Advertisement

ಬೆಲೆ ಕುಸಿತದಿಂದ ಟೊಮೆಟೋ ಬೆಳೆಗಾರ ಕಂಗಾಲು

02:39 PM May 24, 2023 | Team Udayavani |

ರಾಮನಗರ: ಜಿಲ್ಲೆಯ ಪ್ರಮುಖ ತರಕಾರಿ ಬೆಳೆಗಳಲ್ಲಿ ಒಂದೆನಿಸಿರುವ ಟೊಮೆಟೋ ಮಾರುಕಟ್ಟೆಯಲ್ಲಿ ಬೆಲೆ ಏರಿಳಿತಕ್ಕೆ ಸಿಲುಕಿದೆ. ಮಾರುಕಟ್ಟೆಯ ಬೆಲೆ ಜೂಜಾಟ ದಿಂದ ಬೆಳೆಗಾರ ಹೈರಾಣಾಗಿದ್ದು, ಟೊಮೆಟೋ ಬೆಳೆದ ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ.

Advertisement

ಟೊಮೆಟೋ ಬೆಲೆ ಸ್ಥಿರತೆ ಇಲ್ಲದಂತಾಗಿದ್ದು, ಒಂದು ದಿನ ಟೊಮೆಟೋಗೆ ಬಂಪರ್‌ ಬೆಳೆ ಬಂದರೆ ಮತ್ತೆ ಕೆಲವೇ ದಿನಗಳಲ್ಲಿ ಅದರ ಬೆಲೆ ಪಾತಾಳಕ್ಕೆ ಕುಸಿ ಯುತ್ತಿದೆ. ಬೆಲೆ ಏರಿಳಿತರ ರೈತರ ಪಾಲಿಗೆ ಮಾರ ಕ ವಾಗಿದ್ದು, ಒಳ್ಳೆ ಬೆಲೆ ಸಿಗುತ್ತಿದೆ ಎಂದು ರೈತರು ಖುಷಿ ಪಟ್ಟ ಕೆಲವೇ ದಿನಗಳಲ್ಲಿ ಮಾರುಕಟ್ಟೆಗೆ ಸಾಗಾಣಿಕೆ ಮಾಡಿ ದರೆ ಮಾಡಿದ ಖರ್ಚು ಸಿಗದೆ ರೈತರು ಟೊಮೆಟೋವನ್ನು ರಸ್ತೆ ಬದಿಗೆ ಸುರಿದು ಹೋಗುವಂತಾಗಿದೆ.

ಟೊಮೆಟೋ ರಸ್ತೆಗೆ ಸುರಿದ ರೈತ: ಭಾನುವಾರ ಟೊಮೆ ಟೋಗೆ ಉತ್ತಮ ಬೆಲೆ ಸಿಗದ ಕಾರಣ ಕಂಗಾ ಲಾದ ಟೊಮೆಟೋ ಬೆಳೆಗಾರರೊಬ್ಬರು ರಸ್ತೆ ಬದಿ ಯಲ್ಲೇ ಟೊಮೆಟೋವನ್ನು ಸುರಿದು ಹೋಗಿದ್ದಾರೆ. ಶನಿವಾರ ಮತ್ತು ಭಾನುವಾರ ಮಾರುಕಟ್ಟೆಯಲ್ಲಿ 22 ಕೆ.ಜಿ. ತೂಕದ ಒಂದು ಕ್ರೇಟ್‌ ಟೊಮೆಟೋ ಬೆಲೆ 50ರಿಂದ 150 ರೂ. ವರೆಗೆ ಮಾರಾಟ ವಾಗುತ್ತಿದ್ದು, ಈ ಬೆಲೆ ಸಾಕಾಣಿಗೆಗೂ ಸಾಲುವುದಿಲ್ಲ ಎಂದು ಆಕ್ರೋಶ ಗೊಂಡ ರೈತ ಟೊಮೆಟೋವನ್ನು ರಸ್ತೆ ಬದಿಯಲ್ಲಿ ಸುರಿದು ಹೋಗಿದ್ದಾನೆ.

ಮಾರುಕಟ್ಟೆಯಲ್ಲಿ ಬೇಡಿಕೆ ಇಲ್ಲ: ಕಳೆದ ಒಂದು ತಿಂಗಳಿಂದ ಮಾರುಕಟ್ಟೆಯಲ್ಲಿ ಬೆಲೆ ಏರಿಳಿತವಾ ಗುತ್ತಲೇ ಇದ್ದು, ಬೆಲೆ ಕುಸಿತದಿಂದ ಕಂಗಾಲಾಗಿರುವ ರೈತರು ಟೊಮೆಟೋ ಹಣ್ಣುಗಳನ್ನು ಕಿತ್ತು ಮಾರುಕಟ್ಟೆಗೆ ತಂದು ಮಾರಾಟ ಮಾಡು ವುದಕ್ಕೆ ತಗಲುವ ಖರ್ಚು ಸಿಗದಾಗಿದೆ. ಗಿಡದಲ್ಲಿ ಹಾಗೆಯೇ ಬಿಟ್ಟರೆ ಕೂಲಿ ಹಾಗೂ ಸಾಗಾಣಿಕೆ ವೆಚ್ಚವಾದರೂ ಉಳಿಯುತ್ತದೆ ಎಂದು ಗಿಡದಲ್ಲೇ ಬಿಟ್ಟು ಬಿಡುತ್ತಿದ್ದಾರೆ. ಇನ್ನು ಕೆಲವರು ಧೈರ್ಯ ಮಾಡಿ ತಂದರೂ ಮಾರುಕಟ್ಟೆ ಯಲ್ಲಿ ಬೇಡಿಕೆ ಇಲ್ಲದೆ ರಸ್ತೆ ಬದಿಯಲ್ಲಿ ರಾಶಿ ರಾಶಿ ಟೊಮೆಟೋ ಸುರಿದು ಹೋಗುತ್ತಿದ್ದಾರೆ.

