Advertisement

ನಾಳೆ ‘ದಂಡಿ’ಚಲನಚಿತ್ರ ಬಿಡುಗಡೆ

04:26 PM Apr 07, 2022 | Niyatha Bhat |

ಸಾಗರ: ಏ.8ರಂದು ‘ದಂಡಿ’ ಚಲನಚಿತ್ರ ಬಿಡುಗಡೆಯಾಗುತ್ತಿದ್ದು, ಸ್ಥಳೀಯ ಕಲಾವಿದೆ ಶಾಲಿನಿ ಭಟ್‌ ನಾಯಕಿಯಾಗಿ ನಟಿಸಿದ್ದು, ಶ್ರೀ ಚಿತ್ರಮಂದಿರದಲ್ಲಿ ತೆರೆ ಕಾಣಲಿದೆ. ‘ದಂಡಿ’ ಚಲನಚಿತ್ರವನ್ನು ಉತ್ತರ ಕನ್ನಡ ಭಾಗದ ಸ್ವಾತಂತ್ರ್ಯ ಚಳುವಳಿಯ ಘಟನೆಗಳನ್ನು ಆಧರಿಸಿ ತೆರೆಯ ಮೇಲೆ ತರಲಾಗಿದೆ. ಅಂದಿನ ಕಾಲದಲ್ಲಿ ಗುಜರಾತ್‌ನಲ್ಲಿ ನಡೆದ ಹೋರಾಟಗಳು, ಉತ್ತರ ಕನ್ನಡ ಜಿಲ್ಲೆಯಲ್ಲೂ ಸಹ ನಡೆದಿತ್ತು ಎನ್ನುವುದನ್ನು ಚಲನಚಿತ್ರ ಸಾಕ್ಷೀಕರಿಸಿದೆ.

Advertisement

ಚಾರಿತ್ರಿಕವಾದ ದಂಡಿ ಚಲನಚಿತ್ರ ವಿವಿಧ ಸಮುದಾಯ ಹೋರಾಟದಲ್ಲಿ ಪಾಲ್ಗೊಂಡಿದ್ದನ್ನು ತೆರೆಯ ಮೇಲೆ ತರುವ ಪ್ರಯತ್ನ ನಡೆಸಿದೆ. ರಾಗಂ ಕಾದಂಬರಿಯನ್ನು ಆಧಾರಿತ ಚಲನಚಿತ್ರವನ್ನು ಉಷಾರಾಣಿ ಎಸ್‌.ಪಿ. ನಿರ್ಮಾಣ ಮಾಡಿದ್ದಾರೆ.

ಯುವಾನ್‌ ದೇವ್‌ ನಾಯಕನಾಗಿ, ಶಾಲಿನಿ ಭಟ್‌ ನಾಯಕಿಯಾಗಿ ನಟಿಸಿದ್ದು, 132ಕ್ಕೂ ಹೆಚ್ಚು ಕಲಾವಿದರು ನಟಿಸಿದ್ದಾರೆ.

ಈಗಾಗಲೇ ಚಿತ್ರವು ಬೆಂಗಳೂರಿನಲ್ಲಿ ನಡೆದ ಫಿಲ್ಮ್ ಫೆಸ್ಟಿವಲ್‌ನಲ್ಲಿ ದ್ವಿತೀಯ ಸ್ಥಾನ ಪಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next