Advertisement

ನಾಳೆ ನೂತನ ಕಡಬ ತಾಲೂಕು ವಿಧ್ಯುಕ್ತ ಉದ್ಘಾಟನೆ

10:18 AM Nov 24, 2018 | |

ಕಡಬ : ಕೊನೆಗೂ ಕಡಬದ ಜನತೆಯ 6 ದಶಕಗಳ ಬಯಕೆ ಈಡೇರುತ್ತಿದೆ. ರಾಜ್ಯದ ಕಂದಾಯ ಸಚಿವ ಆರ್‌.ವಿ. ದೇಶಪಾಂಡೆ ಅವರು ಜಿಲ್ಲಾ ಉಸ್ತವಾರಿ ಸಚಿವ ಯು.ಟಿ.ಖಾದರ್‌ ಅವರ ಉಪಸ್ಥಿತಿಯಲ್ಲಿ ನೂತನ ಕಡಬ ತಾಲೂಕನ್ನು ನ. 25ರಂದು ವಿಧ್ಯುಕ್ತವಾಗಿ ಉದ್ಘಾಟಿಸಲಿದ್ದಾರೆ. ಕಡಬ ತಹಶೀಲ್ದಾರ್‌ ಕಚೇರಿಯ ಆವರಣದಲ್ಲಿ ನಡೆಯಲಿರುವ ಈ ಐತಿಹಾಸಿಕ ಘಟನೆಗೆ ಕಡಬದ ಜನತೆ ಸಾಕ್ಷಿಯಾಗಲಿದ್ದಾರೆ.

Advertisement

ಬಳಿಕ ಅನುಗ್ರಹ ಸಭಾಭವನದಲ್ಲಿ ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಸುಳ್ಯ ಶಾಸಕ ಎಸ್‌. ಅಂಗಾರ ಅವರು ವಹಿಸಲಿದ್ದಾರೆ. ವಿಧಾನ ಪರಿಷತ್‌ನ ವಿಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಜಿ.ಪಂ.ಅಧ್ಯಕ್ಷ ಮೀನಾಕ್ಷಿ ಶಾಂತಿಗೋಡು, ಸಂಸದ ನಳಿನ್‌ಕುಮಾರ್‌ ಕಟೀಲು, ಪುತ್ತೂರು ಶಾಸಕ ಸಂಜೀವ ಮಠಂದೂರು, ವಿಧಾನ ಪರಿಷತ್‌ ಸದಸ್ಯರಾದ ಐವನ್‌ ಡಿ’ಸೋಜಾ, ಕೆ.ಪ್ರತಾಪಚಂದ್ರ ಶೆಟ್ಟಿ, ಬಿ.ಎಂ.ಫಾರೂಕ್‌, ಕೆ.ಹರೀಶ್‌ಕುಮಾರ್‌, ಆಯನೂರು ಮಂಜುನಾಥ್‌, ಎಸ್‌. ಎಲ್‌. ಭೋಜೇಗೌಡ, ಪುತ್ತೂರು ತಾ.ಪಂ. ಅಧ್ಯಕ್ಷೆ ಭವಾನಿ ಚಿದಾನಂದ, ಕಡಬ ಗಾ.ಪಂ. ಅಧ್ಯಕ್ಷ ಬಾಬು ಮುಗೇರ ಅವರು ಮುಖ್ಯಅತಿಥಿಗಳಾಗಿ ಆಗಮಿಸಲಿದ್ದಾರೆ. ಜಿಲ್ಲಾಧಿಕಾರಿ ಎಸ್‌. ಸಸಿಕಾಂತ ಸೆಂಥಿಲ್‌, ಎಸ್ಪಿ ಡಾ| ಬಿ.ಆರ್‌., ರವಿಕಾಂತೇ ಗೌಡ ಹಾಗೂ ವಿವಿಧ ಆಕಾಡೆಮಿಗಳ ಅಧ್ಯಕ್ಷರು ಸಮಾರಂಭದಲ್ಲಿ ಉಪಸ್ಥಿತರಿರಲಿದ್ದಾರೆ.

