Advertisement

ನಾಳೆ ಚಂಪಕಸ್ವಾಮಿ ರಥೋತ್ಸವ

01:19 PM Mar 25, 2019 | Lakshmi GovindaRaju |

ಆನೇಕಲ್: ಬೆಂಗಳೂರಿನ ಹೊರಹೊಲ ಯದಲ್ಲಿರುವ ಬನ್ನೇರುಘಟ್ಟದ ಇತಿಹಾಸ ಪ್ರಸಿದ್ಧ ಶ್ರೀ ಚಂಪಕಧಾಮ ಸ್ವಾಮಿ ಬ್ರಹ್ಮ ರಥೋತ್ಸವ ಮಂಗಳವಾರ ವಿಜೃಂಭಣೆ ಯಿಂದ ನಡೆಯಲಿದೆ.

Advertisement

9 ದಿನಗಳ ಕಾಲ ನಡೆಯುವ ಜಾತ್ರೆಯ ಪ್ರಕ್ರಿಯೆಯಲ್ಲಿ 7ನೇ ದಿನದಂದು ಚಂಪಕ ಧಾಮ ಸ್ವಾಮಿ ತನ್ನ ಸತಿಯರಾದ ಶ್ರೀದೇವಿ ಮತ್ತು ಭೂದೇವಿಯರೊಡನೆ ಬ್ರಹ್ಮರಥದಲ್ಲಿ ಕುಳಿತು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಹೋರಟು, ಸಂಜೆ ವೇಳೆಗೆ ತನ್ನ ಮೂಲ ಸ್ಥಾನ ಸೇರುವ ವಾಡಿಕೆ ಹಿಂದಿ ನಿಂದಲೂ ನಡೆದುಕೊಂಡುಬಂದಿದೆ.

ಕೊಳದಲ್ಲಿ ಸ್ನಾನ: ಬ್ರಹ್ಮರಥೋತ್ಸವದ ದಿನದ ಹಿಂದಿನ ದಿನವನ್ನು ಕೂಟವೆ ಎಂದು ಕರೆ ಯುತ್ತಾರೆ. ಆ ದಿನದ ರಾತ್ರಿಯೇ ಗುಂಪು, ಗುಂಪುಗಳಲ್ಲಿ ಜನ ಬಂದು ಗ್ರಾಮದ ಹೊರ ವಲಯದಲ್ಲಿ ಬಿಡುಬಿಟ್ಟು ತಮ್ಮ ಹರಕೆ ಗಳನ್ನು ತೀರಿಸಿಕೊಳ್ಳುವ ಸಿದ್ಧತೆಯಲ್ಲಿರು ತ್ತಾರೆ. ಕೆಲವರು ರಾತ್ರಿ ಕತ್ತಲೆಯಲ್ಲಿಯೇ ವ್ನಹಿಗಿರಿ ಬೆಟ್ಟದ ಹಿಂದಿರುವ ಕಾಡಿನ ಕಾಲು ದಾರಿಯಲ್ಲಿ ನಡೆದು ಕಾಡಿನ ಮಧ್ಯೆ ಇರುವ ಪುಣ್ಯ ಕ್ಷೇತ್ರವಾದ ಸುವರ್ಣಮುಖೀ ತೀರ್ಥ ಕ್ಷೇತ್ರಕ್ಕೆ ತೆರಲಿ ಕೊಳದಲ್ಲಿ ಸ್ನಾನ ಮುಗಿಸಿ, ಮಡಿ ಬಟ್ಟೆಯಲ್ಲಿ ಬರುವ ವೇಳೆಗಾಗಲೇ ಬೆಳಗಾಗಿರುತ್ತದೆ. ಆ ವೇಳೆಗೆ ಚಂಪಕನ ಮೂಲ ಮೂರ್ತಿಯ ದರ್ಶನ ಪಡೆದು ರಥೋತ್ಸವದಲ್ಲಿ ಭಕ್ತರು ಪಾಲ್ಗೊಳ್ಳುತ್ತಾರೆ.

