Advertisement
ಜುಲೈ ಆರಂಭದಿಂದಲೇ ಟೊಮೇಟೊ ಧಾರಣೆ ಏರುಮುಖದಲ್ಲಿದೆ. ಇದೇ ಪರಿಸ್ಥಿತಿ ಕನಿಷ್ಠ ಇನ್ನೂ ಒಂದು ತಿಂಗಳವರೆಗೂ ಇರಲಿದೆ. ಟೊಮೇಟೊ ಧಾರಣೆ ಸದ್ಯಕ್ಕೆ ಪ್ರತಿ ಕೆಜಿಗೆ ಕೋಲಾರದ ಮಾರುಕಟ್ಟೆಯಲ್ಲಿಯೇ 120ರಿಂದ 140 ರೂ.ವರೆಗೂ ಇದೆ. ಇಷ್ಟು ಮೊತ್ತದಲ್ಲಿ ಖರೀದಿಸಿ ಅವುಗಳನ್ನು ದೇಶದ ಮೂಲೆ ಮೂಲೆಗೆ ರವಾನಿಸಿ 80 ರೂ. ಕೆಜಿ ದರದಲ್ಲಿ ಪೂರೈಸುವುದು ಅಸಾಧ್ಯ ಎನ್ನುತ್ತಾರೆ ಟೊಮೇಟೊ ಮಾರುಕಟ್ಟೆ ವರ್ತಕರು.
Related Articles
Advertisement
ಮಾರುಕಟ್ಟೆಯಲ್ಲಿನ ಧಾರಣೆಯನ್ನು ಕಂಡು ಹಲವು ರೈತರು ಮತ್ತೆ ಟೊಮೇಟೊ ಬೆಳೆಗೆ ಸಜ್ಜಾಗುತ್ತಿದ್ದಾರೆ. ಈ ಬೆಳೆಗೆ ಸುಮಾರು 3 ತಿಂಗಳು ಬೇಕು. ಈಗಾಗಲೇ ನಾಟಿ ಮಾಡಿರುವ ಬೆಳೆ 15-20 ದಿನಗಳ ಬಳಿಕ ಆರಂಭವಾಗಲಿದೆ. ಹಾಗಾಗಿ ಈಗಿನ ಧಾರಣೆ ಇನ್ನೂ ಒಂದೆರೆಡು ತಿಂಗಳು ಮುಂದುವರಿಯುವ ಸಾಧ್ಯತೆ ಇದೆ. ದೇಶದ ಮತ್ತೂಂದು ದೊಡ್ಡ ಟೊಮೇಟೊ ಮಾರುಕಟ್ಟೆಯಾದ ಮಹಾರಾಷ್ಟ್ರದ ನಾಸಿಕ್ ಮಾರುಕಟ್ಟೆ ಆಗಸ್ಟ್‌ನಲ್ಲಿ ಆರಂಭವಾಗುತ್ತಿತ್ತು. ಆದರೆ ಆ ಭಾಗದಲ್ಲಿ ಮಳೆ ಹೆಚ್ಚಾಗಿರುವುದದರಿಂದ ಈ ಬಾರಿ ನಾಸಿಕ್ ಮಾರುಕಟ್ಟೆ ವಹಿವಾಟು ನಡೆಸುವುದು ಅನುಮಾನ ಎನ್ನಲಾಗುತ್ತಿದೆ.
ಮುಂದಿನ ದಿನಗಳಲ್ಲೂ ಕೋಲಾರದಲ್ಲಿ ನಗಳಲ್ಲಿಯೂ ಕೋಲಾರ ಜಿಲ್ಲೆಯಲ್ಲಿ ಒಣ ಹವೆಯೇ ಮುಂದುವರಿದು ಈಗ ನಾಟಿ ಮಾಡಿದ ಬೆಳೆ ಭರ್ಜರಿ ಫಸಲು ನೀಡಿದಾಗ ಮಾತ್ರವೇ ಧಾರಣೆ ನಿಯಂತ್ರಣಕ್ಕೆ ಬರಬಹುದು. ಕೇವಲ ಶೇ.25ರಷ್ಟು ರೈತರು ಮಾತ್ರವೇ ಟೊಮೇಟೊ ಬೆಳೆದಿದ್ದು, ಈ ಪೈಕಿ ಶೇ.25ರಿಂದ 30ರಷ್ಟು ಮಾತ್ರವೇ ಗುಣಮಟ್ಟದ ಫಸಲು ಸಿಗುವಂತಾದರೆ ಈಗಿನ ಪರಿಸ್ಥಿತಿಯೇ ರುವ ಪರಿಸ್ಥಿತಿಯೇ ಮುಂದಿನ ತಿಂಗಳಲ್ಲೂ ಕಾಣಬಹುದು.
ಜುಲೈಯಲ್ಲಿ 10.50 ಲಕ್ಷ ಕ್ವಿಂಟಾಲ್ ಆವಕವಾಗುವಲ್ಲಿ ಕೇವಲ 10 ಸಾವಿರ ಕ್ವಿಂಟಾಲ್‌ಗಿಂತಲೂ ಕಡಿಮೆ ಪ್ರಮಾಣ ಕೋಲಾರ ಮಾರುಕಟ್ಟೆಗೆ ಅವಕವಾಗುತ್ತಿದೆ. ಮಳೆ ಕಾರಣ ನಾಸಿಕ್ ಮಾರುಕಟ್ಟೆ ಆರಂಭ ತಡವಾಗುತ್ತಿದೆ. ಬಿಳಿ ನೊಣ ಮತ್ತು ಎಲೆ ಮುದುರು ರೋಗದಿಂದ ಟೊಮೇಟೊ ಉತ್ಪನ್ನ ಕಡಿಮೆಯಾಗಿದ್ದು, ಇನ್ನೂ 2-3 ತಿಂಗಳು ಆವಕದಲ್ಲಿ ಸುಧಾರಣೆ ಕಾಣುವುದು ಕಷ್ಟ.
-ವಿಜಯಲಕ್ಷ್ಮೀ, ಕಾರ್ಯದರ್ಶಿ,ಕೋಲಾರ ಎಪಿಎಂಸಿ ಮಾರುಕಟ್ಟೆ – ಕೆ.ಎಸ್.ಗಣೇಶ್