Advertisement
ಈಗಾಗಲೇ ತಾಲೂಕಿನೆಲ್ಲೆಡೆ ಸಮ್ಮೇಳನದ ಆಮಂತ್ರಣ ಪತ್ರಿಕೆ ವಿತರಣೆ ನಡೆಯುತ್ತಿದೆ. ವಿಶೇಷವಾಗಿ ಕಡಬ ಪರಿಸರದಲ್ಲಿ ವಿವಿಧ ತಂಡಗಳಲ್ಲಿ ಬಹುತೇಕ ಮನೆ ಮನೆಗಳಿಗೆ, ಶಾಲಾ ಕಾಲೇಜುಗಳಿಗೆ, ಸರಕಾರಿ ಕಚೇರಿಗಳಿಗೆ ಭೇಟಿ ನೀಡಿ ಆಮಂತ್ರಣ ಪತ್ರಿಕೆ ವಿತರಿಸಲಾಗಿದೆ.
Related Articles
ಸಮ್ಮೇಳನದ ಪ್ರಯುಕ್ತ ಬೆಳಗ್ಗೆ ನಡೆಯುವ ಕನ್ನಡ ಭುವನೇಶ್ವರಿಯ ದಿಬ್ಬಣವನ್ನು ಅದ್ದೂರಿಯಿಂದ ನಡೆಸಲು ಮೆರವಣಿಗೆ ಸಮಿತಿಯ ಸಂಚಾಲಕ ಸೀತಾರಾಮ ಗೌಡ ಪೊಸವಳಿಕೆ ಅವರ ನೇತೃತ್ವದಲ್ಲಿ ಸಕಲ ಸಿದ್ಧತೆ ನಡೆಸಲಾಗಿದೆ. ಮೆರವಣಿಗೆಗೆ 2 ತೆರೆದ ವಾಹನಗಳನ್ನು ಬಳಸಲು ತಯಾರಿ ನಡೆದಿದ್ದು, ಒಂದು ವಾಹನದಲ್ಲಿ ಸಮ್ಮೇಳನಾಧ್ಯಕ್ಷರು ಇದ್ದರೆ ಹಾಗೂ ಇನ್ನೊಂದು ವಾಹನದಲ್ಲಿ ಕನ್ನಡ ಭುವನೇಶ್ವರಿಯ ಬೃಹತ್ ಚಿತ್ರವನ್ನು ಇರಿಸಿ ಕಡಬದ ಸೈಂಟ್ ಜೋಕಿಮ್ಸ್ ಶಿಕ್ಷಣ ಸಂಸ್ಥೆಯ ಬಳಿಯಿಂದ ಮುಖ್ಯರಸ್ತೆಯಲ್ಲಿ ಸಾಗಿ ಸಮ್ಮೇಳನ ನಡೆಯುವ ಸರಕಾರಿ ಪ.ಪೂ. ಕಾಲೇಜಿಗೆ ಸಾಗಲಾಗುವುದು. ಮೆರವಣಿಗೆಯಲ್ಲಿ ಬೃಹತ್ ಬೊಂಬೆಗಳು ಹಾಗೂ ಕೀಲುಕುದುರೆಗಳ ಆಕರ್ಷಕ ನೃತ್ಯ, ಸ್ತಬ್ಧಚಿತ್ರಗಳು, ಪರಿಸರದ 6 ಶಾಲೆಗಳ ವಿದ್ಯಾರ್ಥಿಗಳ ಬ್ಯಾಂಡ್ ವಾದ್ಯ ತಂಡ, ಚೆಂಡೆ ವಾದನ ಗಮನ ಸೆಳೆಯಲಿದೆ.
Advertisement
ವಿಶಿಷ್ಟ ಕವಿಗೋಷ್ಠಿಸಮ್ಮೇಳನದ ಅಂಗವಾಗಿ ಹಿರಿಯ ಕವಿ ಟಿ.ಜಿ. ಮುಡೂರು ಅವರ ಅಧ್ಯಕ್ಷತೆಯಲ್ಲಿ ಜರಗಲಿರುವ ಕವಿಗೋಷ್ಠಿ ಎಲ್ಲ ವಯೋಮಾನದ ಕವಿಗಳ ಭಾಗವಹಿ ಸುವಿಕೆಯಿಂದ ವಿಶಿಷ್ಟವೆನಿಸಲಿದೆ. ಪ್ರಾಥಮಿಕ, ಪ್ರೌಢ, ಪ.ಪೂ., ಪದವಿ ವಿದ್ಯಾರ್ಥಿಗಳು, ಶಿಕ್ಷಕ ತರಬೇತಿಯ ಪ್ರಶಿಕ್ಷಣಾರ್ಥಿಗಳು ಕವಿಗೋಷ್ಠಿಯಲ್ಲಿ ತಮ್ಮ ಕವಿತೆಗಳನ್ನು ವಾಚಿಸಲಿದ್ದಾರೆ. ಗೋಷ್ಠಿಯಲ್ಲಿ ಭಾಗವಹಿಸುವ 12 ಮಂದಿ ಕವಿಗಳ ಪೈಕಿ 10 ಮಂದಿ ಮಹಿಳಾ ಕವಿಗಳು ಭಾಗವಹಿಸುತ್ತಿರುವುದು ಇನ್ನೊಂದು ವಿಶೇಷ. ಪುಸ್ತಕ ಮತ್ತು ವಸ್ತು ಪ್ರದರ್ಶನ
ಸಮ್ಮೇಳನದ ಸಭಾಂಗಣದ ಆಸುಪಾಸಿನಲ್ಲಿ ಪುಸ್ತಕ ಹಾಗೂ ವಸ್ತುಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮರ್ದಾಳದ ಸೈಂಟ್ ಮೇರಿಸ್ ಪ್ರೌಢಶಾಲೆಯ ಶಿಕ್ಷಕ ಸುಬ್ರಹ್ಮಣ್ಯ ಗೌಡ ಅವರು ಸಂಗ್ರಹಿಸಿರುವ ತುಳುನಾಡ ಹಳೆಯ ವಸ್ತುಗಳ
ಅಪೂರ್ವ ಸಂಗ್ರಹ, ಕುಟ್ರಾಪ್ಪಾಡಿಯ ಕೇಪು ಶಾಲೆಯ ಮುಖ್ಯಶಿಕ್ಷಕ ಹರಿಪ್ರಸಾದ ಉಪಾಧ್ಯಾಯ ಅವರ ಕಲಾ ಪ್ರದರ್ಶನ, ವಿವಿಧ ಪುಸ್ತಕ ಮಳಿಗೆಗಳು ಹಾಗೂ ವ್ಯಾಪಾರಿ ಮಳಿಗೆಗಳು ಸಾಹಿತ್ಯಾಸಕ್ತರನ್ನು ಆಕರ್ಷಿಸಲಿವೆ.