿ ಕಾಶ್ಮೀರ್ ಫೈಲ್ಸ್”..ಕಾಶ್ಮೀರಿ ಪಂಡಿತರ ನೋವಿನ ನೈಜ ಕಥಾನಕ ಅನಾವರಣ
ಸರ್ಕಾರ ಈಗಾಗಲೇ ಈ ಸಿನಿಮಾಗೆ ತೆರಿಗೆ ವಿನಾಯಿತಿ ಮಾಡಿದೆ, ಸರ್ಕಾರವನ್ನು ಅಭಿನಂದಿಸುವೆ ಎಂದು
ಸ್ಪೀಕರ್ ಹೇಳಿಕೆ ನೀಡುವುದರ ಜತೆಗೆ ಸಿನಿಮಾ ವೀಕ್ಷಣೆಗೆ ವ್ಯವಸ್ಥೆ ಮಾಡಿರುವುದನ್ನು ಪ್ರಕಟಿಸಿದರು.ವಿಪಕ್ಷ ನಾಯಕ ಸಿದ್ದರಾಮಯ್ಯ ಚಿತ್ರ ವೀಕ್ಷಣೆಗೆ ಹೋಗಿವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ.