Advertisement
ನಿಂತ ನೀರಿನಲ್ಲಿ ಉತ್ಪತ್ತಿಯಾಗುವ ಈ ಅನಾಫಿಲಿಸ್ ಸೊಳ್ಳೆಯಿಂದ ಈ ಜ್ವರ ಕಾಣಿಸಿಕೊಳ್ಳುತ್ತದೆ. 2017ರಲ್ಲಿ ರಾಜ್ಯದಲ್ಲಿ 7,381 ಮಲೇರಿಯಾ ಪ್ರಕರಣಗಳು ಪತ್ತೆಯಾದರೆ, 2018ರಲ್ಲಿ 5,2890 ಪ್ರಕರಣಗಳು ಕಾಣಿಸಿಕೊಂಡಿದೆ. ಸಕಾಲದಲ್ಲಿ ಚಿಕಿತ್ಸೆ ಮತ್ತು ಮದ್ದು ಸಿಗದಿದ್ದಲ್ಲಿ ನಿರೋಧಕ ಶಕ್ತಿ ಕುಗ್ಗಿ ಮಲೇರಿಯಾ ಪೀಡಿತರು ಚೇತರಿಸಿಕೊಳ್ಳುವುದು ಕಷ್ಟ.
Related Articles
Advertisement
ದಕ್ಷಿಣ ಕನ್ನಡವೊಂದರಲ್ಲೇ ಕಳೆದ ವರ್ಷ 4,741 ಪ್ರಕರಣಗಳು ಪತ್ತೆಯಾಗಿದ್ದವು. ವರ್ಷದಿಂದ ಈಚೆಗೆ 494 ಪ್ರಕರಣಗಳು ಬೆಳಕಿಗೆ ಬಂದಿವೆ. ವಿಪರೀತ ಜ್ವರ, ಮೈ ಬೆವರುವುದು, ಕೆಲವರಿಗೆ ವಾಂತಿ, ಮೈಕೈ ನೋವು, ನಿಶಕ್ತಿ, ಮಲೇರಿಯಾ ರೋಗದ ಪ್ರಮುಖ ಲಕ್ಷಣಗಳು. ಈ ಲಕ್ಷಣಗಳು ಪ್ರತಿನಿತ್ಯ ಅಥವಾ ದಿನ ಬಿಟ್ಟು ದಿನ ಕಾಣಿಸಿಕೊಳ್ಳುತ್ತದೆ.
ಮನೆ ಸುತ್ತಮುತ್ತಲಿನ ಪ್ರದೇಶದಲ್ಲಿ ನೀರು ನಿಲ್ಲದಂತೆ ಎಚ್ಚರವಹಿಸುವುದು, ರಾತ್ರಿ ಮಲಗುವಾಗ ಸೊಳ್ಳೆ ಪರದೆ, ಸೊಳ್ಳೆ ಬತ್ತಿ ಉಪಯೋಗ ಮಾಡುವುದು, ಜ್ವರ ಕಾಣಿಸಿಕೊಂಡಾಗ ಅಲಕ್ಷ್ಯ ಮಾಡದೆ ಮೊದಲು ರಕ್ತ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ. ಇಂತಹ ಕ್ರಮಗಳ ಮೂಲಕ ಮಲೇರಿಯಾವನ್ನು ನಿಯಂತ್ರಣಕ್ಕೆ ತರಬಹುದಾಗಿದೆ.
ವಿವಿಧ ಜಿಲ್ಲೆಯಲ್ಲಿ ಮಲೇರಿಯಾ ಪ್ರಕರಣಗಳುರಾಜ್ಯದಲ್ಲಿ ಒಟ್ಟು – 621
ದಕ್ಷಿಣ ಕನ್ನಡ 494, ಉಡುಪಿ 27, ಬಾಗಲಕೋಟೆ 8, ಗದಗ 12 ಮಲೇರಿಯಾ ಪ್ರಕರಣಗಳು ಪತ್ತೆಯಾಗುತ್ತಿವೆ. ರಾಜ್ಯದಲ್ಲಿ ಮಲೇರಿಯಾ ಪ್ರಕರಣಗಳ ಸಂಖ್ಯೆ
ವರ್ಷ ಪ್ರಕರಣಗಳು ಮರಣ
2014 14,784 02
2015 12,548 –
2016 10,630 –
2017 7,381 –
2018 5,289 –