ನವದೆಹಲಿ: ದೇಶದೆಲ್ಲೆಡೆ ಟೊಮ್ಯಾಟೋ ಭಾರಿ ಸದ್ದು ಮಾಡುತ್ತಿದೆ, ದಿನದಿಂದ ದಿನಕ್ಕೆ ಟೊಮ್ಯಾಟೋ ಬೆಲೆ ಗಗನಕ್ಕೇರುತ್ತಿದೆ 150 ಇದ್ದ ಬೆಲೆ ಇದೀಗ ಇನ್ನೂರರ ಗಡಿ ದಾಟಿದೆ ಇದಕ್ಕೆ ಕಡಿವಾಣ ಹಾಕಲು ಕೇಂದ್ರ ಸರಕಾರ ಹೊಸ ನಿಯಮವೊಂದನ್ನು ತಂದಿದ್ದು ಟೊಮ್ಯಾಟೋ ಖರೀದಿಸಿ ಅದನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡುವ ಯೋಜನೆಯನ್ನು ಶುಕ್ರವಾರ ಆರಂಭಿಸಿದೆ.
ಈಗಾಗಲೇ ದೆಹಲಿ ಹಾಗೂ ಸುತ್ತ ಮುತ್ತಲ ಪ್ರದೇಶಗಳಲ್ಲಿ ಟೊಮ್ಯಾಟೋ ಮಾರಾಟ ಆರಂಭವಾಗಿದ್ದು ವಾಹನಗಳ ಮೂಲಕ ಮಾರಾಟ ಮಾಡುವ ಕಾರ್ಯ ನಡೆಯುತ್ತಿದೆ.
ಸಹಕಾರ ಒಕ್ಕೂಟವಾದ ಎನ್‌ಸಿಸಿಎಫ್, ಟೊಮೆಟೋಗಳನ್ನು ತನ್ನದೇ ಆದ ಮೊಬೈಲ್ ವ್ಯಾನ್‌ಗಳಲ್ಲಿ ಮಾರಲು ಮುಂದಾಗಿದೆ.
ಸದ್ಯ ಚಿಲ್ಲರೆ ಅಂಗಡಿಗಳಲ್ಲಿ 150 ರು.ಗೆ ಕೇಜಿಯಂತೆ ಟೊಮ್ಯಾಟೋ ಮಾರಾಲಾಗುತ್ತಿದ್ದು, ಶುಕ್ರವಾರದಿಂದ ಇದನ್ನು 90 ರೂ..ಗೆ ಮಾರಾಟ ಮಾಡಲು ಎನ್‌ಸಿಸಿಎಫ್ ನಿರ್ಧರಿಸಿದೆ. ದಿಲ್ಲಿ ಮಾತ್ರವಲ್ಲ, ಲಖನೌ, ಕಾನ್ಪುರ ಹಾಗೂ ಜೈಪುರದಲ್ಲೂ ರಿಯಾಯ್ತಿ ದರದಲ್ಲಿ ಟೊಮೆಟೋ ಮಾರಲಾಗುತ್ತದೆ.
ಆಂಧ್ರಪ್ರದೇಶ, ಕರ್ನಾಟಕ ಮತ್ತು ಮಹಾರಾಷ್ಟ್ರದಿಂದ ಟೊಮ್ಯಾಟೋ ತರಿಸಲಾಗುತ್ತಿದ್ದು. ದಿಲ್ಲಿ ಸೇರಿ ಐದು ರಾಜ್ಯಗಳಲ್ಲಿ ಸಬ್ಸಿಡಿ ದರದಲ್ಲಿ ಟೊಮೆಟೊಗಳನ್ನು ಮಾರಾಟ ಮಾಡಲು ಸರ್ಕಾರ ಸೂಚನೆಯನ್ನು ನೀಡಿದೆ.
ಮುಂದಿನ ದಿನಗಳಲ್ಲಿ ಈ ಯೋಜನೆ ದೇಶದ ಎಲ್ಲೆಡೆ ಬರಲಿ ಎಂಬುದೇ ಎಲ್ಲರ ಆಶಯ.
ಇದನ್ನೂ ಓದಿ: ಮನೆ ಕೊಡಿ ಇಲ್ಲವೇ ವಿಷ ಕೊಡಿ: ಗ್ರಾ.ಪಂ.ಗೆ ಮನವಿ ಮಾಡಿದ ಮಹಿಳೆ