Advertisement

ಮಕ್ಕಳಲ್ಲಿ ಕಾಣಿಸಿಕೊಳ್ಳುವ ಟೊಮ್ಯಾಟೊ ಜ್ವರ ಸೋಂಕು ನಿವಾರಣೆಗೆ “ಈ ಕ್ರಮ” ಅನುಸರಿಸಿ

03:22 PM May 14, 2022 | Team Udayavani |

ಮಣಿಪಾಲ: ಐದು ವರ್ಷದೊಳಗಿನ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುವ ಟೊಮ್ಯಾಟೊ ಜ್ವರ ಅಪರೂಪದ ವೈರಸ್ ಆಗಿದೆ. ಆದರೆ ಇದು ವೈರಲ್ ಜ್ವರವೇ ಅಥವಾ ಡೆಂಗ್ಯೂ, ಚಿಕುನ್ ಗುನ್ಯಾ ಜ್ವರವೇ ಎಂಬುದು ಇನ್ನೂ ದೃಢಪಟ್ಟಿಲ್ಲ. ಈ ಜ್ವರ ಕಾಣಿಸಿಕೊಂಡ ಮಕ್ಕಳಲ್ಲಿ ಕೆಂಪು ದದ್ದು, ಚರ್ಮದ ಮೇಲೆ ಗುಳ್ಳೆ ಹಾಗೂ ನಿರ್ಜಲೀಕರಣ ಸಮಸ್ಯೆ ಪತ್ತೆಯಾಗಿದೆ ಎಂದು ವರದಿ ತಿಳಿಸಿದೆ.

Advertisement

ಟೊಮ್ಯಾಟೊ ಜ್ವರ ಹೆಸರು ಬಂದಿದ್ದು ಹೇಗೆ?

ಜ್ವರ ಕಾಣಿಸಿಕೊಂಡ ಮಕ್ಕಳ ದೇಹದಲ್ಲಿ ಟೊಮ್ಯಾಟೊ ಆಕಾರದ ಗುಳ್ಳೆಗಳು ಏಳುವುದರಿಂದ ಇದಕ್ಕೆ ಟೊಮ್ಯಾಟೊ ಜ್ವರ ಎಂದು ಹೆಸರಿಡಲಾಗಿದೆ. ಈ ಜ್ವರ ಕೇರಳದ ಕೊಲ್ಲಂನಲ್ಲಿ ಹೆಚ್ಚು ಪ್ರಕರಣ ಪತ್ತೆಯಾಗಿದೆ. ಆದರೂ ಟೊಮ್ಯಾಟೊ ಜ್ವರ ಕೇರಳದ ಇತರ ಭಾಗಗಳಿಗೂ ಹರಡುವ ಸಾಧ್ಯತೆ ಇದ್ದಿರುವುದಾಗಿ ಆರೋಗ್ಯ ಅಧಿಕಾರಿಗಳು ಎಚ್ಚರಿಸಿದ್ದಾರೆ. ಈ ನಿಗೂಢ ರೋಗವನ್ನು ಕೈ, ಕಾಲು ಮತ್ತು ಬಾಯಿ ರೋಗ ಎಂದು ಕರೆಯಲಾಗುತ್ತದೆ ಎಂದು ವರದಿ ವಿವರಿಸಿದೆ.

ಇದನ್ನೂ ಓದಿ:ಐಪಿಎಲ್ ಗೆ ವಿದಾಯ ಹೇಳಿದ ಚೆನ್ನೈ ಆಟಗಾರ ಅಂಬಾಟಿ ರಾಯುಡು; ಕೆಲ ಕ್ಷಣದಲ್ಲೇ ಟ್ವೀಟ್ ಡಿಲೀಟ್!

ಟೊಮ್ಯಾಟೊ ಜ್ವರ: ಸೋಂಕು ನಿವಾರಣೆಗೆ ಈ ಕ್ರಮ ಅನುಸರಿಸಿ

Advertisement

1)ಟೊಮ್ಯಾಟೊ ಜ್ವರಕ್ಕೆ ತುತ್ತಾದ ಮಕ್ಕಳಿಗೆ ಅತೀ ಹೆಚ್ಚು ನೀರನ್ನು ಕುಡಿಸಬೇಕು. ಅದು ಕುದಿಸಿ ಆರಿಸಿದ ನೀರನ್ನು ನೀಡಬೇಕು.

2)ಕೆಂಪು ಗುಳ್ಳೆ ಅಥವಾ ದದ್ದುಗಳನ್ನು ಯಾವುದೇ ಕಾರಣಕ್ಕೂ ತಿಕ್ಕಿ ಗಾಯ ಮಾಡಿಕೊಳ್ಳಬೇಡಿ.

3)ಈ ಜ್ವರದಿಂದ ದೂರು ಉಳಿಯಲು ಹೆಚ್ಚು ಶುದ್ಧತೆ ಕಾಪಾಡಿಕೊಳ್ಳಬೇಕು. ರೋಗದ ಸೋಂಕು ಹರಡುವುದನ್ನು ತಪ್ಪಿಸಲು ಸೋಂಕಿಗೆ ಒಳಗಾದ ವ್ಯಕ್ತಿಯು ಬಳಸಿದ ಪಾತ್ರೆ, ಬಟ್ಟೆ ಮತ್ತು ಇತರ ವಸ್ತುಗಳನ್ನು ಸ್ಯಾನಿಟೈಸ್ ಮಾಡಬೇಕು.

4) ಉಗುರು ಬೆಚ್ಚಗಿನ ನೀರಿನಲ್ಲಿ ರೋಗಾಣು ನಿರೋಧಕ ಬೆರೆಸಿ ಸ್ನಾನ ಮಾಡಬೇಕು.

5)ಒಂದು ವೇಳೆ ಇಂತಹ ಜ್ವರದ ರೋಗ ಲಕ್ಷಣ ಕಂಡು ಬಂದಲ್ಲಿ, ಅದನ್ನು ನಿರ್ಲಕ್ಷಿಸಬೇಡಿ, ಕೂಡಲೇ ವೈದ್ಯರಲ್ಲಿ ಹೋಗಿ ತಪಾಸಣೆ ಮಾಡಿಸಿಕೊಳ್ಳಿ.

Advertisement

Udayavani is now on Telegram. Click here to join our channel and stay updated with the latest news.

Next