Advertisement

ಡಯಾಬಿಟಿಸ್‍ ಪಥ್ಯ : ನಿತ್ಯ ಸೇವಿಸಿ ಟೊಮೆಟೊ ಜ್ಯೂಸ್

07:34 PM Mar 17, 2021 | Team Udayavani |

ತಮ್ಮ ಆರೋಗ್ಯದ ದೃಷ್ಟಿಯಿಂದ ಡಯಾಬಿಟಿಸ್‍ನ (ಮಧುಮೇಹ) ಸಮತೋಲನ ಕಾಪಾಡಿಕೊಳ್ಳುವುದು ಅತಿ ಮುಖ್ಯ. ಸಕ್ಕರೆ ಕಾಯಿಲೆ ಎಂದು ಕರೆಯಲ್ಪಡುವ ಡಯಾಬಿಟಿಸ್ ಇರುವವರು ಕೆಲವೊಂದು ಪಥ್ಯ ಮಾಡಬೇಕಾಗುವುದು ಅಗತ್ಯ.

Advertisement

ಡಯಾಬಿಟಿಸ್ ಗಾಬರಿ ಪಡಬೇಕಾದಂತಹ ರೋಗವಲ್ಲ, ಹಾಗಂತಾ ಅಲಕ್ಷಿಸುವ ಕಾಯಿಲೆಯೂ ಅಲ್ಲ. ವೈದ್ಯರ ಸಲಹೆ ಜತೆಗೆ ಕೆಲವೊಂದು ಮನೆಮದ್ದುಗಳನ್ನು ಅನುಸರಿಸುವುದರಿಂದ ಸಕ್ಕರೆ ಕಾಯಿಲೆಯ ನಡುವೆಯೇ ಸುಖಕರ ಹಾಗೂ ಆರೋಗ್ಯಯುತ ಜೀವನ ನಡೆಸಬಹುದು. ಹಾಗಾದರೆ ಮಧುಮೇಹ ಹೊಂದಿರುವವರು ಪಾಲಿಸಬೇಕಾದ ಪಥ್ಯ (ಡಯಟ್) ಏನು?

ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರು ಕೆಲವೊಂದು ಕಟ್ಟುನಿಟ್ಟಿನ ಪಥ್ಯ ಮಾಡಲೇಬೇಕು. ಅವುಗಳಲ್ಲಿ ಟೊಮೆಟೊ ಜ್ಯೂಸ್ ಸೇವನೆ ಕೂಡ ಒಂದು. ನಾವು ನಿತ್ಯ ಅಡುಗೆಗೆ ಉಪಯೋಗಿಸುವ ಟೊಮೆಟೊದಲ್ಲಿ ಸಾಕಷ್ಟು ಪ್ರಮಾಣದ ಖನಿಜಗಳು ಮತ್ತು ಜೀವಸತ್ವಗಳು ಇವೆ. ಇದರ ಜ್ಯೂಸ್‍ನಲ್ಲಿ ಪೌಷ್ಟಿಕಾಂಶಯುಕ್ತ ಮತ್ತು ಕೊಬ್ಬು ಮತ್ತು ಕ್ಯಾಲೋರಿ ಕಡಿಮೆ ಪ್ರಮಾಣದಲ್ಲಿರುತ್ತದೆ. ಒಂದು ಲೋಟ ಟೊಮೆಟೊ ಜ್ಯೂಸ್‍ನಲ್ಲಿ ಸಾಕಷ್ಟು ಪ್ರಮಾಣದ ವಿಟಮಿನ್ ಬಿ 1, ಬಿ 2, ಬಿ 3, ಬಿ 5, ಬಿ 6, ಕೆ, ಪೊಟ್ಯಾಸಿಯಮ್ ಸಮ್ಮಿಲನಗೊಂಡಿರುತ್ತವೆ.

ಮತ್ತೊಂದು ಮಹತ್ವಕಾಯಿ ಅಂಶ ಏನಂದರೆ ಒಂದು ಗ್ಲಾಸ್ ಟೊಮೆಟೊ ಜ್ಯೂಸ್ ನಮ್ಮ ದೇಹಕ್ಕೆ ಅಗತ್ಯವಿರುವ ದೈನಂದಿನ ವಿಟಮಿನ್ ‘ಸಿ’ ಯ ಶೇಕಡಾ 74 ರಷ್ಟು ಪ್ರಮಾಣವನ್ನು ಹೊಂದಿರುತ್ತದೆ. ಈ ಕಾರಣಕ್ಕಾಗಿ ಉತ್ತಮ ಆರೋಗ್ಯಕ್ಕಾಗಿ ನಮ್ಮ ದೈನಂದಿನ ಆಹಾರ ಕ್ರಮದಲ್ಲಿ ಟೊಮೆಟೊ ಜ್ಯೂಸ್‍ನ್ನು ಸೇರಿಸಬೇಕು ಎನ್ನುತ್ತಾರೆ ತಜ್ಞವೈದ್ಯರು.