ಅಲಂಕೃತ ವ್ಯಕ್ತಿಯ ಮೆರವಣಿಗೆ: ಇನ್ನು ಊರಿನ ಹೊರವಲಯದಲ್ಲಿ ಬಿಡಾರ ಹೂಡಿರುವ ತಂಡಗಳು ಸಹ ಒಬ್ಬ ವ್ಯಕ್ತಿಗೆ ಮಲ್ಲಿಗೆ ಹೂವುಗಳಿಂದ ಕರಗದ ರೀತಿಯಲ್ಲಿ ಅಲಂಕಾರ ಮಾಡಿ ತಮಟೆ ವಾದ್ಯಗಳ ಜತೆ ಮೆರವಣಿಗೆ ಮಾಡುತ್ತಾರೆ. ಅಲಂಕೃತ ವ್ಯಕ್ತಿ ಆವೇಶಭರಿತನಾಗಿ ಕುಣಿಯುತ್ತ ಸಾಗುವ ಮೂಲಕ ಜನಮನ ಸೆಳೆಯುತ್ತಾನೆ. ಈ ರೀತಿ ಹರಕೆಗಳನ್ನು ತೀರಿಸುವ ತಂಡಗಳು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವ ಣಿಗೆ ನಡೆಸಿ ಬ್ರಹ್ಮರಥದ ಬಳಿ ಬಂದು ತಮ್ಮ ಹರಕೆಗಳನ್ನು ತೀರಿಸಿಕೊಳ್ಳುತ್ತಾರೆ. ನಂತರ ಸಮೀಪದ ಬೇಗಿಹಳ್ಳಿ ಗ್ರಾಮ ದೇವತೆ ಬೇಗಳಮ್ಮ ದೇವಿಗೂ ಹರಕೆ ಸಲ್ಲಿಸುವ ವಾಡಿಕೆ ಹಿಂದಿನಿಂದಲೂ ಬೆಳೆದು ಬಂದಿದೆ.

ತಮಿಳು ಭಕ್ತರೇ ಹೆಚ್ಚು: ಜಾತ್ರೆಗೆ ತಮಿಳು ನಾಡು ಸೇರಿದಂತೆ ರಾಜ್ಯದ ವಿವಿಧ ಕಡೆ ಗಳಿಂದ ಸಾವಿರಾರು ಭಕ್ತರು ಆಗಮಿಸು ತ್ತಾರೆ. ಈ ಜಾತ್ರೆಗೆ ತಮಿಳುನಾಡು ಮೂಲದ ಭಕ್ತರೇ ಹೆಚ್ಚಿನ ಸಂಖ್ಯೆಯಲ್ಲಿರುತ್ತಾರೆ. ಅದಕ್ಕೆ ಪ್ರಮುಖ ಕಾರಣ ಇತಿಹಾಸ ಪುಟಗಳಿಂದ ತಿಳಿದು ಬರುತ್ತದೆ. ಇಂದಿನ ಚಂಪಕಧಾಮ ಸ್ವಾಮಿ ದೇವಾಲಯವನ್ನು ಚೋಳರ ರಾಜ ಪೂರ್ವಾಧಿರಾಯ ಈಗಿನ ತಮಿಳುನಾಡಿಗೆ ಸೇರಿದ ಹೊಸೂರನ್ನು ರಾಜಧಾನಿಯಾಗಿ ಮಾಡಿಕೊಂಡು ಆಳ್ವಿಕೆ ನಡೆಸುತ್ತಿದ್ದ. ಆಗ ಬನ್ನೇರುಘಟ್ಟದಲ್ಲಿ ದಾಮೋದರ ಪೆರು ಮಾಳ್‌ ಹೆಸರಿನ ದೇವಾಲಯವನ್ನು ಕಟ್ಟಿಸಿದ್ದ ನೆಂಬ ಬಗ್ಗೆ ಇಲ್ಲಿನ ಶಾಸನಗಳಿಂದ ತಿಳಿದು ಬಂದಿದೆ. ಹಾಗಾಗಿ, ಈ ದೇವರಿಗೆ ತಮಿಳು ಮೂಲದ ಭಕ್ತರೇ ಹೆಚ್ಚು.

