Advertisement

ನಾಳೆ ಧ್ರುವಸರ್ಜಾ ಎಂಗೇಜ್‌ಮೆಂಟ್‌

11:11 AM Dec 08, 2018 | |

ನಟ ಧ್ರುವಸರ್ಜಾ ಮತ್ತು ಪ್ರೇರಣಾ ಶಂಕರ್‌ ಪ್ರೀತಿಸಿ, ಮದುವೆಯಾಗುತ್ತಿದ್ದಾರೆ ಎಂಬ ವಿಷಯ ಎಲ್ಲರಿಗೂ ಗೊತ್ತಿದೆ. ಸ್ವತಃ ಧ್ರುವಸರ್ಜಾ ಅವರೇ ಈ ವಿಷಯವನ್ನು ಸ್ಪಷ್ಟಪಡಿಸಿದ್ದರು. ಈಗ ಅದಕ್ಕೆ ಪೂರಕವಾದ ಹೊಸ ಸುದ್ದಿಯೆಂದರೆ, ಧ್ರುವಸರ್ಜಾ ಮತ್ತು ಪ್ರೇರಣಾ ಶಂಕರ್‌ ಅವರ ಎಂಗೇಜ್‌ಮೆಂಟ್‌ ಡಿಸೆಂಬರ್‌ 9 ರ ಭಾನುವಾರದಂದು ನಡೆಯಲಿದೆ.

Advertisement

ಬೆಂಗಳೂರಿನ ಪುಣ್ಯಕ್ಷೇತ್ರ ಶ್ರೀ ಧರ್ಮಗಿರಿ ದೇವಾಲಯದಲ್ಲಿ ನಡೆಯಲಿರುವ ಧ್ರುವಸರ್ಜಾ ಅವರ ಎಂಗೇಜ್‌ಮೆಂಟ್‌ ಕಾರ್ಯಕ್ರಮಕ್ಕೆ ಚಿತ್ರರಂಗದ ಹಲವು ಗಣ್ಯರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಇನ್ನು, ಎಂಗೇಜ್‌ಮೆಂಟ್‌ಗಾಗಿ ದೇವಾಲಯ ಆವರಣದಲ್ಲಿ ತೆಂಗಿನ ಗರಿಗಳ ಚಪ್ಪರ ಹಾಕಿರುವುದು ವಿಶೇಷತೆಗಳಲ್ಲೊಂದು.

ಸ್ವತಃ ಧ್ರುವಸರ್ಜಾ ಅವರೇ, ದೇವಾಲಯದ ಆವರಣದಲ್ಲಿ ಸಜ್ಜುಗೊಳ್ಳುತ್ತಿರುವ ತೆಂಗಿನ ಗರಿಗಳ ಚಪ್ಪರವನ್ನು ವೀಕ್ಷಿಸಿ, ಉಸ್ತುವಾರಿ ಹೇಗೆಲ್ಲಾ ನಡೆಯುತ್ತಿದೆ ಎಂಬುದನ್ನು ನೋಡಿಕೊಳ್ಳುತ್ತಿದ್ದಾರೆ. ಸದ್ಯಕ್ಕೆ ಎಂಗೇಜ್‌ಮೆಂಟ್‌ ವಿಷಯ ಹೇಳಿಕೊಂಡಿದ್ದಾರೆ. ಮದುವೆ ಯಾವಾಗ ಎಂಬುದಕ್ಕೆ ಇನ್ನೂ ಸ್ವಲ್ಪ ದಿನ ಕಾಯಬೇಕು. ಧ್ರುವಸರ್ಜಾ ಸದ್ಯಕ್ಕೆ ಯಶಸ್ವಿ ಚಿತ್ರಗಳನ್ನು ನೀಡುವ ಮೂಲಕ ಬೇಡಿಕೆಯ ನಟರಾಗಿದ್ದಾರೆ. ಅವರೀಗ “ಪೊಗರು’ ಚಿತ್ರದಲ್ಲಿ ನಟಿಸುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next