ಮಧುಮೇಹ ಹೊಂದಿರುವವರಿಗೆ ಹೇಗೆ ಸಹಕಾರಿ ?

  • ಟೊಮೆಟೊ ಜ್ಯೂಸ್ ತೂಕ ಕಡಿಮೆ ಮಾಡಿಕೊಳ್ಳಲು ಹಾಗೂ ಬಿಪಿ ಸಮತೋಲನದಲ್ಲಿಡಲು ಸಹಕಾರಿಯಾಗುತ್ತದೆ.
  • ಇದರಲ್ಲಿರುವ ರೋಗ ನಿರೋಧಕ ಶಕ್ತಿಯಿಂದ ನಮ್ಮ ದೇಹದಲ್ಲಿರುವ ವಿಷಕಾರಿ ಅಂಶಗಳನ್ನ ಹೊರಹಾಕುತ್ತದೆ. ಇದರ ಜತೆಗೆ ಊರಿಯುತ ಕಡಿಮೆ ಮಾಡುತ್ತದೆ.
  • ಟೊಮೆಟೊ ಜ್ಯೂಸ್ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸರಿಯಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ!
  • ಟೈಪ್ -2 ಮಧುಮೇಹ ಇರುವವರಲ್ಲಿ ಹೃದಯ ಸಂಬಂಧಿ ಅಪಾಯ ಕಡಿಮೆ ಮಾಡಲು ಟೊಮೆಟೊ ಜ್ಯೂಸ್ ಸಹಾಯ ಮಾಡುತ್ತದೆ.
  • ಮೂರು ವಾರಗಳವರೆಗೆ ಟೊಮೆಟೊ ಜ್ಯೂಸ್ ಕುಡಿಯುವುದರಿಂದ ಮಧುಮೇಹ ರೋಗ ಹೊಂದಿರುವವರ ರಕ್ತ ತೆಳುವಾಗುತ್ತದೆ.
  • ಟೊಮೆಟೊ ಜ್ಯೂಸ್ ಪ್ಲೇಟ್ಲೆಟ್ ಒಟ್ಟುಗೂಡಿಸುವಿಕೆ ಮತ್ತು ರಕ್ತ ಹೆಪ್ಪುಗಟ್ಟುವ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.
  • ಜೀರ್ಣಕ್ರಿಯೆಯನ್ನು ಕ್ರಮಬದ್ಧಗೊಳಿಸುವಲ್ಲಿ ಬಹುಮುಖ್ಯ ಪಾತ್ರವಹಿಸುವ ನಾರು ಪದಾರ್ಥ ಟೊಮೆಟೊ ಜ್ಯೂಸ್ ಹೊಂದಿರುತ್ತದೆ.
  • ಟೊಮೆಟೊ ಜ್ಯೂಸ್‌ನಲ್ಲಿರುವ ಬೀಟಾ ಕ್ಯಾರೋಟಿನ್ ಮತ್ತು ವಿಟಮಿನ್ ‘ಸಿ’ ಅಂಶವು ಕಣ್ಣಿನ ಆರೋಗ್ಯಕ್ಕೆ ಸಹಾಯ ಮಾಡುತ್ತದೆ.
Advertisement

ಬೇಕಾಗುವ ಪದಾರ್ಥಗಳು  : ಟೆಮೆಟೊ ಸೌತೆಕಾಯಿ, ಬೆಳ್ಳುಳ್ಳಿ, ಮೊಸರು, ಪುದೀನ, ಉಪ್ಪು

ಟೊಮೆಟೊ ಜ್ಯೂಸ್ ತಯಾರಿಸುವುದು ಹೇಗೆ ?

ಬೆಳ್ಳುಳ್ಳಿ, ಸೌತೆಕಾಯಿ ಮತ್ತು ಟೊಮೆಟೊಗಳನ್ನು ಒಟ್ಟಿಗೆ ಮಿಶ್ರಣ ಮಾಡಬೇಕು. ನಂತರ ಮೊಸಲು ಬೆರೆಸಬೇಕು. ನಂತರ ಸ್ವಲ್ಪ ಪುದೀನ್ ಎಲೆಗಳನ್ನು ಹಾಕಬೇಕು. ಅಗತ್ಯವಿದ್ದರೆ ಐಸ್ ಕ್ಯೂಬ್ ತುಂಡನ್ನು ಬೆರೆಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next