ಮತ್ತೆ ಮರುಕಳಿಸಿದ ಸಂಭ್ರಮಾಚರಣೆಯ ನೆನಪುಗಳು
ಹಲವು ದಶಕಗಳ ಕಡಬ ತಾ| ಹೋರಾಟಕ್ಕೆ ತಾರ್ಕಿಕ ಜಯ 6 ವರ್ಷಗಳ ಹಿಂದೆಯೇ ಸಿಕ್ಕಿತ್ತು. ಅಂದು ರಾಜ್ಯದ ಮುಖ್ಯಮಂತ್ರಿಯಾಗಿದ್ದ ಜಗದೀಶ ಶೆಟ್ಟರ್‌ ಅವರು ತನ್ನ ಅಧಿಕಾರಾವಧಿಯ ಕೊನೆಯ ಬಜೆಟ್‌ ಮಂಡನೆಯ ವೇಳೆ (2013 ಫೆ. 8) ಕಡಬವೂ ಸೇರಿದಂತೆ ರಾಜ್ಯದಲ್ಲಿ ಹೊಸದಾಗಿ 43 ತಾಲೂಕುಗಳನ್ನು ಘೋಷಣೆ ಮಾಡುವ ಮೂಲಕ ಕಡಬ ಪರಿಸರದಲ್ಲಿ ಸಂತಸ ಮುಗಿಲುಮುಟ್ಟಿತ್ತು.

ಅಂದು ಮಧ್ಯಾಹ್ನದ ವೇಳೆಗೆ ದೃಶ್ಯ ಮಾಧ್ಯಮಗಳಲ್ಲಿ ಹೊಸ ತಾಲೂಕು ಘೋಷಣೆಯ ವಿಷಯ ಪ್ರಸಾರವಾಗುತ್ತಿದ್ದಂತೆಯೇ ಕಡಬ ಪೇಟೆಯಲ್ಲಿ ಜನ ಸಂತಸದಿಂದ ಕುಣಿದಾಡಿದರು. ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಸಂಜೆ ಕಡಬ ತಾ| ಹೋರಾಟ ಸಮಿತಿಯ ನೇತೃತ್ವದಲ್ಲಿ ನಡೆದ ಹರ್ಷಾಚರಣೆಯಲ್ಲಿ ವಿವಿಧ ಸಂಘ ಸಂಸ್ಥೆಗಳು, ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ಜನಪ್ರತಿನಿಧಿಗಳು ಭಾಗವಹಿಸಿದರು. ಜನರು ನಾಸಿಕ್‌ ಬ್ಯಾಂಡ್‌ನ‌ ಸದ್ದಿಗೆ ಯುವಕರು, ವೃದ್ಧರು ಎನ್ನುವ ಬೇಧವಿಲ್ಲದೆ ಕುಣಿದು ಕುಪ್ಪಳಿಸಿದರು. 

ಸಂತಸದ ಸಂಗತಿ
ಸುಬ್ರಹ್ಮಣ್ಯ ಗ್ರಾಮ ಕಡಬ ತಾ|ಗೆ ಸೇರ್ಪಡೆ ಆಗುತ್ತಿರುವುದು ಸಂತಸದ ಸಂಗತಿ. ಮೂಲ ಸೌಕರ್ಯ ಸಹಿತ ಎಲ್ಲ ವಿಚಾರಕ್ಕೂ ಅನುಕೂಲವಾಗಲಿದೆ. ಕಡಬ ತಾಲೂಕಾಗಿ ಅಧಿಕೃತ ಘೋಷಣೆಯಾಗುತ್ತಿರುವ ಈ ಹೊತ್ತಲ್ಲಿ ಜನತೆಗೆ ಅಭಿನಂದನೆ ಸಲ್ಲಿಸುತ್ತೇನೆ.
-ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀ, ಶ್ರೀ ಸಂಪುಟ ನರಸಿಂಹ ಸ್ವಾಮಿ ಮಠ 

Advertisement

ನಡುವಿನ ಅಂತರ ಕಿ.ಮೀ.ಗಳಲ್ಲಿ
ಸುಬ್ರಹ್ಮಣ್ಯ-ಕಡಬ 22, ಸುಳ್ಯ-ಕಡಬ 42, ಪುತ್ತೂರು-ಕಡಬ 45

ನಾಗರಾಜ್‌ ಎನ್‌.ಕೆ.

Advertisement

Udayavani is now on Telegram. Click here to join our channel and stay updated with the latest news.

Next