Advertisement

ಬನ್ನೇರುಘಟ್ಟದ ಶ್ರೀ ಚಂಪಕಧಾಮ ಸ್ವಾಮಿ ದೇವಾಲಯ ಸಾವಿರ ವರ್ಷಗಳಿಗೂ ಹೆಚ್ಚು ಹಳೆಯದೆಂದು ಇಲ್ಲಿ ದೊರೆತಿರುವ ಶಾಸನಗಳಿಂದ ತಿಳಿದು ಬರುತ್ತದೆ. ದೇವಾ ಲಯ ಹಲವು ರಾಜ ಮನೆತನಗಳಿಂದ ನೂರಾರು ವರ್ಷಗಳ ಕಾಲಾವಧಿಯಲ್ಲಿ ಅಭಿವೃದ್ಧಿಯಾಗುತ್ತ ಬಂದಿದ್ದು, ಇಂದಿಗೂ ಸಾಗಿದೆ. ದೇವಾಲಯ ಎತ್ತರವಾದ ಜಗಲಿಯ ಮೇಲೆ ಬೃಹತ್‌ ಗಾತ್ರದ ಕಲ್ಲು ಕಂಬಗಳಿಂದ ನಿರ್ಮಾಣ ಮಾಡಲಾಗಿದೆ. ಚಂಪಕಸ್ವಾಮಿ ದೇವರ ಸಮೀಪದಲ್ಲಿ ಶ್ರೀ ಲಕ್ಷ್ಮೀ ದೇವಾಲಯವೂ ಇದೆ. ಇದು ವಿಜಯನಗರ ಅರಸರ ಕಾಲಕ್ಕೆ ಸೇರಿದ್ದೆಂದು ಇತಿಹಾಸಕಾರರು ಹೇಳುತ್ತಾರೆ.

50 ಅಡಿ ಏಕ ಶಿಲಾ ಗರುಡಗಂಬ: ದೇವಾ ಲಯದ ಹಿಂದೆ ದೊಡ್ಡ ಬೆಟ್ಟವಿದ್ದು, ಅದನ್ನು ವ್ನಹಿಗಿರಿ ಎಂದು ಕರೆದಿರುವುದಕ್ಕೆ ಶಾಸನ ಗಳು ಸಾಕ್ಷಿಯಾಗಿವೆ. ಬೆಟ್ಟದ ಮೇಲೆ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯವಿದೆ. ಊರಿನ ಮಧ್ಯೆ ಭಾಗದಲ್ಲಿ ಗ್ರಾಮ ದೇವತೆ ಮಾರಮ್ಮ ದೇವಾಲಯ, ಗ್ರಾಮದ ದ್ವಾರ ಭಾಗದಲ್ಲಿ ಆಂಜ ನೇಯಸ್ವಾಮಿ ದೇವಾಲಯ ವಿವೆ. ಈ ಎಲ್ಲ ದೇಗುಲಗಳಿಗೂ ತನ್ನದೇ ಆದ ಐತಿಹಾಸಿಕ ಹಿನ್ನೆಲೆಯಿದೆ. ಹಾಗೆ ಸುಮಾರು 50 ಅಡಿಗಳ ಏಕ ಶಿಲಾ ಗರುಡಗಂಬ ಅಪರೂಪದ್ದಾಗಿದೆ.

* ಮಂಜುನಾಥ್‌ ಎನ್‌ ಬನ್ನೇರುಘಟ್ಟ.

Advertisement

Udayavani is now on Telegram. Click here to join our channel and stay updated with the latest news.

Next