Advertisement
ಮಾರುಕಟ್ಟೆಗೆ ಹೋಗುವಷ್ಟರಲ್ಲಿ ಕೆ.ಜಿ.ಗೆ 100 ರೂ.ಆಗಿರುತ್ತದೆ. ಮದ್ಯವರ್ತಿಗಳ ಹಾವಳಿ ತಪ್ಪಿದರೆ ರೈತರಿಗೆ ಲಾಭದಾಯಕವಾಗುತ್ತದೆ. ರೈತರ ತೋಟಗಳಿಗೆ ನೇರವಾಗಿ ಬಂದು ಖರೀದಿಸಿಕೊಂಡು ಹೋಗುತ್ತಾರೆ. ಅಲ್ಲಿ ಹೋಗುವಷ್ಟರಲ್ಲಿ ಬೆಲೆ ಬದಲಾಗಿರುತ್ತದೆ. ಮಾರುಕಟ್ಟೆಗಳಿಗೆ ರೈತರು ನೇರವಾಗಿ ಹಾಕಿದರೆ ಕಮಿಷನ್ ನೀಡಬೇಕಾಗುತ್ತದೆ.
Related Articles
Advertisement
ಅಪಾರ ಪ್ರಮಾಣದ ಬೆಳೆ ನಾಶ: ಎಪಿಎಂಸಿ ಮಾರುಕಟ್ಟೆಯಲ್ಲಿ 15 ರಿಂದ 20ಕೆ.ಜಿ ತೂಕದ ಒಂದು ಕ್ರೇಟ್‌ಗೆ 2500 ರಿಂದ 3000ರೂ.ಗೆ ಮಾರಾಟವಾಗುತ್ತಿದೆ. ಕಳೆದ ಒಂದು ವಾರದಲ್ಲಿ ಈ ದರ80 ರಿಂದ 100ರೂ.ಕ್ಕೆ ಹೆಚ್ಚಳವಾಗಿದೆ. ಪ್ರಸ್ತುತ ಜಿಲ್ಲೆಯ ಮಳಿಗೆಗಳಲ್ಲಿ 100ರೂ. ರವರೆಗೆ ಮಾರಾಟವಾಗುತ್ತಿದೆ.
ಚಿಕ್ಕಬಳ್ಳಾಪುರ, ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರ ಜಿÇÉೆಯಲ್ಲಿ ಉತ್ತಮ ಮಳೆ ಯಾಗುತ್ತಿದೆ. ಜತೆಗೆ, ವಾತಾವರಣದಲ್ಲಿನ ತಾಪಮಾನ ಕಡಿಮೆಯಾಗಿದೆ. ಇದರಿಂದ ಟೊಮ್ಯಾಟೋ ಬೆಳೆಗೆ ಹೊಡೆತ ಬಿದ್ದಿದೆ. ಕೆಲ ತೋಟಗಳಲ್ಲಿ ನೀರು ನಿಂತಿ ದ್ದು, ಹೆಚ್ಚಿನ ಪ್ರಮಾಣದ ಬೆಳೆನಾಶವಾಗಿದೆ. ಅಲ್ಲದೆ, ಮಹಾ ರಾಷ್ಟ್ರದಿಂದಲೂ ಬೆಂಗಳೂರಿಗೆ ಟೊಮ್ಯಾಟೋ ಆಮದು ಪ್ರಮಾಣ ಕಡಿಮೆಯಿದೆ. ಜಿಲ್ಲೆಯ ಎಪಿಎಂಸಿಗಳಲ್ಲಿ ಒಂದು ಚೀಲ ಟೊಮ್ಯಾಟೊ ಬೆಲೆ 1500 ಏರಿಕೆ ಕಾಣುತ್ತಿದೆ.
ಟೊಮ್ಯಾಟೋ ದರ ಗಗನಕ್ಕೆ: ಜಿಲ್ಲೆಯ ಕಳೆದ ಒಂದು ತಿಂಗಳಿನಿಂದ ಜಿÇÉೆಯಾದ್ಯಂತ ಮಳೆ ಕೊಂಚ ಬಿಡುವುಕೊಟ್ಟಿತ್ತು.ಆದರೆ ಕಳೆದ ಎರಡು ಮೂರು ದಿನಗಳಿಂದ ಹವಾಮಾನ ವೈಪರೀತ್ಯಗಳಿಂದ ಸತತವಾಗಿ ಮಳೆಯಾಗುತ್ತಿದೆ. ಮಳೆ, ಶೀತಗಾಳಿ ಪ್ರಮಾಣ ಹೆಚ್ಚಾದ ಪರಿಣಾಮ ಟೊಮ್ಯಾಟೋ ಬೆಳೆಯ ಇಳುವರಿ ನೆಲ ಕಚ್ಚಿದ್ದು ಬೆಂಗಳೂರು, ರಾಮನಗರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಟೊಮ್ಯಾಟೋ ದರ ಗಗನಕ್ಕೇರಿದೆ.
