Advertisement

ಇಲ್ಲಿ ವಿಮಾನ ಟಿಕೆಟ್ ಬುಕ್ ಮಾಡಿದರೆ 1.5 ಕೆಜಿ ಟೊಮ್ಯಾಟೋ ಫ್ರೀ ಕೊಡ್ತಾರಂತೆ

01:03 PM Jul 14, 2023 | Team Udayavani |

ಚೆನ್ನೈ: ಇತ್ತೀಚಿನ ದಿನಗಳಲ್ಲಿ ಟೊಮ್ಯಾಟೋ ಹೆಚ್ಚು ಪ್ರಚಲಿತದಲ್ಲಿರುವ ವಿಷಯವಾಗಿದೆ, ಪ್ರತಿಯೊಬ್ಬರೂ ದಿನಕ್ಕೆ ಒಂದು ಭಾರಿಯಾದರು ಟೊಮ್ಯಾಟೋ ವಿಚಾರ ತೆಗೆದೇ ತೆಗೆಯುತ್ತಾರೆ ಕಾರಣ ಗಗನಕ್ಕೆ ಏರಿದ ಟೊಮ್ಯಾಟೋ ಬೆಲೆ.

Advertisement

ಕೆಲವು ಪ್ರದೇಶಗಳಲ್ಲಿ ಟೊಮ್ಯಾಟೋ ಕೆಜಿಗೆ 200 ರೂ ಆಗಿದ್ದರೆ ಇನ್ನೂ ಕೆಲವು ಕಡೆಗಳಲ್ಲಿ 150 ರೂ ಇದೆ ಆದರೆ ಇದನ್ನೇ ಬಂಡವಾಳವನ್ನಾಗಿಸಿ ಮಧುರೈಯಲ್ಲಿರುವ ವಿಮಾನ ಟಿಕೆಟ್ ಬುಕ್ ಮಾಡುವ ಸಂಸ್ಥೆಯೊಂದು ಪ್ರಯಾಣಿಕರಿಗೆ ಟೊಮ್ಯಾಟೋ ಕೊಡುವ ಆಫರ್ ನೀಡಿದೆ ನೀಡಿದೆ.

ಅಂದಹಾಗೆ ಮಧುರೈ ನ ಟ್ರಾವೆಲಿಂಗ್ ಏಜೆನ್ಸಿ ಇಲ್ಲಿ ದೇಶಿಯ ವಿಮಾನ ಟಿಕೆಟ್ ಬುಕ್ ಮಾಡಿದರೆ ಅವರಿಗೆ ಒಂದು ಕೆಜಿ ಟೊಮ್ಯಾಟೋ ಹಾಗೂ ಅಂತಾರಾಷ್ಟ್ರೀಯ ವಿಮಾನ ಟಿಕೆಟ್ ಬುಕ್ ಮಾಡಿದವರಿಗೆ ಒಂದೂವರೆ ಕೆಜಿ ಟೊಮ್ಯಾಟೋ ಕೊಡುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಮಾಡಲು ತೊಡಗಿದೆ.

ಟ್ರಾವೆಲಿಂಗ್ ಏಜೆನ್ಸಿ ಮಾಲೀಕನ ಪ್ರಕಾರ ಟೊಮ್ಯಾಟೋ ಆಫರ್ ನೀಡಿದ ಬಳಿಕ ಜನರಿಂದ ಹೆಚ್ಚಿನ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಟಿಕೆಟ್ ಬುಕಿಂಗ್ ಮಾಡಲು ಕರೆ ಮಾಡಿ ಬರುತ್ತಿದ್ದಾರೆ ಎಂದು ಹೇಳಿದ್ದಾರೆ.

ಏನೇ ಆಗಲಿ ಟೊಮ್ಯಾಟೋ ಬೆಲೆ ಏರಿಕೆ ಜನ ಸಾಮಾನ್ಯರಿಗೆ ಹೊಡೆತ ಬಿದ್ದಿರುವು ಹೌದು ಆದರೆ ಇದನ್ನೇ ಬಂಡವಾಳ ಮಾಡಿಕೊಂಡು ಇತರ ರೀತಿಯಲ್ಲಿ ಯಶಸ್ಸು ಪಡೆಯುವವರು ತುಂಬಾ ಜನ ಇರುತ್ತಾರೆ.

Advertisement

ಇದನ್ನೂ ಓದಿ: ವರ್ಷದಲ್ಲಿ 12 ಬಾರಿ ಹಾವಿನ ಕಡಿತಕ್ಕೊಳಗಾದ ಮಹಿಳೆ… ಬದುಕುಳಿದಿದ್ದೇ ವಿಸ್ಮಯ

Advertisement

Udayavani is now on Telegram. Click here to join our channel and stay updated with the latest news.

Next