Advertisement

ಟೊಮೇಟೊ ತುಟ್ಟಿ ತಾತ್ಕಾಲಿಕ: ಕೇಂದ್ರ

11:51 PM Jun 27, 2023 | Team Udayavani |

ಹೊಸದಿಲ್ಲಿ: ಕರ್ನಾಟಕ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಟೊಮೇಟೊ ಬೆಲೆ ತೀವ್ರ ಏರಿಕೆಯಾಗಿರುವುದು ಗ್ರಾಹಕರನ್ನು ಚಿಂತೆಗೀಡಾಗಿಸಿದ ಬೆನ್ನಲ್ಲೇ ಇದು ತಾತ್ಕಾಲಿಕ ಹಾಗೂ ಋತುಮಾನದ ವಿದ್ಯಮಾನ ಅಷ್ಟೇ ಎಂದು ಕೇಂದ್ರ ಸರಕಾರ ಸ್ಪಷ್ಟಪಡಿಸಿದೆ. ಶೀಘ್ರವೇ ಬೆಲೆ ಇಳಿಕೆಯಾಗಲಿದೆ ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಸಚಿವಾಲಯದ ವರದಿಗಳ ಪ್ರಕಾರ ದೇಶಾದ್ಯಂತ ಸಂಗ್ರಹಿಸಿರುವ ದತ್ತಾಂಶಗಳ ಆಧಾರದ ಮೇಲೆ ಟೊಮೇಟೊ ಪ್ರತೀ ಕೆ.ಜಿ.ಯ ಸರಾಸರಿ ಬೆಲೆ 46 ರೂ.ಗಳಾಗಿದ್ದು, ಮಾದರಿ ಬೆಲೆ 50 ರೂ ಹಾಗೂ ಗರಿಷ್ಠ ಬೆಲೆ 122 ರೂ.ಗಳಾಗಿವೆ. ಬೆಂಗಳೂರು, ಮಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಈಗಾಗಲೇ ಟೊಮೇಟೊ ಬೆಲೆ ಕೆ.ಜಿ.ಗೆ 100 ರೂ.ಗೆ ತಲುಪಿದೆ.
ಶಿಮ್ಲಾದಲ್ಲಿ ಕೆ.ಜಿ. ಟೊಮೇಟೊಗೆ 100 ರೂ.ಗಳಿದ್ದರೆ, ಇಂದೋರ್‌ನಲ್ಲಿ 110 ರೂ. ಆಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಗ್ರಾಹಕ ಸಚಿವಾಲಯದ ಕಾರ್ಯದರ್ಶಿ ರೋಹಿತ್‌ ಕುಮಾರ್‌ ಪ್ರತಿಕ್ರಿಯಿಸಿ, ವಿಪರೀತ ಮಳೆ ಯಾಗು ತ್ತಿರುವುದರಿಂದ ಸಾಗಾ ಟಕ್ಕೆ ಅಡೆತಡೆಯಾಗಿ ಪೂರೈಕೆ ವ್ಯತ್ಯಯ ವಾಗಿದೆ. ಹೀಗಾಗಿ ಬೆಲೆ ಏರಿದೆ. ಆದರೆ ಇದು ತಾತ್ಕಾಲಿಕ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next