ಭಟ್ಕಳ: ಇಂಡಿಯನ್ ನವಾಯತ್ ಫೋರಂ ವತಿಯಿಂದ ಏ.27ರಂದು ಉದ್ಯೋಗ ಮೇಳ ಆಯೋಜಿಸಲಾಗಿದ್ದು ಭಟ್ಕಳ ತಾಲೂಕಿನ ಉದ್ಯೋಗಾಂಕ್ಷಿಗಳು ಭಾಗವಹಿಸಿ ಪ್ರಯೋಜನ ಪಡೆಯಬೇಕು ಎಂದು ಪೋರಂ ಅಧ್ಯಕ್ಷ ಅಬ್ದುಲ್ ಮಜೀದ್ ಜುಕಾಕು ಹೇಳಿದ್ದಾರೆ.
ಭಟ್ಕಳ ತಾಲೂಕಿನಲ್ಲಿ ಅನೇಕ ಅರ್ಹರಿದ್ದು ಅವರಿಗೆ ಸರಿಯಾದ ಉದ್ಯೋಗ ದೊರೆಯದೇ ತೊಂದರೆಯಾಗಿತ್ತು. ಇತ್ತೀಚೆಗೆ ವಿದೇಶದಿಂದ ಕೂಡಾ ನೂರಾರು ಜನರು ವಾಪಸ್ ಬಂದಿದ್ದು ಅವರಿಗೆ ಉತ್ತಮ ಉದ್ಯೋಗದ ಅವಶ್ಯಕತೆ ಇದೆ. ಇಲ್ಲಿನ ವಾತಾವರಣಕ್ಕೆ ಹೊಂದಿಕೆಯಾಗುವಂತೆ ವ್ಯವಹಾರಗಳನ್ನು ಮಾಡಲು ಸಹ ಸಲಹೆ ನೀಡಲು ವ್ಯವಸ್ಥೆ ಮಾಡಲಾಗಿದೆ ಎಂದು ಸಂಚಾಲಕ ಅಫ್ತಾಬ್ ಹುಸೇನ್ ಕೋಲಾ ಹೇಳಿದರು.
ಕೃಷಿ ಮಾಡುವವರಿಗಾಗಿ ವಿಶೇಷ ಕೃಷಿ ತಜ್ಞರು ಆಗಮಿಸುತ್ತಿದ್ದು ಅತ್ಯಂತ ಕಡಿಮೆ ಹಣದಿಂದ ಸಾವಯವ ಕೃಷಿ ಮಾಡಿ ಕನಿಷ್ಠ ಹತ್ತು ಸಾವಿರ ರೂ. ದುಡಿಯುವ ಮಾರ್ಗವನ್ನು ಹೇಳಿಕೊಡಲಿದ್ದಾರೆ ಎಂದರು. ಆದಿಲ್ ನಾಗರಮಠ, ಅಮೀನ್ ಅಕ್ರಮಿ, ಸಾದಾ ಖಲೀಲ್ ಮುಂತಾದವರು ಉಪಸ್ಥಿತರಿದ್ದರು.
ಉದ್ಯೋಗ ಮೇಳವನ್ನು ಏ.27ರಂದು ಬೆಳಗ್ಗೆ 10ಕ್ಕೆ ಜಿಲ್ಲಾಧಿಕಾರಿ ಡಾ| ಹರೀಶ್‌ಕುಮಾರ್ ಕೆ. ಉದ್ಘಾಟಿಸುವರು. ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಪಿ. ನಾಗೇಶ ಉಪಸ್ಥಿತರಿರುವರು ಎಂದೂ ತಿಳಿಸಲಾಗಿದೆ. ಸಂಜೆ 6 ರತನಕವೂ ಉದ್ಯೋಗ ಮೇಳ ನಡೆಯುವುದು ಎಂದು ತಿಳಿಸಲಾಗಿದೆ.
Advertisement
ಅವರು ಪತ್ರಕರ್ತರೊಂದಿಗೆ ಮಾತನಾಡಿ, ಭಟ್ಕಳದ ನವಾಯತ ಕಾಲೋನಿಯ ಕುಶಾಲ್ ಸಭಾ ಭವನದಲ್ಲಿ ನಡೆಯಲಿರುವ ಉದ್ಯೋಗ ಮೇಳದಲ್ಲಿ ವಿವಿಧ ಕಂಪನಿಗಳು ಭಾಗವಹಿಸಲಿದ್ದು ಭಟ್ಕಳ ತಾಲೂಕು ಹಾಗೂ ಸುತ್ತಮುತ್ತಲಿನ ಆಸಕ್ತರು ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು.
Related Articles
Advertisement