ಅಂಗಮಾರಿ ಸಂಕಷ್ಟ: ಜಿಲ್ಲೆಯಲ್ಲಿ ಈ ಬಾರಿ ವ್ಯಾಪಾಕವಾಗಿ ಮಳೆಯಾಗುತ್ತಿದೆ. ಶೀತಗಾಳಿ, ಮೋಡ ಮುಸುಕಿದ ವಾತಾವರಣವಿದೆ. ಇದರಿಂದ ಕೆಲವೆಡೆ ಟೊಮ್ಯಾಟೋ ಬೆಳೆಯಲ್ಲಿ ಅಂಗಮಾರಿ ರೋಗ ಕಾಣಿಸಿಕೊಂಡಿದೆ. ಬಹುತೇಕ ತಾಲೂಕುಗಳಲ್ಲಿ ಟೊಮ್ಯಾಟೋ ಬೆಳೆ ಸೊಂಪಾಗಿ ಬೆಳೆದು ಕೊಯ್ಲು ಆರಂಭವಾಗಿದೆ. ಅಂಗ ಮಾರಿ ರೋಗಬಾಧೆ ಗಿಡದ ಎಲೆಗಳು ಕಂದು ಮತ್ತು ಕಪ್ಪು ಬಣ್ಣಕ್ಕೆ ತಿರುಗಿ ಒಣಗುತ್ತಿವೆ. ರಾತ್ರೋರಾತ್ರಿ ಬೆಳೆ ನಾಶವಾಗುತ್ತಿದೆ.
ಕಾಯಿಗಳು ಬಲಿತು ಹಣ್ಣಾಗುವುದಕ್ಕೂ ಮುನ್ನವೇ ಗಿಡದಿಂದ ಉದುರುತ್ತಿದ್ದು ಹೊಲಗಳಲ್ಲಿ ಕೊಳೆತು ಬೆಳೆಯ ಪ್ರಮಾಣ ಕುಸಿತ ಕಂಡಿದೆ. ಗುಣಮಟ್ಟ ಕುಸಿತ: ಕಾರ್ತಿಕ ಮಾಸದ ಸಮಯದಲ್ಲಿ ಟೊಮ್ಯಾಟೋ ಸೇರಿ ಇತರೆ ತರಕಾರಿಗಳಿಗೆ ಹೆಚ್ಚಿನ ಬೇಡಿಕೆ ಬರುತ್ತಿತ್ತು. ಅಕಾಲಿಕ ಮಳೆ ಕಾರಣ ಟೊಮ್ಯಾಟೋ ಫಸಲು ಇಳಿಕೆಯಾಗಿ, ಗುಣಮಟ್ಟವೂ ಕುಸಿದಿದೆ.
“ತರಕಾರಿ ದರಗಳ ಸತತವಾಗಿ ಮಳೆಯಿಂದ ಏರಿಕೆಕಾಣುತ್ತಿದೆ. ಮಾರುಕಟ್ಟೆಯಲ್ಲಿ ಗುಣಮಟ್ಟದ ತರಕಾರಿ ಬರುತ್ತಿಲ್ಲ. ಮಳೆ ಹೀಗೆ ಮುಂದುವರೆದರೆ ಬೆಲೆ ಮತ್ತಷ್ಟು ದುಬಾರಿಯಾಗಲಿದೆ.” – ನಾಗರಾಜು, ತರಕಾರಿ ವ್ಯಾಪಾರಿ.
“ಮಳೆಯಿಂದ ಟೊಮ್ಯಾಟೋಗೆ ಬಾರಿ ಹಾನಿ ಉಂಟಾಗಿದೆ. ಟೊಮ್ಯಾಟೋ ಮಳೆಗೆ ಕೊಳೆಯುತ್ತಿದೆ. ಇದರಿಂದ ದರ ಏರಿಕೆ ಆಗಿದೆ. ಮಳೆ ಮುಂದುವರೆದರೆ ಮತ್ತಷ್ಟು ಬೆಳೆಗೆ ಹಾನಿಯಾಗಲಿದೆ.”
– ನಾರಾಯಣಸ್ವಾಮಿ, ರೈತರು.