Advertisement

ನಾಳೆ ಪುತಿನ ಕಾವ್ಯ, ಕನ್ನಡ ಸೇವಾರತ್ನ ಪ್ರಶಸ್ತಿ ಪ್ರದಾನ

03:19 PM Apr 30, 2019 | Suhan S |

ಪಾಂಡವಪುರ: ಜಿಲ್ಲಾ ಯುವ ಬರಹಗಾರರ ಬಳಗದ ಪಾಂಡವಪುರ ತಾಲ್ಲೂಕು ಘಟಕದ ವತಿಯಿಂದ ಮೇ 1 ರಂದು ಬೆಳಗ್ಗೆ 10 ಗಂಟೆಗೆ ಪಟ್ಟಣದ ವಿಜಯ ಬಿಇಡಿ ಕಾಲೇಜಿನ ಸಭಾಂಗಣದಲ್ಲಿ ಸಾಹಿತಿ ದಿವಂಗತ ಪು.ತಿ.ನರಸಿಂಹಾಚಾರ್‌ ಸ್ಮರಣಾರ್ಥ ರಾಜ್ಯ ಮಟ್ಟದ ಕವಿ-ಕಾವ್ಯ ಸಮ್ಮಿಲನ, ಕವನ ಸಂಕಲನ ಬಿಡುಗಡೆ, ಪುತಿನ ಕಾವ್ಯ ಪ್ರಶಸ್ತಿ ಹಾಗೂ ಕನ್ನಡ ಸೇವಾರತ್ನ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಬಳಗದ ತಾಲೂಕು ಅಧ್ಯಕ್ಷ ರಂಗನಾಥ್‌ ಕ್ಯಾತನಹಳ್ಳಿ ತಿಳಿಸಿದ್ದಾರೆ.

Advertisement

ಉದ್ಘಾಟನೆಯನ್ನು ಸಾಹಿತಿ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ನೆರವೇರಿಸುವರು. ವಿದ್ಯಾ ಪ್ರಚಾರ ಸಂಘದ ಗೌರವ ಕಾರ್ಯದರ್ಶಿ ಕೆ.ವಿ. ಬಸವರಾಜು ಅಧ್ಯಕ್ಷತೆ ವಹಿಸುವರು. ಜಿಲ್ಲಾ ಯುವ ಬರಹಗಾರರ ಬಳಗದ ಅಧ್ಯಕ್ಷ ಟಿ.ಸತೀಶ್‌ ಜವರೇಗೌಡ ಆಶಯ ಭಾಷಣ ಮಾಡುವರು. ಡಾ. ಪ್ರದೀಪ್‌ ಕುಮಾರ್‌ ಹೆಬ್ರಿ ಅವರಿಗೆ ‘ಪುತಿನ ಕಾವ್ಯ ಪ್ರಶಸ್ತಿ’ ಪ್ರದಾನ ಮಾಡಲಾಗುವುದು.

ಪುಸ್ತಕ ಬಿಡುಗಡೆ: ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಗೌರವ ಕಾರ್ಯದರ್ಶಿ ರಾಮೇಗೌಡರು ಯುವಕವಿ ಕೆ.ಬಿ.ಮಹೇಶ್‌ ಸೂರಮ್ಮನಹಳ್ಳಿಯವರ ‘ಬಿಸಿಲ ಮಲ್ಲಿಗೆ’ ಕವನ ಸಂಕಲನ ಬಿಡುಗಡೆ ಮಾಡುವರು. ತಾಲೂಕು ಮಕ್ಕಳ ಸಾಹಿತ್ಯ ವೇದಿಕೆ ಅಧ್ಯಕ್ಷ ಧನ್ಯಕುಮಾರ್‌, ಯುವ ಸಾಹಿತಿ ರಂಗಸ್ವಾಮಿ ಗಾಡಿಗ್‌, ಶಿಕ್ಷಕ ಕೆ.ಬಿ.ಕುಮಾರ್‌, ಅರಸೀಕೆರೆ ತಾಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ರಾಜ್ಯ ಪರಿಷತ್‌ ಸದಸ್ಯ ಜಯಕುಮಾರ್‌ ಅತಿಥಿಗಳಾಗಿ ಪಾಲ್ಗೊಳ್ಳುವರು.