ಬೆಳೆಯಿಂದ ವಿಮುಖರಾಗುತ್ತಿರುವ ರೈತರು: ಟೊಮೆ ಟೋ ಗೆ ಸಮರ್ಪಕ ಬೆಲೆ ಸಿಗದಿರುವುದು, ಬೆಳೆ ಬೆಳೆಯಲು ಸಾಕಷ್ಟು ಸವಾಲುಗಳು ಹೀಗೆ ಪದೇ ಪದೆ ಟೊಮೆಟೋ ಬೆಳೆದು ಕೈ ಸುಟ್ಟುಕೊಳ್ಳುತ್ತಿರುವ ರೈತರು, ಟೊಮೆಟೋ ಬೆಳೆ ಯುವುದೇ ಬೇಡ ಎಂದು ಸುಮ್ಮನಾಗುತ್ತಿದ್ದಾರೆ. ಟೊಮೆಟೋ ಬೆಳೆ ಏರಿಳಿತಕ್ಕೆ ಕಡಿ ವಾಣ ಹಾಕುವ ನಿಟ್ಟಿನಲ್ಲಿ ಸಂಬಂಧಿಸಿದವರು ಗಮನ ‌ಹರಿಸಬೇಕಿದೆ ಎಂದು ರೈತರ ಆಗ್ರಹವಾಗಿದೆ.

Advertisement

ಇಳುವರಿ ಹೆಚ್ಚಳವೇ ಕಾರಣ: ಟೊಮೆಟೋ ಬೆಲೆ ಕುಸಿತಕ್ಕೆ ಇಳುವರಿ ಹೆಚ್ಚಳವಾಗಿರುವುದು ಮುಖ್ಯ ಕಾರಣವಾಗಿದೆ. ಜಿಲ್ಲೆಯ ಚನ್ನಪಟ್ಟಣ ತಾಲೂಕಿನಲ್ಲಿ ನೀರಾವರಿ ಸೌಲಭ್ಯವಿರುವ ಕಾರಣ ರೈತರು ಹೆಚ್ಚಿನ ಪ್ರಮಾಣದಲ್ಲಿ ಟೊಮೆಟೋ ಬೆಳೆ ಬೆಳೆದಿದ್ದಾರೆ. ಇದರೊಂದಿಗೆ ಕೋಲಾರ ಸೇರಿದಂತೆ ಹೊರ ಜಿಲ್ಲೆಯ ಟೊಮೆಟೋಗಳು ಹೆಚ್ಚಿನ ಪ್ರಮಾಣದಲ್ಲಿ ರಾಮನಗರ ಮಾರುಕಟ್ಟೆಗೆ ಬರುತ್ತಿರುವ ಹಿನ್ನೆಲೆಯಲ್ಲಿ ಟೊಮೆಟೋ ಬೆಲೆ ಕುಸಿದಿದೆ ಎಂದು ಮಾರುಕಟ್ಟೆ ವರ್ತಕರು ಮಾಹಿತಿ ನೀಡಿದ್ದಾರೆ.

ಮಾಡಿದ ಖರ್ಚು ಸಿಗುತ್ತಿಲ್ಲ : ರೋಗಬಾಧೆ, ಮಳೆ, ಬಿಸಿಲಿನಿಂದ ಬೆಳೆ ಹಾನಿ, ಕಾಡುಪ್ರಾಣಿಗಳು ಹಾವಳಿ ಹೀಗೆ ಸಾಲು ಸಾಲು ಸವಾಲುಗಳ ನಡುವೆ ರೈತರು ಸಾಲ ಸೋಲ ಮಾಡಿ ಕಟ್ಟಪಟ್ಟು ಟೊಮೆಟೋ ಬೆಳೆಯನ್ನು ಬೆಳೆಯುತ್ತಿದ್ದಾರಾದರೂ, ಮಾರುಕಟ್ಟೆಯಲ್ಲಿ ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದ ಪರಿಣಾಮ ರೈತರಿಗೆ ಲಾಭವಿರಲಿ, ಬೆಳೆ ಬೆಳೆಯಲು ಮಾಡಿದ ಕನಿಷ್ಠ ಖರ್ಚು ಸಹ ಸಿಗದಾಗಿದೆ. ಒಂದು ಎಕರೆ ಪ್ರದೇಶಲ್ಲಿ ಟೊಮೆಟೋ ಬೆಳೆಯಲು 1 ಲಕ್ಷ ರೂ.ನಿಂದ 1.25 ಲಕ್ಷ ರೂ. ವರೆಗೆ ಖರ್ಚು ಬರುತ್ತಿದ್ದು, ಬೆಲೆ ಕುಸಿತದಿಂದ ರೈತರು ಬೆಳೆಗೆ ಮಾಡಿದ ಖರ್ಚಿನ ಅರ್ಧ ಭಾಗದಷ್ಟೂ ಆದಾಯ ಬರದಂತಾಗಿದೆ.

– ಸು.ನಾ.ನಂದಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next