ಕವಿ-ಕಾವ್ಯ ಸಮ್ಮಿಲನ: ಮಧ್ಯಾಹ್ನ 12 ಗಂಟೆಗೆ ನಡೆಯಲಿರುವ ಕವಿ-ಕಾವ್ಯ ಸಮ್ಮಿಲನದ ಮೊದಲನೆಯ ಕವಿಗೋಷ್ಠಿಯು ಕೆ.ಆರ್‌. ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ. ದ. ಸತೀಶ್‌ಚಂದ್ರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಹುಣಸೂರಿನ ಬಿಳಿಕೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕಿ ಡಾ. ಎಂ.ಎನ್‌.ಕವಿತಾ ಚಾಲನೆ ನೀಡುವರು ರು. ಮಧ್ಯಾಹ್ನ 2 ಗಂಟೆಗೆ ನಡೆಯಲಿರುವ 2ನೇ ಕವಿಗೋಷ್ಠಿ ಮಂಡ್ಯದ ಮಹಿಳಾ ಸರ್ಕಾರಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಎ.ಆರ್‌.ಮದನಕುಮಾರ್‌ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಹಾಸನದ ಕವಯಿತ್ರಿ ಮಮತಾ ಅರಸೀಕೆರೆ ಚಾಲನೆ ನೀಡುವರು. ಈ ಎರಡು ಕವಿಗೋಷ್ಠಿಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ 70 ಮಂದಿ ಕವಿ-ಕವಯಿತ್ರಿಯರು ಸ್ವರಚಿತ ಕವನ ವಾಚನ ಮಾಡುವರು.

ಸಮಾರೋಪ ಸಮಾರಂಭ:

ಸಂಜೆ 4 ಗಂಟೆಗೆ ನಡೆಯುವ ಸಮಾರೋಪ ಹಾಗೂ ಕನ್ನಡ ಸೇವಾರತ್ನ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆಯನು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಹೆಚ್.ಕೆ. ರಾಮು ವಹಿಸಲಿದ್ದು, ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಟಿ. ತಿಮ್ಮೇಗೌಡ ಪ್ರಶಸ್ತಿ ಪ್ರದಾನ ಮಾಡುವರು. ಪ್ರಶಸ್ತಿ ಪುರಸ್ಕೃತರ ಕುರಿತು ಟಿ. ಸತೀಶ್‌ ಜವರೇಗೌಡ ಅಭಿನಂದನ ಭಾಷಣ ಮಾಡುವರು. ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಹ ಕಾರ್ಯದರ್ಶಿ ಕೆ. ಯುವರಾಜ್‌ ಕವಿಗಳಿಗೆ ಸ್ಮರಣಿಕೆ ಮತ್ತು ಪ್ರಶಸ್ತಿ ಪತ್ರ ವಿತರಿಸುವರು. ಜಿಪಂ ಮಾಜಿ ಸದಸ್ಯ ಕೆಂಪೂಗೌಡ ಮುಖ್ಯ ಅತಿಥಿಯಾಗಿ ಭಾಗವಹಿಸುವರು.
ಕನ್ನಡ ಸೇವಾರತ್ನ ಪ್ರಶಸ್ತಿ:

ವಿವಿಧ ಕ್ಷೇತ್ರದ ಸಾಧಕರಾದ ಪಾಂಡವಪುರ ತಾಲೂಕಿನ ಕ್ಯಾತನಹಳ್ಳಿಯ ವೆಂಕಟೇಗೌಡ ಸೇವಾ ಸಮಿ ತಿಯ ಅಧ್ಯಕ್ಷ ಡಾ.ಕೆ.ವೈ. ಶ್ರೀನಿವಾಸ್‌, ಬೆಂಗಳೂರಿನ ವಿಶ್ವಮಾನವ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಎಂ. ಪುಟ್ಟರಾಜು, ಬೀದರಿನ ಸಾಹಿತಿ ಹಾಗೂ ಸಾಂಸ್ಕೃತಿಕ ಸಂಘಟಕ ಸಂಜೀವಕುಮಾರ್‌ ಅತಿವಾಳೆ, ಮದ್ದೂರು ತಾಲೂಕಿನ ಚಂದೂಪುರದ ಡಿ.ಕೆ.ಗೌಡ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಬಿ. ಹೆಚ್. ಪುಟ್ಟಸ್ವಾಮಿ, ರಂಗಭೂಮಿ ಕಲಾವಿದ ಹಾಗೂ ಗಾಯಕ ಬೇವಿನಕುಪ್ಪೆ ನಾಗಲಿಂಗೇಗೌಡ, ನಾಗಮಂಗಲದ ಹಾರ್ಟ್‌ ಟ್ರಸ್ಟ್‌ ನಿರ್ದೇಶಕ ಡಿ.ಆರ್‌. ವಸಂತ್‌ ಕುಮಾರ್‌ ‘ಕನ್ನಡ ಸೇವಾರತ್ನ’ ಪ್ರಶಸ್ತಿ ಸ್ವೀಕರಿಸುವರು.
Advertisement

Udayavani is now on Telegram. Click here to join our channel and stay updated with the latest news.

Next